ಹೆಬ್ರಿ: ಬಂಟರ ಸೌಹಾರ್ದ ಸಹಕಾರಿ ನಿಯಮಿತ ಇದರ ಸೌಹಾರ್ದ ಸಹಕಾರಿ ಆ.17ರಂದು ಶುಭಾರಂಭಗೊಳ್ಳಲಿದೆ.
ಸುಮಾರು 40 ವರ್ಷಗಳ ಇತಿಹಾಸವಿರುವ ಹೆಬ್ರಿ ಅಜೆಕಾರು ವಲಯ ಬಂಟರ ಸಂಘದ ಆಶ್ರಯದಲ್ಲಿ ಹೆಬ್ರಿ ವಿನೂನಗರದಲ್ಲಿರುವ ದುರ್ಗಾ ಆರ್ಕೆಡ್(ಹೆಬ್ರಿ ಸೂಪರ್ ಮಾರ್ಕೆಟ್) ನ 1ನೇ ಮಹಡಿಯಲ್ಲಿ ಸಂಘವು ಪೂಜಾ ಕಾರ್ಯಕ್ರಮದೊಂದಿಗೆ ಆರಂಭವಾಗಲಿದೆ.
ಸಂಘದ ಅಧ್ಯಕ್ಷ ಉದಯ ಶೆಟ್ಟಿ ಮುನಿಯಾಲು ಅವರ ನೇತೃತ್ವದಲ್ಲಿ ಸಂಘದ ಮೂಲಕ ನಿರಂತರ ಸಮಾಜಮುಖೀ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಮೂಲಕ ಬಂಟ ಸಮಾಜದವರಿಗೆ ಮಾತ್ರವಲ್ಲದೆ ಇತರ ಸಮಾಜದ ಅಸಕ್ತರಿಗೆ ಸಹಾಯ ಧನ ವಿತರಣೆ, ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ಇದೀಗ ಪ್ರತಿಯೊಬ್ಬರನ್ನು ಮುಖ್ಯ ವಾಹಿನಿಗೆ ತರಲು ಸಹಕಾರಿ ಸಂಸ್ಥೆಯ ಆರಂಭಕ್ಕೆ ಮುಂದಾಗಿದ್ದಾರೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.
ಬಂಟರ ಸೌಹಾರ್ದ ಸಹಕಾರಿಯ ಉಪಾಧ್ಯಕ್ಷರಾಗಿ ಸಂಘದ ಪ್ರಧಾನ ಕಾರ್ಯದರ್ಶಿ ಸೀತಾನದಿ ವಿಠಲ ಶೆಟ್ಟಿ ನಿರ್ದೇಶಕರಾಗಿ ಪ್ರವೀಣ್ ಬಲ್ಲಾಳ , ಭೂತುಗುಂಡಿ ಕರುಣಾಕರ ಶೆಟ್ಟಿ ,ಸುಧಾಕರ್ ಶೆಟ್ಟಿ ಶೇಡಿಮನೆ, ಹರ್ಷ ಶೆಟ್ಟಿ ಬೇಳಂಜೆ ,ಸುಮಾ ಎನ್. ಅಡ್ಯಂತಾಯ,ಶುಭವತಿ ವಾದಿರಾಜ್‌ಶೆಟ್ಟಿ ಚಾರ,ಅಶೋಕ್ ಶೆಟ್ಟಿ ಪಡುಕುಡೂರು, ಸಂದೀಪ್ ಶೆಟ್ಟಿ ಎಣ್ಣೆಹೊಳೆ,ಶಂಕರ್ ಶೆಟ್ಟಿ ಮುನಿಯಾಲು,ಸುಕೇಶ್ ಶೆಟ್ಟಿ ಹೆಬ್ರಿ,ಸತೀಶ್ ಶೆಟ್ಟಿ ಬೇಳಂಜೆ,ಪ್ರಕಾಶ್ ಶೆಟ್ಟಿ ಕಲ್ಲಿಲ್ಲು,ಶುಭದರ ಶೆಟ್ಟಿ ಮುದ್ರಾಡಿ ಅವರು ಕಾರ್ಯ ನಿರ್ವಹಿಸುವರು.
ಪೂಜಾ ಕಾರ್ಯಕ್ರಮ : ಕೋವಿಡ್ ಸಮಸ್ಯೆ ಹಿನ್ನೆಲೆಯಲ್ಲಿ ಸಭೆ ಸಮಾರಂಭ ಆಯೋಜಿಸಲು ಸಾಧ್ಯವಾಗುತ್ತಿಲ್ಲ. ಅದರ ಬದಲಾಗಿ ಸರಳವಾಗಿ ಪೂಜಾ ಕಾರ್ಯಕ್ರಮದೊಂದಿಗೆ ಸಂಸ್ಥೆಯು ಆರಂಭವಾಗಲಿದೆ. ಆ.17ರ ಬೆಳಗ್ಗೆ 10ರಿಂದ ಸಂಜೆ 5ರತನಕ ಬಂಟರ ಸಂಘದ ಸದಸ್ಯರು,ಸೌಹಾರ್ದ ಸಹಕಾರಿಯ ಶೇರುದಾರರು ಹಾಗೂ ಅಭಿಮಾನಿಗಳು ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಂಡು ಕಚೇರಿಗೆ ಭೇಟಿ ನೀಡಿ ಶುಭ ಕೋರುವಂತೆ ಸಂಘದ ಅಧ್ಯಕ್ಷ ಉದಯ ಶೆಟ್ಟಿ ಮುನಿಯಾಲು ಕೋರಿದ್ದಾರೆ.
ಆರಂಭೋತ್ಸವದ ಕೊಡುಗೆ : ಸಹಕಾರಿ ನಿಯಮಿತದಲ್ಲಿ ಅತ್ಯಂತ ವಿಶ್ವಸನೀಯ ಬ್ಯಾಂಕಿಂಗ್ ವ್ಯವಹಾರದೊಂದಿಗೆ ಆಕರ್ಷಕ ಬಡ್ಡಿದರದಲ್ಲಿ ಠೇವಣಿ ಸೌಲಭ್ಯ, ಸುಲಭ ಬಡ್ಡಿದರದಲ್ಲಿ ವಿವಿಧ ಸಾಲ ಸೌಲಭ್ಯ ಹಾಗೂ ಹಿರಿಯ ನಾಗರಕರಿಗೆ 0.5% ಹೆಚ್ಚುವರಿ ಬಡ್ಡಿ ಸೌಲಭ್ಯವಿದೆ. ಆರಂಭೋತ್ಸವದ ಅಂಗವಾಗಿ ಆ.17ರಿಂದ 31ರ ವರೆಗೆ ವ್ಯವಹರಿಸುವವರಿಗೆ ಠೇವಣಿಗೆ 0.5% ಹೆಚ್ಚುವರಿ ಬಡ್ಡಿ ಹಾಗೂ ಸಾಲ ಪಡೆಯುವರಿಗೆ 0.5% ಬಡ್ಡಿ ಹೆಚ್ಚುವರಿ ರಿಯಾಯಿತಿ ನೀಡುವುದಾಗಿ ಪ್ರಕಟಣೆ ತಿಳಿಸಿದೆ.