Advertisement

ಆಚಾರ್ಯಾಸ್ AACE: ಜೂನ್ 22 ರಿಂದ ಬ್ಯಾಂಕಿಂಗ್ ಪರೀಕ್ಷೆಗೆ ತರಬೇತಿ

10:55 AM Jun 17, 2019 | Hari Prasad |

ಉಡುಪಿ: ಒಂಭತ್ತನೇ,ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಸಿ.ಇ.ಟಿ.,ನೀಟ್, ಜೆ.ಇ.ಇ ಮೇನ್‌ಸ್‌, ಕಾಮರ್ಸ್ ಹಾಗೂ ಬ್ಯಾಂಕಿಂಗ್ ಪರೀಕ್ಷೆಗಳಿಗೆ ಉತ್ಕ್ರಷ್ಟ ಗುಣಮಟ್ಟದ ತರಬೇತಿ ಆಯೋಜಿಸುತ್ತಿರುವ ಆಚಾರ್ಯಾಸ್ ಏಸ್ ಸಂಸ್ಥೆಯು ಬ್ಯಾಕಿಂಗ್ ಹಾಗೂ ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಗರಿಷ್ಠ ಫಲಿತಾಂಶಕ್ಕಾಗಿ “ನೂತನ ರೀತಿಯ ತರಬೇತಿಯನ್ನು ಪ್ರಸಿದ್ಧ ಸಂಪನ್ನೂಲ ವ್ಯಕ್ತಿಗಳಿಂದ ಹಮ್ಮಿಕೊಂಡಿದೆ.

Advertisement

IBPS ಹಾಗೂ ಇತರೇ ಬ್ಯಾಂಕ್‌ ಗಳು ಅಯೋಜಿಸಲಿರುವ SBI ಪಿ.ಓ ಮತ್ತು ಕ್ಲರ್ಕ್ ಹುದ್ದೆಗಳಿಗಾಗಿ ಪರೀಕ್ಷೆಗಳು ಜರಗಲಿದೆ ಈ ಪ್ರಯುಕ್ತ ಸಂಜೆಯ ಮತ್ತು ವಾರಾಂತ್ಯದ ತರಗತಿಗಳು ಜೂನ್ 22 ರಿಂದ ಆರಂಭವಾಗಲಿದೆ. ವಾರಂತ್ಯದ ತರಗತಿಗಳು ಶನಿವಾರ 2.00 ರಿಂದ 5.00 ರವರೆಗೆ ಹಾಗೂ ಭಾನುವಾರ 9.30 ರಿಂದ 5.00 ರವರಗೆ ಜರಗಲಿದೆ.

ಸಂಜೆಯ ತರಗತಿಗಳು 5.00 ರಿಂದ 6.30 ರವರೆಗೆ ಸೋಮವಾರದಿಂದ ಶನಿವಾರದವರೆಗೆ ನಡೆಯಲಿದೆ. ಕಳೆದ 4 ವರ್ಷಗಳಿಂದ ಬ್ಯಾಂಕಿಂಗ್ ಪರೀಕ್ಷೆಗಾಗಿ ತರಬೇತಿಯನ್ನು ಯಶಸ್ವಿಯಾಗಿ ಆಯೋಜಿಸುತ್ತಿದ್ದು ಈಗಾಗಲೇ 550ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಬ್ಯಾಂಕ್ ಸೇರಿದಂತೆ ವಿವಿಧ ಪ್ರತ್ಠಿಷ್ಠಿತ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಈ ತರಬೇತಿಯ ಸಂದರ್ಭದಲ್ಲಿ ರೈಲ್ವೇಸ್, ಇನ್ಸೂರೆನ್‌ಸ್‌, ಐಟಿ ಹಾಗೂ ಇನ್ನೂ ವಿವಿಧ ಮಾದರಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸಲಾಗುವುದು.

