ಮುಂಬಯಿ: ಬಂಟರ ಸಂಘ ಮುಂಬಯಿ ಸಂಚಾಲಿತ ಎಸ್. ಎಂ. ಶೆಟ್ಟಿ ಶಿಕ್ಷಣ ಸಂಸ್ಥೆಯಯಲ್ಲಿ 76ನೇ ಸ್ವಾತಂತ್ರ್ಯೋತ್ಸವವನ್ನು ವೈವಿಧ್ಯಮಯವಾಗಿ ಅದ್ದೂರಿಯಾಗಿ ಆಚರಿಸಲಾಯಿತು.
ಬಂಟರ ಸಂಘ ಮುಂಬಯಿ ಅಧ್ಯಕ್ಷ ಚಂದ್ರಹಾಸ್ ಕೆ. ಶೆಟ್ಟಿ ಮತ್ತು ಎಸ್. ಎಂ. ಶೆಟ್ಟಿ ಶೈಕ್ಷಣಿಕ ಸಂಸ್ಥೆಯ ಕಾರ್ಯಾಧ್ಯಕ್ಷ ಬಿ. ಆರ್. ಶೆಟ್ಟಿ ಹಾಗೂ ಬಂಟರ ಸಂಘ, ಪೊವಾಯಿ ಶಿಕ್ಷಣ ಸಂಸ್ಥೆಯ ಪದಾಧಿಕಾರಿಗಳು, ಟ್ರಸ್ಟಿಗಳು ರಾಷ್ಟ್ರ ಧ್ವಜಾರೋಹಣಗೈದು ಗೌರವ ಸಲ್ಲಿಸಿದರು. ಬಳಿಕ ಸಂಸ್ಥೆಯ ಆರ್. ಎನ್. ಶೆಟ್ಟಿ ಒಳಾಂಗಣ ಸಭಾಗೃಹ ದಲ್ಲಿ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಸ್ವಾತಂತ್ರ್ಯ ದಿನಾ ಚರಣೆ ಪ್ರಯಕ್ತ ಭಾಷಣ ಇನ್ನಿತರ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಸ್ಟೇಟ್ ಬೋರ್ಡ್ ಶಾಲೆ, ಜೂನಿಯರ್ ಕಾಲೇಜು ಮತ್ತು ಪದವಿ ಕಾಲೇಜು ವಿದ್ಯಾರ್ಥಿಗಳು ಮತ್ತು ಶಿಕ್ಷಕ ವೃಂದ ದೇಶಭಕ್ತಿಯನ್ನು ಬಿಂಬಿಸುವ ಹಾಗೂ ಶೈಕ್ಷಣಿಕ ವಿಷಯಾಧಾರಿತ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಿಕೊಟ್ಟರು. ಬಂಟರ ಸಂಘದ ಅಧ್ಯಕ್ಷ ಚಂದ್ರಹಾಸ್ ಕೆ. ಶೆಟ್ಟಿ ಮತ್ತು ಬಿ. ಆರ್. ಶೆಟ್ಟಿ, ಎಸ್. ಎಂ. ಶೆಟ್ಟಿ ಕಾಲೇಜಿನ ಪ್ರಾಂಶುಪಾಲ ಡಾ| ಶ್ರೀಧರ ಶೆಟ್ಟಿ, ಇಂಟರ್‌ನ್ಯಾಶನಲ್ ಶಾಲೆಯ ವಿದ್ಯಾರ್ಥಿನಿ ಸೌಮ್ಯ ಪಾಂಡೆ ಸ್ವಾತಂತ್ರ್ಯ ದಿನಾಚರಣೆಯ ಮಹತ್ವ ಮತ್ತು ಪ್ರಸ್ತುತತೆಯನ್ನು ವಿವರಿಸಿದರು.
ಕಾರ್ಯಕ್ರಮದಲ್ಲಿ ಬಂಟರ ಸಂಘ ಮುಂಬಯಿ ಉಪಾಧ್ಯಕ್ಷ ಉಳ್ತೂರು ಮೋಹನ್‌ದಾಸ್ ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಡಾ| ಆರ್. ಕೆ. ಶೆಟ್ಟಿ, ಜತೆ ಕೋಶಾಧಿಕಾರಿ ಮುಂಡಪ್ಪ ಎಸ್. ಪಯ್ಯಡೆ, ವಿಟ್ಠಲ್ ಎಸ್. ಆಳ್ವ, ರವೀಂದ್ರನಾಥ ಎಂ. ಭಂಡಾರಿ, ಎಸ್. ಎಂ. ಶೆಟ್ಟಿ ಸಂಸ್ಥೆಯ ಉಪ ಕಾರ್ಯಾಧ್ಯಕ್ಷರಾದ ರತ್ನಾಕರ ಶೆಟ್ಟಿ ಮುಂಡ್ಕೂರು ಮತ್ತು ವಸಂತ್ ಎನ್. ಶೆಟ್ಟಿ ಪಲಿಮಾರು, ಕಾರ್ಯದರ್ಶಿ ಸಿ. ಎಸ್. ಉತ್ತಮ್ ಶೆಟ್ಟಿ, ಕೋಶಾಧಿಕಾರಿ ಸಿಎ ಜಗದೀಶ್ ಬಿ. ಶೆಟ್ಟಿ, ಎಸ್. ಎಂ. ಶೆಟ್ಟಿ ಸಂಸ್ಥೆಯ ಸದಸ್ಯರಾದ ಮಹೇಶ್ ಎಸ್. ಶೆಟ್ಟಿ, ಡಾ| ಮನೋಹರ್ ಎಸ್. ಹೆಗ್ಡೆ, ರಾಜೇಂದ್ರ ಎಸ್. ಶೆಟ್ಟಿ, ನಿಶ್ಚಿತ್ ಶೆಟ್ಟಿ, ಭರತ್ ಶೆಟ್ಟಿ, ಗುಣಪಾಲ್ ಶೆಟ್ಟಿ ಐಕಳ, ನ್ಯಾಯವಾದಿ ಆರ್. ಜಿ. ಶೆಟ್ಟಿ, ಎಸ್. ಎಂ. ಶೆಟ್ಟಿ ರಾಜ್ಯ ಮಂಡಳಿ ಶಾಲಾ ಪ್ರಾಂಶುಪಾಲೆ ಸೀಮಾ ಸಬ್‌ಲೋಕ್, ಪ್ರಧಾನ ಪ್ರಬಂಧಕ ಡಾ| ಸಂದೀಪ್ ಸಿಂಗ್, ಶಿಕ್ಷಕರು, ಶಿಕ್ಷಕೇತರ ಸಿಬಂದಿ ಹಾಗೂ ಅಪಾರ ಸಂಖ್ಯೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
-ಚಿತ್ರ-ವರದಿ: ರೋನ್ಸ್ ಬಂಟ್ವಾಳ್