ಉಡುಪಿ: ಎಸೆಸೆಲ್ಸಿ, ಪಿಯುಸಿ, ಸಿಇಟಿ, ನೀಟ್, ಜೆಇಇ ಮೇನ್ಸ್ ಹಾಗೂ ಬ್ಯಾಂಕಿಂಗ್ ಪರೀಕ್ಷೆಗಳಿಗೆ ಉತ್ಕೃಷ್ಟ ಗುಣಮಟ್ಟದ ತರಬೇತಿ ಅಯೋಜಿಸುತ್ತಿರುವ ಶೀರೂರು ಪ್ರತಿಷ್ಠಾನದ ಆಚಾರ್ಯಾಸ್ ಏಸ್ ವತಿಯಿಂದ ಬ್ಯಾಂಕಿಂಗ್ ಪ್ರವೇಶ ಪರೀಕ್ಷೆಗೆ ಸಂಬಂಧಿಸಿದ ವಿನೂತನ ಕೃತಿಯನ್ನು ಲೋಕಾರ್ಪಣೆಗೊಳಿಸಲಾಯಿತು.
ಮುಂಬರುವ ತಿಂಗಳಲ್ಲಿ ಎಸ್‌ಬಿಐ, ಐಬಿಪಿಯಸ್, ಕರ್ನಾಟಕ ಬ್ಯಾಂಕ್ ಹಾಗೂ ಅನೇಕ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ 50,000ಕ್ಕೂ ಮಿಕ್ಕಿ ಆಫೀಸರ್ ಹಾಗೂ ಕ್ಲರ್ಕ್ ಹುದ್ದೆಗಳಿಗಾಗಿ ಪ್ರವೇಶ ಪರೀಕ್ಷೆಗಳು ಜರಗಲಿದೆ. ಈ ಪ್ರಯುಕ್ತ ಈ ಕೃತಿಯನ್ನು ಏಸ್ ಸಂಸ್ಥೆಯಲ್ಲಿ ಅಧ್ಯಯನ ಸಡೆಸುತ್ತಿರುವ ವಿದ್ಯಾರ್ಥಿಗಳಿಗೆ ಸಂಸ್ಥೆ ವತಿಯಿಂದ ಉಚಿತವಾಗಿ ನೀಡಲಾಯಿತು. ಏಸ್ ಸಂಸ್ಥೆಯ ಬ್ಯಾಂಕಿಂಗ್ ಪರೀಕ್ಷೆಯ ಕೃತಿಯು ವಿವಿಧ ಬ್ಯಾಂಕಿಂಗ್ ಪರೀಕ್ಷೆಗಳ ಆಯೋಜನೆಯಲ್ಲಿ ಪ್ರಮುಖರೆನಿಸಿಕೊಂಡಿದ್ದ ಪ್ರತಿಭಾನ್ವಿತರ ಬಳಗದವರಿಂದ ರಚಿತವಾಗಿದೆ. ಕಳೆದ 2 ವರ್ಷಗಳಲ್ಲಿ ಏಸ್ ಸಂಸ್ಥೆಯಲ್ಲಿ ತರಬೇತಿ ಪಡೆದ 256 ವಿದ್ಯಾರ್ಥಿಗಳು ಬ್ಯಾಂಕ್ ಸೇರಿದಂತೆ ವಿವಿಧ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಕೃತಿಯನ್ನು ಏಸ್ ಸಂಸ್ಥೆಯ ನಿರ್ದೇಶಕ ಪಿ. ಲಾತವ್ಯ ಆಚಾರ್ಯ ವಿದ್ಯಾರ್ಥಿಗಳಿಗೆ ನೀಡಿ
ಶುಭ ಹಾರೈಸಿದರು. ಸಂಸ್ಥೆಯ ಕೃಷ್ಣಪ್ರಸಾದ್, ವರುಣ್ ಪ್ರಭು, ಅಮೃತ್, ಪಿ. ಅಕ್ಷೊàಭ್ಯ ಆಚಾರ್ಯ ಉಪಸ್ಥಿತರಿದ್ದರು.
