Advertisement

ಬಂಥನಾಳ ಸಂಗನಬಸವೇಶ್ವರ ರಥೋತ್ಸವ

05:13 PM Feb 17, 2018 | |

ತಾಂಬಾ: ಬಂಥನಾಳ ವೃಷಭಲಿಂಗೇಶ್ವರ ಸಂಸ್ಥಾನ ಮಠದಲ್ಲಿ ಶ್ರೀ ಸಂಗನಬಸವೇಶ್ವರ ರಥೋತ್ಸವ ವಿಜೃಂಭಣೆಯಿಂದ ನೆರವೇರಿತು. ಬಂಥನಾಳದ ಪೀಠಾಧಿಪತಿ ಶ್ರೀ ವೃಷಭಲಿಂಗ ಶಿವಯೋಗಿಗಳು, ಆಲಮೇಲದ ಚಂದ್ರಶೇಖರ ಶಿವಾಚಾರ್ಯರು, ಡಾ| ಮಲ್ಲಿಕಾರ್ಜುನ ಮೇತ್ರಿ, ಜಂಬುನಾಥ ಕಂಚಾಣಿ ಸೇರಿದಂತೆ ನಾಡಿನ ವಿವಿಧ ಜಿಲ್ಲೆಯಿಂದ ಆಗಮಿಸಿದ ಹರಗುರು ಚರಮೂರ್ತಿಗಳು ರಥೋತ್ಸವಕ್ಕೆ ಸಾಕ್ಷಿಯಾದರು.

Advertisement

ಭಕ್ತರು ಹಣ್ಣು ಉತ್ತತ್ತಿ ಸಮರ್ಪಿ ಧನ್ಯತಾ ಭಾವ ಮೆರೆದರು. ಶ್ರೀ ಸಂಗನಬಸವೇಶ್ವರ ರಥ ಎಳೆಯುತ್ತಿದಂತೆಯೇ ಭಕ್ತರ ಜಯಘೋಷ ಹಾಕಿದರು. 

ಬೆಳಗ್ಗೆ ರಬಿನಾಳ ಶ್ರೀ ಬಸವೇಶ್ವರ ಪಲ್ಲಕ್ಕಿ ಆಗಮಿಸುತ್ತಿದಂತೆ ಶ್ರೀ ಮಠದಲ್ಲಿ ಅದ್ಧೂರಿಯಾಗಿ ಸ್ವಾಗತಿಸಲಾಯಿತು. ನಂತರ
ವಿಶೇಷ ಪೂಜೆ, ಅಭಿಷೇಕ, ಮಹಾಮಂಗಳಾರತಿ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು.

ಅಗ್ನಿ ಶಮನ ಕಾರ್ಯಕ್ರಮ 
ತಾಂಬಾ: ಬಂಥನಾಳ ಮಠದಲ್ಲಿ ಶ್ರೀ ವೃಷಭಲಿಂಗೇಶ್ವರ ಸಾಂಸ್ಕೃತಿಕ ಉತ್ಸವದ ಅಂಗವಾಗಿ ಅಗ್ನಿ ಶಮನ ಕಾರ್ಯಕ್ರಮವು ಸಹಸ್ರಾರು ಭಕ್ತರ ಜಯಘೋಷದ ನಡುವೆ ವಿಜೃಂಭಣೆಯಿಂದ ನಡೆಯಿತು. ಬೆಳಗ್ಗೆ ಮಠದಲ್ಲಿ ವಿಶೇಷ ಪೂಜೆ, ಅಭಿಷೇಕ ಕಾರ್ಯಕ್ರಮವು ಶಾಸ್ತ್ರೋಕವಾಗಿ ನೆರವೇರಿತು. ನಂತರ ನಡೆದ ಅಗ್ನಿ ಶಮನ ಕಾರ್ಯಕ್ರಮವು ಬಂಥನಾಳದ ಶ್ರೀ ವೃಷಭಲಿಂಗೇಶ್ವರ ಪಲ್ಲಕ್ಕಿ ಹಾಗೂ ರೆಬಿನಾಳ ಬಸವೇಶ್ವರ ಪಲ್ಲಕ್ಕಿ ಆಗಮನದೊಂದಿಗೆ ನಡೆಯಿತು. ಈ ವೇಳೆ ಹಲವು ವೀರಗಾಸೆ ಕಲಾವಿದರು, ಹರಕೆ ಹೊತ್ತ ಭಕ್ತರು ಅಗ್ಗಿ ಹಾಯ್ದು ಗಮನಸೆಳೆದರು. ಇದಲ್ಲದೆ ತಡವಲಗಾದ ಅಭಿನವ ರಾಚೋಟೇಶ್ವರ ಶಿವಾಚಾರ್ಯರಿಂದ ದೀಕ್ಷಾ ಸಮಾರಂಭ ನೆರವೇರಿತು. ಭಕ್ತರು ಕಾಯಿ, ಕರ್ಪೂರ, ಹೂ, ಹಣ್ಣು ಅರ್ಪಿಸಿ ಭಕ್ತಿ ಸಮರ್ಪಿಸಿದರು.

ಭಕ್ತರನ್ನು ಕರೆತರಲು ತಾಂಬಾ ಗ್ರಾಮದ 60ರಿಂದ 70 ವಾಹನ ಉಚಿತ ಸೇವೆ ಒದಗಿಸಿ ಭಕ್ತಿ ಸೇವೆ ಸಲ್ಲಿಸಿದರು. ಸುರಗಿಹಳ್ಳಿ, ಚಾಂದಕವಠೆ, ಚಟ್ಟರಕಿ, ಬಳಗಾನೂರ, ಕೊರಳ್ಳಿ, ಚಿಕ್ಕರೂಗಿ, ಗಂಗನಳ್ಳಿ, ಹಿಟ್ಟಳ್ಳಿ, ಲಚ್ಯಾಣ, ದೇವರಹಿಪ್ಪರಗಿ, ಸಾತಿಹಾಳ, ಪಡನೂರ, ಮಸಬಿನಾಳ, ಡೋಣುರ, ಕನ್ನೊಳ್ಳಿ, ಬೋಳೆಗಾಂವ ಸೇರಿದಂತೆ ಜಿಲ್ಲೆ ಹಾಗೂ ಮಹಾರಾಷ್ಟ್ರ ಭಾಗದ ಭಕ್ತರು ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next