ಬಂಟ್ವಾಳ: ಲೋಕಸಭಾ ಚುನಾವಣೆಯಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿದ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲು ಅವರ ವಿಜಯೋತ್ಸವ ಮೆರವಣಿಗೆ ಜೂ.8 ರಂದು ಸಂಜೆ ಬಿ.ಸಿ.ರೋಡ್ ಪೊಳಲಿ ದ್ವಾರದಿಂದ ಆರಂಭವಾಗಿ ಬಂಟ್ವಾಳ ಕಾಲೇಜು ರಸ್ತೆ ಜಂಕ್ಷನ್‌ನಲ್ಲಿ ಸಮಾಪನಗೊಂಡಿತು.
ರಥದ ಮಾದರಿಯಲ್ಲಿ ಹೂಗಳಿಂದ ಅಲಂಕರಿಸಿದ ತೆರೆದ ವಾಹನದಲ್ಲಿ ನಿಂತು ಸಂಸದರು, ಬಂಟ್ವಾಳ ಶಾಸಕ ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು, ಮಾಜಿ ಶಾಸಕ ಕೆ. ಪದ್ಮನಾಭ ಕೊಟ್ಟಾರಿ, ಜಿಲ್ಲಾ ಬಿಜೆಪಿ ವಕ್ತಾರ ಕೆ. ಹರಿಕೃಷ್ಣ ಬಂಟ್ವಾಳ, ಬಿಜೆಪಿ ನೇತಾರ ಶ್ರೀಕಾಂತ ಶೆಟ್ಟಿ ಮತದಾರರಿಗೆ ಕೃತಜ್ಞತೆ ಸಮರ್ಪಣೆ ಮಾಡಿದರು.
ಬಿ.ಸಿ.ರೋಡ್ ಕೈಕಂಬ ಪೊಳಲಿ ದ್ವಾರದಿಂದ ಸಿಡಿಮದ್ದಿನ ಅಬ್ಬರದೊಂದಿಗೆ ಆರಂಭವಾದ ಮೆರವಣಿಗೆಯು ಡಿ.ಜೆ. ಕುಣಿತದ ಮೂಲಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಶಿಸ್ತಿನಿಂದ ಸಾಗಿಬಂತು. ಮೆರವಣಿಗೆಯಲ್ಲಿ ಚೆಂಡೆ ವಾದನ, ಕೀಲು ಕುದುರೆ, ಗೊಂಬೆ ಬಳಗ, ಬಣ್ಣದ ಕೊಡೆಗಳ ಸಾಲು ಸಾಥ್ ನೀಡಿತ್ತು.
ಮೆರವಣಿಗೆಯು ಬಿ.ಸಿ.ರೋಡ್ ಬ್ರಹ್ಮಶ್ರೀ ನಾರಾಯಣ ಗುರು ವೃತ್ತ, ಬಸ್ತಿಪಡು³, ಬಂಟ್ವಾಳ ಕೆಳಗಿನ ಪೇಟೆ, ಬಂಟ್ವಾಳ ಪೇಟೆ, ಜಕ್ರಿಬೆಟ್ಟು, ಬಂಟ್ವಾಳ ಬೈಪಾಸ್ ಜಂಕ್ಷನ್‌ಗೆ ತಲುಪುವ ಮೂಲಕ ಸಮಾಪನಗೊಂಡಿತು. ರಾತ್ರಿ ಇಲ್ಲಿನ ಸಮಾಜ ಭವನದಲ್ಲಿ ಊಟದ ವ್ಯವಸ್ಥೆ ಹಮ್ಮಿಕೊಳ್ಳಲಾಗಿತ್ತು.
ಕ್ಷೇತ್ರ ಬಿಜೆಪಿ ಅಧ್ಯಕ್ಷ ಬಿ. ದೇವದಾಸ ಶೆಟ್ಟಿ, ಜಿ.ಪಂ. ಸದಸ್ಯರಾದ ಎಂ. ತುಂಗಪ್ಪ ಬಂಗೇರ, ಕಮಲಾಕ್ಷಿ ಕೆ. ಪೂಜಾರಿ, ರವೀಂದ್ರ ಕಂಬಳಿ, ಸುಲೋಚನಾ ಜಿ.ಕೆ. ಭಟ್, ಜಿ. ಆನಂದ, ಪ್ರಭಾಕರ ಪ್ರಭು, ಪ್ರಮುಖರಾದ ರಾಮ್‌ದಾಸ್ ಬಂಟ್ವಾಳ, ಮೋನಪ್ಪ ದೇವಸ್ಯ, ದಿನೇಶ್ ಅಮೂrರು, ಪುಷ್ಪರಾಜ ಶೆಟ್ಟಿ, ದಿನೇಶ್ ಭಂಡಾರಿ, ರಂಜಿತ್ ಮೈರ, ಸುದರ್ಶನ ಬಜ, ಪುರುಷ ಸಾಲ್ಯಾನ್ ನೆತ್ತೆರಕೆರೆ, ವಜ್ರನಾಥ ಮಡ್ಲಮಜಲು, ಶ್ರೀಧರ ಶೆಟ್ಟಿ, ಸಂಧ್ಯಾವೆಂಕಟೇಶ, ನಾರಾಯಣ ಶೆಟ್ಟಿ ಕೊಲ್ಯ ಸಹಿತ ಪಕ್ಷ ಪ್ರಮುಖರು ಭಾಗವಹಿಸಿದ್ದರು.