Advertisement

ಮುಜರಾಯಿ ದೇಗುಲದಲ್ಲಿ ಬ್ಯಾಂಕ್‌ ಸೇವಾ ಕೌಂಟರ್‌!

12:31 AM Jul 09, 2021 | Team Udayavani |

ಕಾರ್ಕಳ: ಧಾರ್ಮಿಕ ದತ್ತಿ ಇಲಾಖೆಯ ಸೇವೆಗಳಲ್ಲಿ ಪಾರದರ್ಶಕತೆ ತರಲು ದೇವಸ್ಥಾನಗಳ ಹಣಕಾಸು ವ್ಯವ ಹಾರಗಳನ್ನು ಬ್ಯಾಂಕ್‌ಗಳ ಮೂಲಕ ನಿರ್ವ ಹಿಸಲು ಸರಕಾರ ಚಿಂತಿಸಿದ್ದು, ಮುಂದಿನ ದಿನಗಳಲ್ಲಿ ಶ್ರೀಮಂತ ದೇಗುಲ ಗಳ ಆವರಣದೊಳಗೆ ಬ್ಯಾಂಕ್‌ ವತಿ ಯಿಂದ ಸೇವಾ ಕೌಂಟರ್‌ಗಳು ತೆರೆಯಲಿವೆ.

Advertisement

ಭಕ್ತರು ಬ್ಯಾಂಕ್‌ ಕೌಂಟರ್‌ ಮೂಲಕ ರಶೀದಿ ಪಡೆದು ಲಭ್ಯ ಸೇವೆಗಳನ್ನು ಮಾಡಿಸ ಬಹುದು. ಮುಂಗಡ ಆನ್‌ಲೈನ್‌ ಸೇವಾ ಬುಕ್ಕಿಂಗ್‌ಗೆ ಕೂಡ ಅವಕಾಶವಿರ ಲಿದೆ. ಸಂಗ್ರಹವಾಗುವ ಹಣ ವನ್ನು ದೇಗುಲದ ಖಾತೆಗೆ ಕಾಲ ಕಾಲಕ್ಕೆ ಜಮೆ ಮಾಡುವ ವ್ಯವಸ್ಥೆಯೂ ಜಾರಿಗೆ ಬರಲಿದೆ.

ಖಾಸಗೀಕರಣದ ಭಯ:

ಇಷ್ಟರವರೆಗೆ ಶ್ರೀಮಂತ ದೇವಸ್ಥಾನಗಳ ಹಣಕಾಸು ವ್ಯವಹಾರ ರಾಷ್ಟ್ರೀಕೃತ ಬ್ಯಾಂಕ್‌ಗಳ ಮೂಲಕವೇ ನಡೆಯುತ್ತಿದೆ. ಆದರೆ ಈಗ ಉದ್ದೇಶಿಸಿರುವ ಸೇವೆ ಸಹಿತ ಹಣ ಕಾಸು ವ್ಯವಹಾರ ಖಾಸಗಿ ಎಚ್‌ಡಿಎಫ್ಸಿ ಬ್ಯಾಂಕ್‌ ನಿರ್ವಹಿಸಲಿರುವುದು ಚರ್ಚೆಗೆ ಗ್ರಾಸವಾಗಿದೆ. ದೇವಸ್ಥಾನಗಳ ನಿರ್ವಹಣೆ ಯನ್ನು ಖಾಸಗಿಗೆ ನೀಡುವ ಹುನ್ನಾರದ ಮುನ್ಸೂಚನೆಯಿದು ಎನ್ನುವ ಆರೋಪ ಗಳೂ ಕೇಳಿ ಬರುತ್ತಿವೆ.

ಬದಲಾವಣೆ ಏಕೆ? :

Advertisement

ದೇವಸ್ಥಾನಗಳಲ್ಲಿ ಸೇವಾ ರಶೀದಿ  ನೀಡುವ ಕಾರ್ಯವನ್ನು ದೇವಾಲಯ ಗಳ ಆಡಳಿತ ಮಂಡಳಿಯೇ ನಿರ್ವಹಿ ಸುತ್ತಿವೆ. ಆದರೆ ಕೋಟ್ಯಂ ತರ ರೂ. ಆದಾಯ ಬರುವ ದೇವಸ್ಥಾನಗಳಲ್ಲಿ ಸಾಕಷ್ಟು ವಂಚನೆ ಪ್ರಕರಣಗಳು ಬಹಿರಂಗವಾಗುತ್ತಿವೆ. ಒಂದೇ ಸಂಖ್ಯೆಗೆ 3-4 ನಕಲಿ ರಶೀದಿ ನೀಡಿರುವುದು, ಭಕ್ತರು ಹಣ ಪಾವತಿಸಿದರೂ ಸೇವೆ

ಗಳನ್ನು ಮಾಡದೆ ಇರುವುದು ಇತ್ಯಾದಿ ವಂಚನೆಗಳು ಬೆಳಕಿಗೆ ಬರುತ್ತಿವೆ. ಇದಕ್ಕೆ ಕಡಿವಾಣ ಹಾಕುವುದು ಹೊಸ ವಿಧಾನದ ಉದ್ದೇಶ ಎನ್ನಲಾಗುತ್ತಿದೆ.

ಮೊದಲು ಕುಕ್ಕೆ ಸುಬ್ರಹ್ಮಣ್ಯ, ಘಾಟಿ ಸುಬ್ರಹ್ಮಣ್ಯ ಮತ್ತು ಚಾಮುಂಡೇಶ್ವರೀ ದೇವಸ್ಥಾನಗಳಲ್ಲಿ ಇಂತಹ ಕೌಂಟರ್‌ ತೆರೆಯ ಲಾಗುತ್ತಿದೆ.   ಮುಂದೆ 10-15 ಕೋಟಿ ರೂ. ಆದಾಯ ದ‌ ದೇಗುಲಗಳಿಗೆ ವಿಸ್ತರಿಸುವ ಚಿಂತನೆಯಿದೆ. ಇದ  ರಿಂದ ಸೇವಾ ಹಣ ಬ್ಯಾಂಕ್‌ ಖಾತೆಗೇ ಹೋಗುತ್ತದೆ. – ಕೋಟ ಶ್ರೀನಿವಾಸ ಪೂಜಾರಿ ಮುಜರಾಯಿ ಸಚಿವರು

Advertisement

Udayavani is now on Telegram. Click here to join our channel and stay updated with the latest news.

Next