Advertisement

ಗುಜರಾತ್ ನ ಹಲವು ನಗರಗಳಲ್ಲಿ ಟೋಪಿ ಧರಿಸಿದ ಕೇಜ್ರಿವಾಲ್ ಬ್ಯಾನರ್ ಗಳು

05:46 PM Oct 08, 2022 | Team Udayavani |

ಸೂರತ್ : ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು “ಹಿಂದೂ ವಿರೋಧಿ” ಎಂದು ಬಣ್ಣಿಸುವ ಮತ್ತು ಸ್ಕಲ್ ಕ್ಯಾಪ್ ಧರಿಸಿರುವ ಭಾವಚಿತ್ರವಿರುವ ಬ್ಯಾನರ್‌ಗಳು ಶನಿವಾರ ಗುಜರಾತ್‌ನ ಹಲವಾರು ಪ್ರಮುಖ ನಗರಗಳಲ್ಲಿ ಕಾಣಿಸಿಕೊಂಡಿವೆ.

Advertisement

ಎಎಪಿ ನಾಯಕ ಕೇಜ್ರಿವಾಲ್ ವಿಧಾನಸಭೆ ಚುನಾವಣೆಗೆ ಮುನ್ನ ಆಪ್ ಪರ ಚುನಾವಣಾ ಪ್ರಚಾರಕ್ಕಾಗಿ ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ. ಕೇಜ್ರಿವಾಲ್ ಅವರ ಚಿತ್ರಗಳ ಜೊತೆಗೆ, ಕೆಲವು ಬ್ಯಾನರ್‌ಗಳು “ನಾನು ಹಿಂದೂ ಧರ್ಮವನ್ನು ಹುಚ್ಚುತನ ಎಂದು ಪರಿಗಣಿಸುತ್ತೇನೆ” ಎಂಬ ಸಾಲುಗಳನ್ನು ಹೊಂದಿದ್ದು, ಇನ್ನು ಕೆಲವು “ಹಿಂದೂ ವಿರೋಧಿ ಕೇಜ್ರಿವಾಲ್ ಗೋ ಬ್ಯಾಕ್” ಸಂದೇಶವನ್ನು ಬರೆಯಲಾಗಿದೆ.

ಆಮ್ ಆದ್ಮಿ ಪಕ್ಷದ ದೆಹಲಿ ಸಚಿವ ರಾಜೇಂದ್ರ ಪಾಲ್ ಗೌತಮ್ ಅವರು “ ಬೌದ್ಧ ಧಾರ್ಮಿಕ ಮತಾಂತರ” ಕಾರ್ಯಕ್ರಮವೊಂದರಲ್ಲಿ ಹಿಂದೂಗಳನ್ನು ಖಂಡಿಸುವ ಪ್ರಮಾಣ ವಚನ ಸ್ವೀಕರಿಸುತ್ತಿರುವುದನ್ನು ತೋರಿಸುವ ವಿಡಿಯೋ ವಿವಾದ ಭುಗಿಲೆದ್ದ ಒಂದು ದಿನದ ನಂತರ
ಅಹಮದಾಬಾದ್, ರಾಜ್‌ಕೋಟ್, ಸೂರತ್ ಮತ್ತು ವಡೋದರಾ ನಗರಗಳಲ್ಲಿ ಈ ಬ್ಯಾನರ್‌ಗಳು ಕಾಣಿಸಿಕೊಂಡಿವೆ.

ಬಿಜೆಪಿ ಸಚಿವರ ವಿರುದ್ಧ ವಾಗ್ದಾಳಿ ನಡೆಸಿದ್ದು, ಆಪ್ ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಆರೋಪಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next