ಬ್ಯಾಂಕಿಂಗ್ ಪರೀûಾ ತರಬೇತಿಗೆ ಪ್ರಸಿದ್ದಿ ಗಳಿಸಿರುವ ಏಸ್ ಸಂಸ್ಥೆಯು ಆ. 1ರಿಂದ ಹೊಸ ಬ್ಯಾಚ್ ಅನ್ನು ಆರಂಭಿಸಲಿದೆ. ದೈನಂದಿನ ಹಾಗೂ ವಾರಾಂತ್ಯದ ತರಗತಿಗಳು ಎನ್ನುವ ಮಾದರಿಯಲ್ಲಿ ಜರಗಲಿದೆ. ದೈನಂದಿನ ತರಗತಿಗಳು ಪ್ರತೀ ಸೋಮವಾರದಿಂದ ಶನಿವಾರದವರೆಗೆ ಬೆಳಗ್ಗೆ 9.30ರಿಂದ ಮಧ್ಯಾಹ್ನ 1ರ ವರಗೆ ಜರಗಲಿದೆ. ವಾರಾಂತ್ಯದ ತರಗತಿಗಳು ಶನಿವಾರ ಸಂಜೆ ಹಾಗೂ ಭಾನುವಾರ ಬೆಳಗ್ಗೆಯಿಂದ ಸಂಜೆಯವರಗೆ ಜರಗಲಿದೆ.
ಬ್ಯಾಂಕಿಂಗ್ ಪರೀಕ್ಷೆಯು ಮ್ಯಾಥ್ಸ್, ರೀಸನಿಂಗ್, ಇಂಗ್ಲೀಷ್, ಜಿಕೆ, ಕರೆಂಟ್ ಅಫೇರ್, ಕಂಪ್ಯೂಟರ್ ನಾಲೆಡ್ಜ್ ಹಾಗೂ ಬ್ಯಾಂಕಿಂಗ್ ಕ್ಷೇತ್ರಗಳಿಗೆ ಸಂಬಂಧಿಸಿದ ಆಡಳಿತ ಹಾಗೂ ಆರ್ಥಿಕ ಕ್ಷೇತ್ರಗಳ ವಿಚಾರಗಳ ಬಗ್ಗೆ ಪ್ರಶ್ನೆಗಳನ್ನು ಹೊಂದಿರುತ್ತದೆ. ಮ್ಯಾಥ್ಸ್, ರೀಸನಿಂಗ್, ಇಂಗ್ಲಿಷ್, ಪರೀಕ್ಷೆಗಳಲ್ಲಿ ನಿರೀಕ್ಷಿತ ಹಾಗೂ ಅತ್ಯಂತ ಸಾಮೀಪ್ಯತೆಯನ್ನು ಹೊಂದಿರುವ ಪ್ರಶ್ನೆಗಳು, ಮೆಥಡ್ಸ್, ಕೀ, ಸೊಲ್ಯೂಷನ್ಸ್‌ಗಳೊಂದಿಗೆ ಪ್ರಶ್ನೋತ್ತರ ಮಾಲೆಗಳನ್ನು ರೂಪಿಸಿದ್ದು ಸುಧಾರಿತ ಶಾಟ್ಕìಟ್ ಮೆಥಡ್ಸ್‌ಗಳನ್ನು ಕೂಡ ಇಲ್ಲಿ ನೀಡಲಾಗಿದೆ. ಕನಿಷ್ಠ ಅವಧಿಯಲ್ಲಿ ಗರಿಷ್ಠ ಪ್ರಶ್ನೆಗಳನ್ನು ಅತ್ಯಂತ ನಿಖರತೆಯಿಂದ ಉತ್ತರಿಸುವ ಸಲುವಾಗಿ ವೇಗ ಮತ್ತು ನಿಖರತೆಯ ಪರಿಣತೆಗಾಗಿ ಪ್ರಾಧ್ಯಾಪಕರಿಂದ ಪ್ರತ್ಯೇಕ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲಾಗಿದೆ.
ತರಬೇತಿಯ ಅಂತ್ಯದಲ್ಲಿ ಮಾದರಿ ಆನ್‌ಲೈನ್ ಪರೀಕ್ಷೆಗಳನ್ನು ಆಯೋಜಿಸಲಾಗುತ್ತಿದೆ.
ಈ ತರಬೇತಿಯು ಉಡುಪಿಯ ಪ್ರಧಾನ ಅಂಚೆ ಕಚೇರಿಯ ಮುಂಭಾಗದ ಶ್ರೀರಾಮ್ ಆರ್ಕೆಡ್‌ನ 3ನೇ ಮಹಡಿಯಲ್ಲಿರುವ ಏಸ್ ಬ್ಯಾಂಕ್ ಎಕ್ಸಾಮ್ ಟ್ರೆ„ನಿಂಗ್ ಸೆಂಟರ್‌ನಲ್ಲಿ ಜರಗಲಿದೆ. ಆಸಕ್ತರು ಕಚೇರಿ ಸಂಪರ್ಕಿಸಬಹುದು ಎಂದು ಸಂಸ್ಥೆಯ ನಿರ್ದೇಶಕ ಪಿ. ಲಾತವ್ಯ ಆಚಾರ್ಯ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.