ಬ್ಯಾಂಕಿಂಗ್ ಪರೀಕ್ಷೆಗಳು ಪ್ರಿಲಿಮ್ಸ್ ಹಾಗೂ ಮೇನ್ಸ್ ಮಾದರಿಯಲ್ಲಿ ಜರಗಲಿದ್ದು, ಮ್ಯಾಥ್ಸ್, ರೀಸನಿಂಗ್, ಇಂಗ್ಲೀಷ್, ಜಿ.ಕೆ, ಕರೆಂಟ್ ಅಫೇರ್ಸ್, ಕಂಪ್ಯೂಟರ್ ನಾಲೆಡ್ಜ್ ಹಾಗೂ ಬ್ಯಾಂಕಿಂಗ್ ಕ್ಷೇತ್ರಗಳಿಗೆ ಸಂಬಂಧಿಸಿದ ಆಡಳಿತ ಹಾಗೂ ಆರ್ಥಿಕ ಕ್ಷೇತ್ರಗಳ ವಿಚಾರಗಳ ಬಗ್ಗೆ ಪ್ರಶ್ನೆಗಳನ್ನು ಹೊಂದಿರುತ್ತದೆ. ಅಲ್ಲದೆ ಕನಿಷ್ಠ ಅವಧಿಯಲ್ಲಿ ಗರಿಷ್ಠ ಪ್ರಶ್ನೆಗಳನ್ನು ಅತ್ಯಂತ ನಿಖರತೆಯಿಂದ ಉತ್ತರಿಸುವ ಪ್ರತಿಭೆಯನ್ನು ಪರೀಕ್ಷಾರ್ಥಿಗಳು ಅರಿತಿರಬೇಕು. ಈ ನಿಟ್ಟಿನಲ್ಲಿ ವೇಗ ಮತ್ತು ನಿಖರತೆಯ ಪರಿಣತೆಗಾಗಿ ಅನುಭವೀ ಪ್ರತಿಭಾನ್ವಿವಿತ ಪ್ರಾಧ್ಯಾಪಕರಿಂದ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ.

Advertisement

ತರಬೇತಿಯ ಸಂದರ್ಭದಲ್ಲಿ ಈ ಎಲ್ಲಾ ವಿಷಯಗಳ ಕುರಿತಾಗಿ ಪರಿಷ್ಕೃತ ಮಾಹಿತಿಯನ್ನೊಳಗೊಂಡ ಉಪಯುಕ್ತ ಕೃತಿಗಳನ್ನು ನೀಡಲಾಗುವುದು. ತರಬೇತಿಯ ಅಂತ್ಯದಲ್ಲಿ ಮಾದರಿ ಆನ್‌ಲೈನ್ ಪರೀಕ್ಷೆಗಳನ್ನು ಆಯೋಜಿಸಲಾಗುತ್ತಿದೆ. ವಿದ್ಯಾರ್ಥಿಗಳಿಗೆ ವಿವಿಧ ಪ್ರಕಾಶಕರುಗಳ ಕೃತಿಗಳನ್ನು ಗ್ರಂಥಾಲಯದ ವ್ಯವಸ್ಥೆಗಳ ಮೂಲಕ ನೀಡಲಾಗುವುದು.

ಈ ತರಬೇತಿಯು ಉಡುಪಿ ತೆಂಕಪೇಟೆಯ ಶ್ರೀ ಲಕ್ಷ್ಮೀ ವೆಂಕಟರಮಣ ದೇವಾಲಯದ ಮುಂಭಾಗದಲ್ಲಿರುವ ಏಸ್ ಸೆಂಟರ್‌ನಲ್ಲಿ ಜರಗಲಿದ್ದು ಆಸಕ್ತ ವಿದ್ಯಾರ್ಥಿಗಳು ಈ ಕಛೇರಿಯನ್ನು(0820-4299111) ಸಂಪರ್ಕಿಸಬೇಕೆಂದು ಸಂಸ್ಥೆಯ ನಿರ್ದೇಶಕ ಪಿ.ಲಾತವ್ಯ ಆಚಾರ್ಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next