Advertisement

ಬಂಟ್ವಾಳ : 15 ವರ್ಷ ಪ್ರಾಯದ ಕಾಡೆಮ್ಮೆ ಶವ ಪತ್ತೆ

05:15 PM Jun 20, 2021 | Team Udayavani |

ಬಂಟ್ವಾಳ: ಬಂಟ್ವಾಳ ತಾಲೂಕಿನ ಕುರ್ನಾಡು ಗ್ರಾಮದ ಕಲ್ಲಮಂಚದಲ್ಲಿ ಸುಮಾರು 15 ವರ್ಷ ಪ್ರಾಯದ ಕಾಡೆಮ್ಮೆಯೊಂದು ಸತ್ತಿದ್ದು, ಪಶು ವೈದ್ಯಾಧಿಕಾರಿಗಳು ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮಂಗಳೂರು ವಲಯ ಅರಣ್ಯ ಇಲಾಖೆಯು ಕಾಡಮ್ಮೆಯ ಶವವನ್ನು ಇಲಾಖಾ ಕಾನೂನು ಕ್ರಮದಂತೆ ವಿಲೇವಾರಿಗೊಳಿಸಿದೆ.

Advertisement

ಸಾರ್ವಜನಿಕರು ನೀಡಿದ ಮಾಹಿತಿಯಂತೆ ಮಂಗಳೂರು ವಲಯ ಅರಣ್ಯ ಇಲಾಖೆಯು ಸ್ಥಳಕ್ಕೆ ತೆರಳಿದ್ದು, ಸರಕಾರಿ ಪಶು ವೈದ್ಯಾಧಿಕಾರಿ ಅಶೋಕ್ ಅವರು ಮರಣೋತ್ತರ ಪರೀಕ್ಷೆ ನಡೆಸಿದರು.

ಮಂಗಳೂರು ವಿಭಾಗದ ಉಪಅರಣ್ಯ ಸಂರಕ್ಷಣಾಧಿಕಾರಿ ವಿ.ಕರಿಕಾಲನ್ ಅವರ ಮಾರ್ಗದರ್ಶನದಲ್ಲಿ ಮಂಗಳೂರು ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುಬ್ರಹ್ಮಣ್ಯ ರಾವ್ ಅವರ ಸಮಕ್ಷಮದಲ್ಲಿ ಮಂಗಳೂರು ವಲಯದ ವಲಯ ಅರಣ್ಯಾಧಿಕಾರಿ ಪಿ.ಶ್ರೀಧರ್ ನೇತೃತ್ವದಲ್ಲಿ ಮಂಗಳೂರು ವಲಯದ ಸಿಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಕಾಡೆಮ್ಮೆಯು ಮೇಲ್ನೋಟಕ್ಕೆ ಸ್ವಾಭಾವಿಕವಾಗಿ ಸತ್ತಿರುವಂತೆ ಕಂಡುಬಂದಿದ್ದು, ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಕಾಡೆಮ್ಮೆ ಮರಣದ ನಿಖರ ಕಾರಣ ತಿಳಿಸಲಾಗುವುದು ಎಂದು ಮಂಗಳೂರು ವಲಯ ಅರಣ್ಯಾಧಿಕಾರಿ ಪಿ.ಶ್ರೀಧರ್ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next