Advertisement

ಅನುತ್ಪಾದಕ ಆಸ್ತಿ ಮುಚ್ಚಿಡಲು ಬ್ಯಾಂಕುಗಳ ಯತ್ನ: ಶಕ್ತಿಕಾಂತ

09:37 PM May 29, 2023 | Team Udayavani |

ಮುಂಬೈ: ದೇಶದಲ್ಲಿನ ಬ್ಯಾಂಕುಗಳು ತಾವು ಹೊಂದಿರುವ ಅನುತ್ಪಾದಕ ಆಸ್ತಿಯ ನೈಜವಾಗಿರುವ ಅಂಶಗಳನ್ನು ಮರೆ ಮಾಚುತ್ತವೆ. ಹೀಗೆಂದು ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌ ಹೇಳಿದ್ದಾರೆ. ಮುಂಬೈನಲ್ಲಿ ಸೋಮವಾರ ಬ್ಯಾಂಕ್‌ಗಳ ನಿರ್ದೇಶಕರ ಮಂಡಳಿ ಸಭೆಯಲ್ಲಿ ಮಾತನಾಡಿದ ಅವರು, ಬ್ಯಾಂಕುಗಳು ಹೊಂದಿರುವ ಅನುತ್ಪಾದಕ ಆಸ್ತಿಯ ನೈಜ ಅಂವನ್ನು ಮುಚ್ಚಿಟ್ಟರೆ, ಅದರಿಂದ ಕ್ಷೇತ್ರದಲ್ಲಿ ಏರಿಳಿತಗಳು ಉಂಟಾಗುವ ಸಾಧ್ಯತೆಗಳು ಇವೆ. ಪರಿಶೀಲನೆಯ ಸಂದರ್ಭದಲ್ಲಿ ಬ್ಯಾಂಕುಗಳ ಕ್ರಮಗಳು ಆರ್‌ಬಿಐ ಗಮನಕ್ಕೆ ಬಂದಿವೆ. ಅದಕ್ಕಾಗಿ ಅವುಗಳು ನಾವೀನ್ಯ ರೀತಿಯ ಕ್ರಮಗಳನ್ನೂ ಅನುಸರಿಸುತ್ತಿವೆ ಎಂದೂ ಹೇಳಿದ್ದಾರೆ.

Advertisement

ಯಾವುದೇ ಬ್ಯಾಂಕುಗಳ ಹೆಸರು ಉಲ್ಲೇಖೀಸದೆ ಮಾತನಾಡಿದ ಅವರು, ಅನುತ್ಪಾದಕ ಆಸ್ತಿಯ ಪ್ರಮಾಣ ಮರೆ ಮಾಚುವ ವಿಚಾರದಲ್ಲಿ ಲೆಕ್ಕಪತ್ರದಲ್ಲೂ ಕೆಲವೊಂದು ಬದಲಾವಣೆ ಮಾಡಿದ ಅಂಶಗಳು ಬದಲಾವಣೆ ಮಾಡಿವೆ ಎಂದರು ಶಕ್ತಿಕಾಂತ ದಾಸ್‌. ಸಾಲಗಳನ್ನು ಯಾವತ್ತೂ ಊರ್ಜಿತದಲ್ಲಿಯೇ ಇರಿಸುವಂತೆ ಮಾಡುವ ಚಾಕಚತ್ಯತೆಯನ್ನೂ ಅನುಸರಿಸಲಾಗುತ್ತಿದೆ ಎಂದೂ ಅವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next