Advertisement
ಕೇವಲ ಒಂದು ವಾರದ ಅಂತರದಲ್ಲಿ ಬಂಟ್ವಾಳದ ಎಲ್ಲ 59 ಗ್ರಾಮಗಳ ಪೈಕಿ 56 ಗ್ರಾಮಗಳನ್ನು ತಲುಪಿ ಶಕ್ತಿ ಕೇಂದ್ರದ ಪ್ರಮುಖರ ಜತೆ ಸಮಾಲೋಚನೆಯನ್ನು ನಡೆಸಿದ್ದರು. ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ಪ್ರಧಾನ ಕಾರ್ಯದರ್ಶಿಗಳಾದ ಡೊಂಬಯ ಅರಳ, ರವೀಶ್ ಶೆಟ್ಟಿ ಕರ್ಕಳ, ಜಿಲ್ಲೆ, ಕ್ಷೇತ್ರದ ಎಲ್ಲಾ ಪದಾಧಿಕಾರಿಗಳು, ಗ್ರಾಮದ ಪ್ರಭಾರಿ ಸೇರಿದಂತೆ ಎಲ್ಲಾ ಕಾರ್ಯಕರ್ತರ ಪಾಲ್ಗೊಳ್ಳುವಿಕೆಯಲ್ಲಿ ಈ ಕಾರ್ಯ ಅತ್ಯಂತ ಯಶಸ್ವಿಯಾಗಿ ನಡೆದಿದೆ ಎಂದರು.
ಅವರೇನೇ ಹೇಳಿದರೂ ಕಾರ್ಯಕರ್ತರು ಮಾತ್ರ ರಾಜೇಶ್ ನಾೖಕ್ ಅವರೇ ತಮ್ಮ ಅಭ್ಯರ್ಥಿ ಎಂದು ನಿರ್ಧರಿಸಿ ಬಿಟ್ಟಿದ್ದರು. ಅದಕ್ಕೆ ಪೂರಕ ಎಂಬಂತೆ ಶಕ್ತಿಯ ಕೇಂದ್ರದ ಪ್ರಮುಖರ ಅಂತಿಮ ಸಭೆಗಳ ಸಂದರ್ಭ ಪಕ್ಷದ ವರಿಷ್ಠರು ಕೂಡ ಬಂಟ್ವಾಳ ಕ್ಷೇತ್ರಕ್ಕೆ ರಾಜೇಶ್ ನಾೖಕ್ ಅವರೇ ಅಭ್ಯರ್ಥಿ ಎಂದು ಘೋಷಣೆ ಮಾಡಿತ್ತು. ಪಕ್ಷ ಸಂಘಟನೆಗಾಗಿ ದುಡಿದ ಕಾರಣಕ್ಕಾಗಿಯೇ ಅವರು ಸರ್ವರ ಅಭ್ಯರ್ಥಿಯಾಗಿ ಮೂಡಿಬಂದಿದ್ದರು ಎಂದರು. ಪ್ರತಿ ಗ್ರಾಮಗಳಿಗೆ ತೆರಳಿ ಕಾರ್ಯಕರ್ತರ ಬೇಡಿಕೆಗಳನ್ನು ಆಲಿಸಿ ನಾವು ಬಂಟ್ವಾಳದಲ್ಲಿ ಪಕ್ಷವನ್ನು ಗಟ್ಟಿಗೊಳಿಸೋಣ. ಮುಂದಿನ ದಿನಗಳಲ್ಲಿ ವಿರೋಧಿಗಳು ಎಷ್ಟೇ ಬಲಿಷ್ಠ ಅಭ್ಯರ್ಥಿಗಳನ್ನು ತಂದರೂ ಬಂಟ್ವಾಳದಲ್ಲಿ ಬಿಜೆಪಿ ಗೆಲ್ಲುತ್ತದೆ ಎಂಬ ಸ್ಥಿತಿಗೆ ಪಕ್ಷವನ್ನು ತಂದು ನಿಲ್ಲಿಸಬೇಕು ಎಂದು ಪ್ರತಿ ಬಾರಿಯೂ ಕಾರ್ಯಕರ್ತರನ್ನು ಹುರಿದುಂಬಿಸುವ ಕಾರ್ಯ ಮಾಡುತ್ತಿದ್ದರು.
Related Articles
ಶಕ್ತಿ ಕೇಂದ್ರದ ಸಭೆಗಳಲ್ಲಿ ಶಾಸಕ ರಾಜೇಶ್ ನಾೖಕ್ ಅವರು ಮಾತನಾಡುತ್ತಾ, ಕಳೆದ 5 ವರ್ಷಗಳಲ್ಲಿ ಕ್ಷೇತ್ರದಾದ್ಯಂತ ಸಂಚಾರ ಮಾಡಿ ಜನತೆಯ ಕಷ್ಟ ಸುಖಗಳಿಗೆ ಸ್ಪಂದನೆ ನೀಡುವ ಜತೆಗೆ ಗರಿಷ್ಠ ಪ್ರಮಾಣದ ಅನುದಾನ ತಂದು ಕ್ಷೇತ್ರದ ಅಭಿವೃದ್ಧಿ ಕಾರ್ಯಗಳನ್ನು ಅನುಷ್ಠಾನ ಮಾಡಿದ್ದೇನೆ. ದೇಶದ ಸಂಸ್ಕೃತಿ, ಧರ್ಮವನ್ನು ಉಳಿಸುವ ಕಾರ್ಯದ ಸಂಜೆ ಶಾಂತಿಯ ಬಂಟ್ವಾಳ ನಿರ್ಮಾಣ ಮಾಡಿದ ತೃಪ್ತಿ ಇದೆ ಎಂದರು.
Advertisement
ಚುನಾವಣೆ ಹತ್ತಿರ ಬರುವಾಗ ಕಾಂಗ್ರೆಸ್‌ಗೆ ಹಿರಿಯ ನಾಯಕ ಬಿ.ಜನಾರ್ದನ ಪೂಜಾರಿ ಅವರ ನೆನಪಾಗುತ್ತದೆ. ಚುನಾವಣೆಯ ಸಂದರ್ಭ ಅವರ ನಿವಾಸಕ್ಕೆ ಬಂದು ನಾಟಕ ಮಾಡುತ್ತಾರೆ. ಸತ್ಯ, ನ್ಯಾಯದ ಸಾಕಾರಮೂರ್ತಿಯಾಗಿರುವ ರಾಜೇಶ್ ನಾೖಕ್ ಅವರನ್ನು ಬಂಟ್ವಾಳದಲ್ಲಿ ಮತ್ತೂಮ್ಮೆ ಗೆಲ್ಲಿಸಬೇಕಿದೆ ಎಂದರು.
ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ ಮಾತನಾಡಿ, ಶಾಸಕ ರಾಜೇಶ್ ನಾೖಕ್ ಅವರು ಕ್ಷೇತ್ರಕ್ಕೆ ಕೇಳಿದ್ದನ್ನು ನೀಡಿದ ಕಾಮಧೇನುವಾಗಿದ್ದು, ಅವರನ್ನು ಮತ್ತೂಮ್ಮೆ ಗೆಲ್ಲಿಸುವ ಕಾರ್ಯವನ್ನು ಕಾರ್ಯಕರ್ತರು ಮಾಡಬೇಕು ಎಂದರು.