ಬಂಟ್ವಾಳ: ಜಿಲ್ಲೆಯ ಎಂಟು ವಿಧಾನ ಸಭಾ ಕ್ಷೇತ್ರಗಳಲ್ಲಿ ಬಂಟ್ವಾಳವು ಮಹತ್ವದ ಕ್ಷೇತ್ರವಾಗಿದ್ದು ಇಲ್ಲಿ ನಡೆಯಲಿರುವ ಪರಿವರ್ತನ ಯಾತ್ರೆ ಸಮಾವೇಶ ಯಶಸ್ಸಿಗೆ ಪಕ್ಷದ ಎಲ್ಲ ಕಾರ್ಯಕರ್ತರು, ಜನಪ್ರತಿನಿಧಿಗಳು, ಪದಾಧಿಕಾರಿಗಳು ಶಕ್ತಿಮೀರಿ ಪ್ರಯತ್ನಿಸಬೇಕು. ಜನರಿಗೆ ಕೇಂದ್ರ ಸರಕಾರದ ಸವಲತ್ತು, ಸಾಧನೆಗಳ ಬಗ್ಗೆ ತಿಳಿಸುವ ಕೆಲಸ ಆಗಲಿ ಎಂದು ದ.ಕ. ಸಂಸದ ನಳಿನ್ ಕುಮಾರ್ ಕಟೀಲು ತಿಳಿಸಿದರು.
ಅವರು ಬಿ.ಸಿ.ರೋಡ್ ಬ್ರಹ್ಮಶ್ರೀ ನಾರಾಯಣ ಗುರು ವೃತ್ತದ ಸನಿಹ ಪರಿವರ್ತನ ಯಾತ್ರೆ ಸಮಾವೇಶದ ಮೈದಾನದಲ್ಲಿ ಚಪ್ಪರ ಮುಹೂರ್ತದ ಬಳಿಕ ಕಾರ್ಯಕರ್ತರ ಜತೆ ನಡೆದ ಸಮಾಲೋಚನ ಸಭೆಯಲ್ಲಿ ಮಾತನಾಡಿದರು.
ರಾಜ್ಯದಲ್ಲಿ ಸಾಗುತ್ತಿರುವ ಈ ಯಾತ್ರೆಗೆ ಅಭೂತಪೂರ್ವ ಬೆಂಬಲ ದೊರಕುತ್ತಿದೆ. ನ. 11ರಂದು ಬೆಳಗ್ಗೆ 9 ಗಂಟೆಗೆ ಪುಂಜಾಲಕಟ್ಟೆ ಯಲ್ಲಿ ಯಾತ್ರೆಗೆ ಬಂಟ್ವಾಳ ಕ್ಷೇತ್ರದ ವತಿಯಿಂದ ಸ್ವಾಗತ ನೀಡಲಾಗುವುದು. ಅಲ್ಲಿಂದ ಸಾಗಿ ಬರುವ ಯಾತ್ರೆಯು ಬಿ.ಸಿ. ರೋಡ್‌ನ ಮುಖ್ಯ ವೃತ್ತದ ಮೈದಾನದಲ್ಲಿ ಸಮಾವೇಶಗೊಳ್ಳುವುದು ಎಂದರು.
ಬೂತ್ ಮಟ್ಟದಿಂದ 25 ಸಾವಿರಕ್ಕೂ ಮಿಕ್ಕಿದ ಕಾರ್ಯಕರ್ತರು ಭಾಗವಹಿಸಲಿದ್ದು ವ್ಯವಸ್ಥೆಯ ದೃಷ್ಟಿಯಿಂದ ಯಾವುದೇ ಲೋಪವಾಗದಂತೆ ಕ್ರಮಕ್ಕೆ ಮುಂದಾಗಬೇಕು ಎಂದು ಕಾರ್ಯಕರ್ತರಲ್ಲಿ ವಿನಂತಿಸಿದರು.
ಬಿಜೆಪಿ ನೇತಾರ ರಾಜೇಶ್ ನಾೖಕ್ ಉಳಿಪಾಡಿಗುತ್ತು, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಉಮಾನಾಥ ಕೋಟ್ಯಾನ್, ಬ್ರಿಜೇಶ್‌ಚೌಟ , ಸುದರ್ಶನ್, ಕ್ಷೇತ್ರ ಅಧ್ಯಕ್ಷ ಬಿ. ದೇವದಾಸ ಶೆಟ್ಟಿ, ಮಾಜಿ ಶಾಸಕರಾದ ಕೆ. ಪದ್ಮನಾಭ ಕೊಟ್ಟಾರಿ, ಜಿಲ್ಲಾ ಉಪಾಧ್ಯಕ್ಷ ಜಿ.ಆನಂದ, ಜಿಲ್ಲಾ ಹಿಂದುಳಿದ ಮೋರ್ಚಾ ಪ್ರಧಾನ ಕಾರ್ಯದರ್ಶಿ ಕೃಷ್ಣಪ್ಪ ಪೂಜಾರಿ, ಕ್ಷೇತ್ರ ಪ್ರಧಾನ ಕಾರ್ಯದರ್ಶಿ ರಾಮದಾಸ್ ಬಂಟ್ವಾಳ, ಕ್ಷೇತ್ರ ಕಾರ್ಯದರ್ಶಿಗಳಾದ ಸೀತಾರಾಮ ಪೂಜಾರಿ, ರಮಾನಾಥ ರಾಯಿ, ಗೋವಿಂದ ಪ್ರಭು, ದಿನೇಶ್ ಭಂಡಾರಿ, ಮಹಾಬಲ ಶೆಟ್ಟಿ, ರೊನಾಲ್ಡ್ ಡಿ’ಸೋಜಾ, ವಜ್ರನಾಥ ಕಲ್ಲಡ್ಕ, ಸಂತೋಷ್ ರಾಯಿ, ಪುರುಷೋತ್ತಮ ಶೆಟ್ಟಿ, ವಿಜಯ ರೈ,
ನೇಮಿರಾಜ್ ರೈ, ಮಚ್ಛೇಂದ್ರ ಸಾಲಿಯಾನ್, ಆನಂದ ಎ. ಶಂಭೂರು, ಬಾಲಕೃಷ್ಣ ಸೆರ್ಕಳ, ಯಶೋಧರ ಕರ್ಬೆಟ್ಟು, ಭಾರತಿ ಎಸ್.ಚೌಟ, ರಂಜಿತ್ ಮೈರ, ಜನಾರ್ದನ ಬೊಂಡಾಲ, ಜಿನೇಂದ್ರ ಜೈನ್, ತನಿಯಪ್ಪ ಗೌಡ, ಕಿಶೋರ್ ಶೆಟ್ಟಿ, ಶಶಿಕಾಂತ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.