ಹೊಸದಿಲ್ಲಿ : ಬ್ಯಾಂಕಿಂಗ್ ರಂಗದಲ್ಲಿ ಕೇಂದ್ರ ಸರಕಾರ ತಂದಿರುವ ಸುಧಾರಣಾ ಕ್ರಮಗಳನ್ನು ಇನ್ನಷ್ಟು ಬಲಪಡಿಸುವ ಕ್ರಮಕ್ಕೆ ಮುಂದಾಗಿರುವುದನ್ನು ವಿರೋಧಿಸಿ ಬ್ಯಾಂಕ್ ನೌಕರರ ಸಂಘಟನೆಗಳು UFBU ಸಂಘಟನೆಯ ಆಸರೆಯಲ್ಲಿ ನಾಳೆ ಮಂಗಳವಾರ ಮುಷ್ಕರ ನಡೆಸಲಿರುವ ಕಾರಣ ನಾಳೆ ಬ್ಯಾಂಕಿಂಗ್ ಸೇವೆ ದೇಶಾದ್ಯಂತ ಬಾಧಿತವಾಗಲಿದೆ.
ನಾಳೆ ಮಂಗಳವಾರ ಬ್ಯಾಂಕ್ ನೌಕರರ ಮುಷ್ಕರ ನಡೆಯುವ ಸಾಧ್ಯತೆ ಇರುವುದರಿಂದ ಬ್ಯಾಂಕಿಂಗ್ ಸೇವೆ ಬಾಧಿತವಾಗಲಿದೆ ಎಂಬ ಮಾಹಿತಿಯನ್ನು ಹೆಚ್ಚಿನ ಬ್ಯಾಂಕುಗಳು ಈಗಾಗಲೇ ತಮ್ಮ ಗ್ರಾಹಕರಿಗೆ ನೀಡಿವೆ.
ಹಾಗಿದ್ದರೂ ಖಾಸಗಿ ಬ್ಯಾಂಕ್‌ಗಳಾಗಿರುವ ಐಸಿಐಸಿಐ ಬ್ಯಾಂಕ್, ಎಚ್ ಡಿ ಎಫ್ ಸಿ ಬ್ಯಾಂಕ್, ಆ್ಯಕ್ಸಿಸ್ ಬ್ಯಾಂಕ್, ಕೋಟಕ್ ಮಹೀಂದ್ರ ಬ್ಯಾಂಕ್‌ಗಳಲ್ಲಿನ, ಸಾಮಾನ್ಯ ಚೆಕ್ ವಟಾವಣೆಯಲ್ಲಿನ ವಿಳಂಬವನ್ನು ಹೊರತು ಪಡಿಸಿದರೆ, ಗ್ರಾಹಕ ಸೇವೆಯಲ್ಲಿ ಯಾವುದೆ ಅಡಚಣೆ ಇರುವುದಿಲ್ಲ.
ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ (UFBU) ಸಂಘಟನೆಯಡಿ ಒಂದು ಬ್ಯಾಂಕ್ ಯೂನಿಯನ್‌ಗಳಿವೆ. ಇವುಗಳಲ್ಲಿ ಐಬೋಕ್, ಎಐಬಿಇಎ ಮತ್ತು ಎನ್‌ಓಬಿಡಬ್ಯು ಸಂಘಟನೆಗಳು ಸೇರಿವೆ.
ಬ್ಯಾಂಕ್ ನೌಕರರ ಬೇಡಿಕೆಗಳನ್ನು ಈಡೇರಿಸುವ ಎಲ್ಲ ಮಾತುಕತೆಗಳು ವಿಫಲವಾಗಿರುವುದರಿಂದ, ಬ್ಯಾಂಕ್ ನೌಕರರ ಸಂಘಟನೆಗಳು ತಾವು ಈಗಾಗಲೇ ಕೊಟ್ಟಿರುವ ನೊಟೀಸಿನ ಪ್ರಕಾರ ಆ.22ರ ಮಂಗಳವಾರ ಮುಷ್ಕರ ನಡೆಸುವುದು ಬಹುತೇಕ ಖಚಿತವಿದೆ ಎಂದು ಮೂಲಗಳು ತಿಳಿಸಿವೆ.