Advertisement
ವರದಾ ನದಿಯಿಂದ ಬಂಕಾಪುರ, ಸವಣೂರ, ಶಿಗ್ಗಾವಿ ಪಟ್ಟಣಕ್ಕೆ ಶಾಶವತ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಜಲ ಸಂಪನ್ಮೂಲ ಸಚಿವರಿದ್ದಾಗ ಸುಮಾರು 35 ಕೋಟಿ ರೂ. ವೆಚ್ಚದಲ್ಲಿ ಯೋಜನೆ ರೂಪಿಸಿ, ಅನುಷ್ಠಾನಕ್ಕೆ ತಂದು ಕುಡಿಯುವ ನೀರು ಪೂರೈಕೆಗೆ ಚಾಲನೆ ನೀಡಿದ್ದರು. ಈ ಯೋಜನೆಯಡಿ ಬಂಕಾಪುರ ಪಟ್ಟಣದ ಜನತೆಗೆ ಕುಡಿಯುವ ನೀರು ಪೂರೈಸಲು ಸವಣೂರ ತಾಲೂಕಿನ ಹಲಸೂರ ಹತ್ತಿರದ ವರದಾ ನದಿ ದಡದಲ್ಲಿ ಜಾಕ್ ವೆಲ್ ನಿರ್ಮಿಸಲಾಗಿದೆ. ಸುಮಾರು ಒಂದು ವರ್ಷದಿಂದ ಅಲ್ಲಿ ಕೆಲಸ ಮಾಡುವ ನೌಕರರಿಗೆ ವೇತನ ಪಾವತಿ ಮಾಡದಿರುವುದರಿಂದ ಈ ಯೋಜನೆ ಸ್ಥಗಿತಗೊಂಡು ಪಟ್ಟಣದ ಜನತೆ ನೀರು ಸಿಗದಾಗಿತ್ತು. ಸಾಕಷ್ಟು ನೀರು ಸಂಗ್ರಹವಿದ್ದರೂ ಸರಿಯಾಗಿ ಸದ್ಭಳಕೆಯಾಗದೇ ಜನತೆ ನೀರಿಗಾಗಿ ಪರದಾಡುವಂತಾಗಿತ್ತು. ಜಾಕ್‌ವೆಲ್‌ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರ ಸಮಸ್ಯೆಯನ್ನು ಪುರಸಭೆ ಆಡಳಿತ ಇತ್ತೀಚೆಗೆ ಬಗೆಹರಿಸಿದ ಹಿನ್ನೆಲೆಯಲ್ಲಿ ನೀರು ಪೂರೈಸುವ ಜಾಕ್‌ವೆಲ್‌ಗೆ ಪುರಸಭೆ ಮುಖ್ಯಾಧಿಕಾರಿ ಚಾಲನೆ ನೀಡಿದರು.
Advertisement
ಬಂಕಾಪುರ: ವರದಾ ನದಿ ನೀರು ಪೂರೈಕೆಗೆ ಚಾಲನೆ
04:49 PM Jul 06, 2020 | Suhan S |
Advertisement
Udayavani is now on Telegram. Click here to join our channel and stay updated with the latest news.