Advertisement

ಬಂಟ್ವಾಳ: ಸೇವಾಂಜಲಿ ಪ್ರತಿಷ್ಠಾನದಿಂದ 100ನೇ ರಕ್ತದಾನ ಶಿಬಿರ

07:56 AM Feb 04, 2019 | Team Udayavani |

ಬಂಟ್ವಾಳ: ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನ ಆಶ್ರಯದಲ್ಲಿ ಜ| ಕೆ. ಎಸ್‌. ಹೆಗ್ಡೆ ಚಾರಿಟೆಬಲ್‌ ಆಸ್ಪತ್ರೆ ದೇರಳಕಟ್ಟೆ , ಕೆ.ಎಂ.ಸಿ. ಆಸ್ಪತ್ರೆ ಮಂಗ ಳೂರು, ಇಂಡಿಯನ್‌ ರೆಡ್‌ಕ್ರಾಸ್‌ ಸೊಸೈಟಿ ದ.ಕ. ಸಹಯೋಗದಲ್ಲಿ ಫೆ. 3ರಂದು ಸೇವಾಂಜಲಿ ಸಭಾಂಗಣದಲ್ಲಿ ನಡೆದ 100ನೇ ರಕ್ತದಾನ ಶಿಬಿರದಲ್ಲಿ 248 ಮಂದಿ ರಕ್ತದಾನ ಮಾಡಿದರು.

Advertisement

ಬಂಟ್ವಾಳ ಉಪ ವಿಭಾಗದ ಸಹಾಯಕ ಪೊಲೀಸ್‌ ಅಧೀಕ್ಷಕ ಸೈದುಲ್‌ ಆಡಾವತ್‌ ಕಾರ್ಯಕ್ರಮ ಉದ್ಘಾಟಿಸಿದ್ದಲ್ಲದೆ, ಸ್ವತಃ ರಕ್ತದಾನ ಮಾಡುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು.

ಅವರು ಮಾತನಾಡಿ, ಸತತ 23 ವರ್ಷ ಗಳಿಂದ 100 ಶಿಬಿರ ಆಯೋಜಿಸಿ ಆರು ಸಹಸ್ರ ಯುನಿಟ್ ರಕ್ತ ಸಂಗ್ರಹಿಸಿರುವುದು ಸುಲಭದ ಮಾತಲ್ಲ. ಸೇವಾಂಜಲಿ ನೇತಾರ ಪೂಂಜರ ಕರ್ತವ್ಯ ಜನತಾ ಜನಾರ್ದನನಿಗೆ ಸಲ್ಲಿಸಿದ ಸೇವೆ ಎಂದರು.

ಜಿಲ್ಲಾ ಧಾರ್ಮಿಕ ಪರಿಷದ್‌ ಸದಸ್ಯ ಜಗನ್ನಾಥ್‌ ಚೌಟ ಮಾತನಾಡಿ, ರಕ್ತದಾನ ಮೂಲಕ ಇನ್ನೊಬ್ಬರಿಗೆ ಜೀವ ದಾನ ನೀಡುವುದು ಪುಣ್ಯದ ಕೆಲಸ. ಈ ಸೇವೆಯ ಮಹತ್ವ ವನ್ನು ಜನಸಾಮಾನ್ಯಗೆ ಅರಿವು ಮೂಡಿಸಿ ಶಿಬಿರ ಆಯೋಜಿಸುವ ಮೂಲಕ ಪೂಂಜರು ಶ್ರೇಷ್ಠತೆ ಮೆರೆದಿದ್ದಾರೆ ಎಂದರು .

ತುಂಬೆ ಕಾರ್ಪೋರೇಷನ್‌ ಬ್ಯಾಂಕ್‌ ಶಾಖಾಧಿಕಾರಿ ಸಂದೇಶ್‌ ತುಪ್ಪೆಕಲ್ಲು ಮಾತನಾಡಿ, ಸೇವೆಯಲ್ಲಿ ಸಾರ್ಥಕ್ಯ ಕಾಣುತ್ತಿರುವ ಪೂಂಜರು, ಸಹಕರಿಸಿ ಬೆಂಬಲಿಸುತ್ತಿರುವ ದಾನಿಗಳು, ನಿರಂತರ ಅದನ್ನು ನಡೆಸಿಕೊಂಡು ಬಂದಿರುವ ಸಂಸ್ಥೆಯ ಸಾಧನೆಗೆ ಅಭಿನಂದನೆಗಳು ಎಂದರು .

Advertisement

ರೋಟರಿ ಕ್ಲಬ್‌ ಸಹಾಯಕ ಗವರ್ನರ್‌ ಎನ್‌. ಪ್ರಕಾಶ್‌ ಕಾರಂತ, ಜಿ.ಪಂ. ಸದಸ್ಯ ಚಂದ್ರಪ್ರಕಾಶ್‌ ಶೆಟ್ಟಿ ತುಂಬೆ, ತಾ.ಪಂ. ಸದಸ್ಯ ಗಣೇಶ್‌ ಸುವರ್ಣ ತುಂಬೆ, ಗಣೇಶ್‌ ಸಾಲ್ಯಾನ್‌, ಪ್ರಕಾಶ್‌ ಕಿದೆಬೆಟ್ಟು, ಸಹ್ಯಾದ್ರಿ ಎಂಜಿನಿಯರಿಂಗ್‌ ಕಾಲೇಜು ಅಡ್ಯಾರ್‌ ಇದರ ನಿರ್ದೇಶಕರಾದ ದೇವದಾಸ್‌ ಹೆಗ್ಡೆ , ಬಿಎ ತಾಂತ್ರಿಕ ವಿದ್ಯಾ ಸಂಸ್ಥೆಯ ತರಬೇತಿ ಅಧಿಕಾರಿ ಕಿಶನ್‌, ಕಳ್ಳಿಗೆ ಗ್ರಾ.ಪಂ. ಉಪಾಧ್ಯಕ್ಷ ಪುರುಷ ಸಾಲ್ಯಾನ್‌, ಪದ್ಮನಾಭ ಶೆಟ್ಟಿ ಪುಂಚಮೆ, ಬಂಟ್ವಾಳ ಗ್ರಾಮಾಂತರ ಪೊಲೀಸ್‌ ಠಾಣಾಧಿಕಾರಿ ಪ್ರಸನ್ನ ಮೊದಲಾದವರು ಉಪಸ್ಥಿತರಿದ್ದರು.

ಸೇವಾಂಜಲಿ ಪ್ರತಿಷ್ಠಾನ ಆಡಳಿತ ಟ್ರಸ್ಟಿ ಕೃಷ್ಣ ಕುಮಾರ್‌ ಪೂಜ ಸ್ವಾಗತಿಸಿ, ತಾರಾನಾಥ್‌ ಕೊಟ್ಟಾರಿ ವಂದಿಸಿದರು ಕೊಡ್ಮಾಣ್‌ ದೇವದಾಸ್‌ ಶೆಟ್ಟಿ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next