ನವದೆಹಲಿ: ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ (All India Bank Employes Association) ಬುಧವಾರ (ಆ.28) ದೇಶವ್ಯಾಪಿ ಬಂದ್ ಗೆ ಕರೆ ನೀಡಿದ್ದು, ಈ ನಿಟ್ಟಿನಲ್ಲಿ ಬ್ಯಾಂಕ್ ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ವರದಿ ತಿಳಿಸಿದೆ.
ಬ್ಯಾಂಕ್ ಸ್ಟಾಪ್ ಯೂನಿಯನ್ ನ 13 ಅಧಿಕಾರಿಗಳ ವಿರುದ್ಧ ಬ್ಯಾಂಕ್ ಆಫ್ ಇಂಡಿಯಾ(Bank Of India) ಆರೋಪಪಟ್ಟಿ ಸಿದ್ದಪಡಿಸಿರುವುದನ್ನು ವಿರೋಧಿಸಿ ಬುಧವಾರ ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ ದೇಶವ್ಯಾಪಿ ಬಂದ್ ಗೆ ಕರೆ ಕೊಟ್ಟಿದೆ.
ಟ್ರೇಡ್ ಯೂನಿಯನ್ ಮೇಲೆ ರಾಜಕೀಯ ಪ್ರೇರಿತ ಹಸ್ತಕ್ಷೇಪದ ವಿರುದ್ಧ ಮುಷ್ಕರ ನಡೆಸುತ್ತಿರುವುದಾಗಿ AIBEA ತಿಳಿಸಿದೆ. ಇಂದಿನ ಬಂದ್ ಗೆ ಎಐಬಿಒಸಿ, ಎನ್ ಸಿಬಿಇ, ಬಿಇಎಫ್ ಐ, ಐಎನ್ ಬಿಒಸಿ, ಐಎನ್ ಬಿಇಎಫ್ ಬೆಂಬಲ ನೀಡಿರುವುದಾಗಿ ಎಐಬಿಇಎ ಪ್ರಧಾನ ಕಾರ್ಯದರ್ಶಿ ಸಿ.ಎಚ್.ವೆಂಕಟಾಚಲಂ ಟ್ವೀಟ್ ನಲ್ಲಿ ತಿಳಿಸಿದ್ದಾರೆ.
ಅಲ್ಲದೇ ದೇಶವ್ಯಾಪಿ ಬ್ಯಾಂಕ್ ಬಂದ್ ಗೆ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್, ಆಲ್ ಇಂಡಿಯಾ ಬ್ಯಾಂಕ್ ಆಫೀಸರ್ಸ್ ಕಾನ್ಫೆಡರೇಶನ್, ದಿ ನ್ಯಾಷನಲ್ ಕಾನ್ಫಡರೇಶನ್ ಆಫ್ ಬ್ಯಾಂಕ್ ಎಂಪ್ಲಾಯೀಸ್, ದ ಬ್ಯಾಂಕ್ ಎಂಪ್ಲಾಯೀಸ್ ಫೆಡರೇಶನ್ ಆಫ್ ಇಂಡಿಯಾ ಮತ್ತು ಆಲ್ ಇಂಡಿಯಾ ಬ್ಯಾಂಕ್ ಆಫೀಸರ್ಸ್ ಅಸೋಸಿಯೇಶನ್ ಬೆಂಬಲ ವ್ಯಕ್ತಪಡಿಸಿರುವುದಾಗಿ ಘೋಷಿಸಿದೆ.
ಯಾವ ಬ್ಯಾಂಕ್ ಬಂದ್?
ಗ್ರಾಹಕರು ತಮ್ಮ ಸಮೀಪದ ಎಸ್ ಬಿಐ, ಐಸಿಐಸಿಐ, ಎಚ್ ಡಿಎಫ್ ಸಿ ಬ್ಯಾಂಕ್ ಗಳಿಗೆ ತೆರಳುವ ಮುನ್ನ ಬ್ಯಾಂಕ್ ಸೇವೆ ಇದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ ಎಂದು ಸಿಎಚ್ ವೆಂಕಟಾಚಲಂ ಎಕ್ಸ್ ಖಾತೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.