Advertisement

ಬ್ಯಾಂಕ್‌ ನೌಕರರ 2ನೇ ದಿನದ ಮುಷ್ಕರ; ಸೇವೆಗಳು ತೀವ್ರ ಬಾಧಿತ

12:01 PM May 31, 2018 | udayavani editorial |

ಹೊಸದಿಲ್ಲಿ : ಹತ್ತು ಲಕ್ಷ  ಬ್ಯಾಂಕ್‌ ನೌಕರರರ ಮುಷ್ಕರದ ಎರಡನೇ ದಿನವಾದ ಇಂದು ಗುರುವಾರ ಕೂಡ ದೇಶಾದ್ಯಂತ ಬ್ಯಾಂಕ್‌ ಸೇವೆಗಳು ತೀವ್ರವಾಗಿ ಬಾಧಿತವಾದವು. 

Advertisement

ಬ್ಯಾಂಕ್‌ ಮುಷ್ಕರ ಸಂಪೂರ್ಣವಾಗಿ ಯಶಸ್ವಿಯಾಗಿದೆ ಎಂದು ಈ ನಡುವೆ UFBU ಹೇಳಿಕೊಂಡಿದೆ. ಎಲ್ಲ ಬ್ಯಾಂಕುಗಳಲ್ಲಿ ಮತ್ತು ಅವುಗಳ ಎಲ್ಲ ಶಾಖೆಗಳಲ್ಲಿ ನೌಕರರು ಅತ್ಯುತ್ಸಾಹದಿಂದ ಮುಷ್ಕರದಲ್ಲಿ ಪಾಲ್ಗೊಂಡಿದ್ದಾರೆ ಎಂದು ಅದು ತಿಳಿಸಿದೆ. 

ನಾಳೆ ಶುಕ್ರವಾರ ಬ್ಯಾಂಕ್‌ಗಳ ಕಾರ್ಯ ಕಲಾಪಗಳು ಮತ್ತೆ ಮಾಮೂಲಿಯಾಗಿ ನಡೆಯಲಿವೆ. 

ಬ್ಯಾಂಕ್‌ ನೌಕರರ ಮಾಸಿಕ ವೇತನವನ್ನು ಕೇವಲ ಶೇ.2ರಷ್ಟು ಏರಿಸುವ ಪ್ರಸ್ತಾವವನ್ನು ಇಂಡಿಯನ್‌ ಬ್ಯಾಂಕ್ಸ್‌ ಅಸೋಸಿಯೇಶನ್‌ (ಐಬಿಎ) ಮುಂದಿಟ್ಟಿರುವುದನ್ನು ಪ್ರತಿಭಟಿಸಿ ಬ್ಯಾಂಕ್‌ ಉದ್ಯೋಗಿಗಳು ಎರಡು ದಿನಗಳ ದೇಶ ವ್ಯಾಪಿ ಮುಷ್ಕರದಲ್ಲಿ ತೊಡಗಿದ್ದಾರೆ. 

ಹಳೇ ತಲೆಮಾರಿನ ಖಾಸಗಿ ರಂಗದ ಬ್ಯಾಂಕುಗಳು ಮತ್ತು ವಿದೇಶಿ ಬ್ಯಾಂಕುಗಳ ನೌಕರರ ಬೆಂಬಲದಲ್ಲಿ ಇಂದು ಗುರುವಾರ ಕೂಡ ನಡೆಯುತ್ತಿರುವ ಈ  ಮುಷ್ಕರ ಗ್ರಾಹಕರನ್ನು ಬಾಧಿಸುತ್ತಿವೆ. 

Advertisement

ಹೊಸ ತಲೆಮಾರಿನ ಖಾಸಗಿ ಬ್ಯಾಂಕುಗಳಾದ ಐಸಿಐಸಿಐ ಬ್ಯಾಂಕ್‌, ಎಚ್‌ಡಿಎಫ್ಸಿ ಬ್ಯಾಂಕ್‌, ಎಕ್ಸಿಸ್‌ ಬ್ಯಾಂಕ್‌ಗಳಲ್ಲಿ, ಚೆಕ್‌ ಕ್ಲಿಯರೆನ್ಸ್‌ ಸೇರಿದಂತೆ ಕೆಲವೇ ಕೆಲವು ಚಟುವಟಿಕೆಗಳನ್ನು ಹೊರತು ಪಡಿಸಿ, ಉಳಿದೆಲ್ಲ ಚಟುವಟಿಕೆಗಳು ಎಂದಿನಂತೆ ಮಾಮೂಲಿಯಾಗಿ ಸಾಗುತ್ತಿರುವುದಾಗಿ ವರದಿಗಳು ತಿಳಿಸಿವೆ. 

ಕೇರಳ, ಪಶ್ಚಿಮ ಬಂಗಾಲ, ಬಿಹಾರ ಮತ್ತು ಜಾರ್ಖಂಡ್‌ ಮೊದಲಾದ ರಾಜ್ಯಗಳಲ್ಲಿ ಬ್ಯಾಂಕ್‌ ಮುಷ್ಕರದ ಬಿಸಿ ಗ್ರಾಹಕರನ್ನು ತೀವ್ರವಾಗಿ ತಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next