Advertisement
ವೇತನದಿಂದ ಪಿಂಚಣಿಯವರೆಗೆ, ಸಹಾಯಧನದಿಂದ ವಿವಿಧ ನೆರವಿನವರೆಗೆ ಎಲ್ಲವೂ ಈಗ ಬ್ಯಾಂಕ್ ಖಾತೆಗಳನ್ನೇ ಆಶ್ರಯಿಸಿದೆ. ಜನಧನ ಖಾತೆ ಆರಂಭವಾದ ಬಳಿಕವಂತೂ ಬಡವರೂ ಬ್ಯಾಂಕ್ ವ್ಯವಹಾರಗಳಿಗೆ ಒಗ್ಗಿಕೊಳ್ಳುವಂತಾಯಿತು. ಕೋವಿಡ್-19 ಸಂಕಷ್ಟ ಕಾಲದಲ್ಲಿ ಇಡೀ ದೇಶವೇ ಲಾಕ್‌ಡೌನ್ ಆಗಿ ಬಹುತೇಕ ಎಲ್ಲ ಕೆಲಸ ಕಾರ್ಯಗಳು ಸ್ಥಹಿತಗೊಂಡರೂ ಬ್ಯಾಂಕ್ ವ್ಯವಹಾರಗಳು ನಿರಾತಂಕವಾಗಿ ನಡೆದಿವೆ. ಜನಧನ ಖಾತೆಗೆ ಜಮಾ ಆಗಿರುವ ಹಣವನ್ನು ಜನರಿಗೆ ತಲುಪಿಸುವುದು ಸಹಿತ ಇತರ ಅಗತ್ಯಗಳನ್ನು ಪೂರೈಸಿವೆ. ಇದೇ ಸಂದರ್ಭ ವ್ಯವಹಾರದ ಸಂದರ್ಭ ಸಾಕಷ್ಟು ಮುನ್ನೆಚ್ಚರಿಕೆಗಳನ್ನೂ ತೆಗೆದುಕೊಳ್ಳಲಾಗಿದೆ. ಆರಂಭದಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು, ಅಲ್ಲಿನ ನಿಯಮಾವಳಿಗಳು ಸ್ವಲ್ಪ ಕಿರಿ ಕಿರಿ ಅನಿಸಿದರೂ ಈಗ ಜನರು ಅದಕ್ಕೆ ಹೊಂದಿಕೊಂಡಿದ್ದಾರೆ. ಮುಂದೆಯೂ ಮುಂಜಾಗ್ರತೆ ಗಳನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ವ್ಯವಹಾರ ನಡೆಸುವುದು ಎಲ್ಲರ ಜವಾಬ್ದಾರಿಯೂ ಆಗಿರುತ್ತದೆ.
1. ಬ್ಯಾಂಕಿಂಗ್ ಮತ್ತಿತರ ಸೇವೆಗಳು ಇರುವುದರಿಂದ ಎಲ್ಲ ಬ್ಯಾಂಕ್ ವ್ಯವಹಾರಗಳಿಗಾಗಿ ಬ್ಯಾಂಕ್‌ಗೆ ಬರಬೇಕಾದ ಅಗತ್ಯವಿಲ್ಲ. ತೀರಾ ಅನಿವಾರ್ಯವೆನಿಸಿದರೆ ಮಾತ್ರ ಬ್ಯಾಂಕಿಗೆ ಬಂದು ಕೆಲಸ ಮಾಡಿಸಿಕೊಳ್ಳಬಹುದು. 2. ಖಾಸಗಿ ಆ್ಯಪ್ ಗಳಿಗಿಂತ ಭೀಮ್‌ನಂತಹ ಸರಕಾರಿ ಆ್ಯಪ್‌ಗ್ಳು ಅಥವಾ ನಿಮ್ಮ ಖಾತೆಯಿರುವ ಬ್ಯಾಂಕ್‌ಗಳ ಅಧಿಕೃತ ಆ್ಯಪ್ ಗಳನ್ನು ಬಳಸಿ. ಅದು ಹೆಚ್ಚು ಸುರಕ್ಷಿತ. ಅದೂ ಅಲ್ಲದೆ ಎಲ್ಲ ಬ್ಯಾಂಕ್‌ಗಳು ಸಹಾಯವಾಣಿ ಸಂಖ್ಯೆ ಹೊಂದಿದ್ದು, ಅಲ್ಲಿಂದಲೂ ಸಾಕಷ್ಟು ಮಾಹಿತಿಗಳನ್ನು ಪಡೆಯಬಹುದು.
