ಶಿರ್ವ: ಬಂಟಕಲ್ಲು ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಸಹಯೋಗದೊಂದಿಗೆ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಇತ್ತೀಚಿನ ಬೆಳವಣಿಗೆಗಳು ಎಂಬ ವಿಷಯದಲ್ಲಿ ನಡೆದ ರಾಷ್ಟ್ರೀಯ ತಾಂತ್ರಿಕ ಸಮ್ಮೇಳನದ ಸಮಾರೋಪ ಸಮಾರಂಭ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಮುಖ್ಯ ಅತಿಥಿ ಬೆಂಗಳೂರಿನ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಸಂಸ್ಥೆಯ ಹಿರಿಯ ವಿಜ್ಞಾನಿ ಡಾ| ಕೃಷ್ಣಚಂದ್ರ ಗೌಡ ಮಾತನಾಡಿ ಇಂದಿನ ತಾಂತ್ರಿಕ ಕ್ಷೇತ್ರದಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವ ಡಾಟಾ ಅನಾಲಿಟಿಕ್ಸ್, ಡಾಟಾ ಸೈನ್ಸ್ ಬಿಗ್ ಡಾಟಾ ಮುಂತಾದ ಕ್ಷೇತ್ರಗಳು ಕೇವಲ ಗಣಕಯಂತ್ರ ವಿಭಾಗಕ್ಕೆ ಮಾತ್ರ ಸೀಮಿತವಾಗಿರದೆ, ಎಲ್ಲ ಕ್ಷೇತ್ರಗಳ ವೃತ್ತಿಪರರಿಗೆ ಉತ್ತಮ ಭವಿಷ್ಯದ ಅವಕಾಶಗಳನ್ನು ತೆರೆದಿವೆ ಎಂದರು.
ಶ್ರೀ ಸೋದೆ ವಾದಿರಾಜ ಮಠ ಎಜುಕೇಶನ್ ಟ್ರಸ್ಟ್‌ನ ಕಾರ್ಯದರ್ಶಿ ರತ್ನ ಕುಮಾರ್ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಸಮ್ಮೇಳನದ ನಡಾವಳಿಗಳ ಸಿಡಿಯನ್ನು ಡಾ| ಕೃಷ್ಣಚಂದ್ರ ಗೌಡ ಬಿಡುಗಡೆಗೊಳಿಸಿದರು. ಸಮ್ಮೇಳನದ ಸಂಯೋಜಕ ಪ್ರೊ| ಆನಂದ್ ವಿ. ಆರ್. ವರದಿ ಮಂಡಿಸಿದರು. ಆಯೋಜನಾ ಸಮಿತಿಯ ಸಂಯೋಜಕ ನಾಗರಾಜ ಭಟ್ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಸುಜಯ್ ರಾಘವೇಂದ್ರ ವೇದಿಕೆಯಲ್ಲಿದ್ದರು.
ಪ್ರಾಂಶುಪಾಲ ಪ್ರೊ | ಡಾ|ತಿರುಮಲೇಶ್ವರ ಭಟ್ ಸ್ವಾಗತಿಸಿದರು. ಗಣಕಯಂತ್ರ ವಿಭಾಗದ ಪ್ರಾಧ್ಯಾಪಕಿ ಸೌಮ್ಯಾ ಎಸ್. ನಿರೂಪಿಸಿ, ಸಮ್ಮೇಳನದ ಸಂಯೋಜಕ ಪ್ರೊ | ಡಾ|ವಾಸುದೇವ ವಂದಿಸಿದರು.