Advertisement

ಕಾವೂರು: ಸಂತೆ ವ್ಯಾಪಾರಕ್ಕೆ ಅಡ್ಡಿ ಬ್ಯಾನರ್‌, ಡಿವೈಎಫ್‌ಐ ಪೊಲೀಸ್‌ ದೂರು

12:30 AM Jan 15, 2023 | Team Udayavani |

ಕಾವೂರು : ಕಾವೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೆಯ ಸಂದರ್ಭ ಅನ್ಯಮತೀಯರಿಗೆ ವ್ಯಾಪಾರಕ್ಕೆ ಅನುಮತಿಯಿಲ್ಲ ಎಂದು ವಿಹಿಂಪ/ ಬಜರಂಗದಳ ಹಾಕಿದ ಬ್ಯಾನರ್‌ ತೆರವಿಗೆ ಆಗ್ರಹಿಸಿ ಹಾಗೂ ಕರ್ತವ್ಯದಲ್ಲಿ ವಿಫಲರಾದ ಸ್ಥಳೀಯ ಠಾಣೆಯ ಪೊಲೀಸರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ಡಿವೈಎಫ್‌ಐ, ಸಿಪಿಐಎಂ ಸಂಘಟನೆ ಹಿರಿಯ ಪೊಲೀಸ್‌ ಆಯುಕ್ತರಿಗೆ ಮನವಿ ಸಲ್ಲಿಸಿತು.

Advertisement

ಸೌಹಾರ್ದದಿಂದ ಎಲ್ಲ ಧರ್ಮದವರೂ ಅನಾದಿ ಕಾಲದಿಂದಲೂ ಇಲ್ಲಿನ ಉತ್ಸವದ ಸಂದರ್ಭ ವ್ಯಾಪಾರ ಮಾಡುತ್ತಿದ್ದರು. ಆದರೆ ಜ. 10ರಂದು “ಅನ್ಯ ಧರ್ಮದವರು ಸಂತೆ ವ್ಯಾಪಾರ ನಡೆಸುವುದನ್ನು ಬಹಿಷ್ಠಾರ ಹಾಕಲಾಗಿದೆ’ ಎಂಬ ಜನಾಂಗೀಯ ನಿಂದನೆಯ ಬ್ಯಾನರ್‌ ಅಳವಡಿಸಲಾಗಿದೆ. ಈ ಬ್ಯಾನರನ್ನು ಸ್ಥಳೀಯ ಪೊಲೀಸರಿಗೆ ಹಾಗೂ ಎಸಿಪಿಯವರಿಗೆ ತಿಳಿಸಿದ ಮೇರೆಗೆ ತೆಗೆಯಲಾಗಿತು.

ಇದೀಗ ಆಡಳಿತ ಮಂಡಳಿಯ ತೀರ್ಮಾನ ಎಂದು ಪೊಲೀಸರು ಹೇಳಿದ್ದರೂ ವಿಹಿಂಪ ಬಜರಂಗದಳ ಹೆಸರಿನಲ್ಲಿ ಹಾಕಲಾಗಿದೆ. ಈ ಹಿನ್ನೆಲೆಯಲ್ಲಿ ಕರ್ತವ್ಯಲೋಪ ಎಸಗಿದ ಪೊಲೀಸರ ವಿರುದ್ದ ಕ್ರಮ ಜರಗಿಸಬೇಕೆಂದು ಸಂಘಟನೆ ಮುಖಂಡರು ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next