Advertisement

ಕಿರುಕುಳ ಅನುಭವಿಸಿದವರಿಗೆ ಉತ್ತಮ ನಾಳೆ: ಮೋದಿ

08:53 AM Dec 08, 2019 | Team Udayavani |

ಹೊಸದಿಲ್ಲಿ: ಪಾಕಿಸ್ಥಾನ, ಅಫ್ಘಾನಿಸ್ಥಾನ, ಬಾಂಗ್ಲಾದೇಶಗಳಲ್ಲಿ ಕಿರುಕುಳ ಅನುಭವಿಸುತ್ತಿದ್ದವರಿಗೆ ಉತ್ತಮ ನಾಳೆಯ ಅವಕಾಶವನ್ನು ಕಲ್ಪಿಸುವುದೇ ಪೌರತ್ವ (ತಿದ್ದುಪಡಿ) ವಿಧೇಯಕದ ಉದ್ದೇಶವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

Advertisement

ಹೊಸದಿಲ್ಲಿಯಲ್ಲಿ ನಡೆದ ‘ದ ಹಿಂದುಸ್ತಾನ್‌ ಟೈಮ್ಸ್‌ ನಾಯಕತ್ವ ಶೃಂಗ’ದಲ್ಲಿ ಮಾತನಾಡಿದ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪೌರತ್ವ (ತಿದ್ದುಪಡಿ) ಕಾಯ್ದೆಗೆ ಹಲವು ಆಕ್ಷೇಪಗಳು ವ್ಯಕ್ತವಾಗಿರುವಂತೆಯೇ ಪ್ರಧಾನಿ ಮೋದಿ ತಮ್ಮ ಮೊದಲ ಅಭಿಪ್ರಾಯ ನೀಡಿದ್ದಾರೆ.

ಸರಕಾರಿ ಸ್ವಾಮ್ಯದ ಬ್ಯಾಂಕುಗಳನ್ನು ವಿಲೀನಗೊಳಿಸಲು ನಮ್ಮ ಸರಕಾರ ಧೈರ್ಯ ಮಾಡಿದ ಕಾರಣ, ಬ್ಯಾಂಕುಗಳ ಮರುಬಂಡ ವಾಳೀಕರಣ ಸಾಧ್ಯವಾಯಿತು. ಜತೆಗೆ, ಅವುಗಳು ಬಲಿಷ್ಠಗೊಳ್ಳಲೂ ನೆರವಾಯಿತು. ನಮ್ಮ ನಿರ್ಧಾರಗಳಿಂದಾಗಿ ಬ್ಯಾಂಕಿಂಗ್‌ ವಲಯವು ಈ ಹಿಂದಿಗಿಂತ ಈಗ ಬಲಿಷ್ಠವಾಗಿವೆ ಎಂದಿದ್ದಾರೆ ಮೋದಿ.

ಜತೆಗೆ, ನಿಮ್ಮ ವಹಿವಾಟಿನ ನಿರ್ಧಾರಗಳನ್ನು ನಾವು ಪ್ರಶ್ನಿಸುವುದಿಲ್ಲ ಎಂಬ ಭರವಸೆಯನ್ನೂ ಬ್ಯಾಂಕಿಂಗ್‌ ಅಧಿಕಾರಿಗಳಿಗೆ ನೀಡಿದ್ದಾರೆ. ಬ್ಯಾಂಕಿಂಗ್‌ ವಲಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದೂ ಅವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next