Related Articles
Advertisement
4. ಕೆಲವು ಎಟಿಎಂ ಕೇಂದ್ರಗಳಲ್ಲಿ ನಗದು ಹಣವನ್ನು ಖಾತೆಗೆ ಜಮೆ ಮಾಡುವ ಸೌಲಭ್ಯವೂ ಇದೆ. ಇದರಿಂದ ಜಾಸ್ತಿ ಜನ ಸೇರುವ ಬ್ಯಾಂಕ್‌ಗೆ ಹೋಗುವುದನ್ನು ತಪ್ಪಿಸಿಕೊಳ್ಳಬಹುದು. ಈ ಸೇವೆ ಬಳಸುವ ಸಂದರ್ಭ ಮುಖಕ್ಕೆ ಮಾಸ್ಕ್ ಬಳಕೆ, ಹ್ಯಾಂಡ್ ಸ್ಯಾನಿಟೈಸರ್ ಉಪಯೋಗ ಕಡ್ಡಾಯವಾಗಿ ಮಾಡಿ.
5. ಸಾಮಾನ್ಯವಾಗಿ ಬೆಳಗ್ಗೆ ಬ್ಯಾಂಕ್‌ಗಳಲ್ಲಿ ಜನಸಂದಣಿ ಜಾಸ್ತಿಯಿರುತ್ತದೆ. ಸಂಜೆ 4 ಗಂಟೆಯ ವರೆಗೂ ಎಲ್ಲ ರೀತಿಯ ಹಣದ ವಹಿವಾಟುಗಳು ನಡೆಯುವುದರಿಂದ ಮಧ್ಯಾಹ್ನದ ಅನಂತರ ಕೂಡ ಬ್ಯಾಂಕ್‌ಗಳಿಗೆ ತೆರಳಬಹುದು. ಇದರಿಂದ ಸಾಮಾಜಿಕ ಅಂತರ ಕಾಯುವುದು ಸುಲಭವಾಗುವುದು.
6. ಬ್ಯಾಂಕ್ ಎಟಿಎಂ ಕಾರ್ಡ್‌ಗಳ ಪಿನ್ ಸಂಖ್ಯೆಯನ್ನೂ ಯಾರು ಕೇಳಿದರೂ ಕೊಡಬೇಡಿ. ಬ್ಯಾಂಕ್‌ನವರಂತೂ ಕೇಳುವುದಿಲ್ಲ. ಬೇರೆಯವರಿಗೆ ಪಿನ್ ಸಂಖ್ಯೆ ಕೊಟ್ಟರೆ ನಿಮ್ಮ ಬ್ಯಾಂಕ್ ಖಾತೆಯ ಹಣವನ್ನು ಲಪಟಾಯಿಸುವ ಸಾಧ್ಯತೆಯೇ ಹೆಚ್ಚು. ಅದನ್ನು ಸಾಧ್ಯವಾದಷ್ಟು ಗೌಪ್ಯವಾಗಿಯೂ ಇರಿಸಿ.
ನಿಮಗೆ ಏನಾದರೂ ಸಂಶಯ, ಪ್ರಶ್ನೆಗಳಿದ್ದರೆ ಈ ನಂಬರಿಗೆ ವಾಟ್ಸಪ್ ಮಾಡಿ. 9148594259