Advertisement

Bank: ಬ್ಯಾಂಕ್‌ಗಳಿಗೆ ಐದು ದಿನ ಮಾತ್ರ ಕೆಲಸ?-IBA ವತಿಯಿಂದ ಕೇಂದ್ರಕ್ಕೆ ಶಿಫಾರಸು ಸಲ್ಲಿಕೆ

09:17 PM Dec 06, 2023 | Team Udayavani |

ನವದೆಹಲಿ/ಮುಂಬೈ: ಇನ್ನು ಮುಂದೆ ಬ್ಯಾಂಕುಗಳಿಗೆ ವಾರದಲ್ಲಿ ಐದು ದಿನಗಳು ಮಾತ್ರ ಕರ್ತವ್ಯದ ದಿನಗಳು ಎಂದು ಅಧಿಕೃತವಾಗಬಹುದು. ಭಾರತೀಯ ಬ್ಯಾಂಕ್‌ಗಳ ಒಕ್ಕೂಟ (ಐಬಿಎ) ಕೇಂದ್ರ ವಿತ್ತ ಸಚಿವಾಲಯಕ್ಕೆ ಈ ಬಗ್ಗೆ ವರದಿ ಸಲ್ಲಿಸಿದೆ. ಕೇಂದ್ರ ಹಣಕಾಸು ಖಾತೆ ಸಹಾಯಕ ಸಚಿವ ಭಾಗವತ್‌ ಕರಾಡ್‌ ಅವರು, ಸಂಸತ್‌ ಅಧಿವೇಶನದ ವೇಳೆ ಮಾತನಾಡಿ “ಐಬಿಎ ಈ ಬಗ್ಗೆ ವರದಿ ಸಲ್ಲಿಸಿದೆ’ ಎಂದು ತಿಳಿಸಿದ್ದಾರೆ.

Advertisement

2015ರಿಂದ ಈಚೆಗೆ ಬ್ಯಾಂಕ್‌ಗಳು ಪ್ರತಿ ತಿಂಗಳ ಎರಡನೇ ಶನಿವಾರ ಮತ್ತು ನಾಲ್ಕನೇ ಶನಿವಾರ ರಜೆಯನ್ನು ಪಾಲನೆ ಮಾಡಿಕೊಂಡು ಬರುತ್ತಿದ್ದವು. ಸೋಮವಾರದಿಂದ ಶುಕ್ರವಾರದ ವರೆಗೆ ಐದು ದಿನಗಳು ಮಾತ್ರ ಕರ್ತವ್ಯದ ದಿನಗಳಾಗಿರಬೇಕು ಎಂದು ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ ಉದ್ಯೋಗಿಗಳ ಸಂಘದ ವತಿಯಿಂದ ಹಲವು ವರ್ಷಗಳಿಂದ ಬೇಡಿಕೆ ಸರ್ಕಾರಕ್ಕೆ ಸಲ್ಲಿಕೆಯಾಗುತ್ತವೇ ಇತ್ತು.
ಒಂದು ವೇಳೆ ಸರ್ಕಾರಿ ಮತ್ತು ಖಾಸಗಿ ವಲಯದ ಬ್ಯಾಂಕ್‌ಗಳನ್ನು ಒಳಗೊಂಡಿರುವ ಭಾರತೀಯ ಬ್ಯಾಂಕ್‌ಗಳ ಒಕ್ಕೂಟದ ವಾರಕ್ಕೆ ಐದು ದಿನಗಳು ಮಾತ್ರ ಕೆಲಸ ಎಂಬ ಶಿಫಾರಸನ್ನು ಕೇಂದ್ರ ಸರ್ಕಾರ ಒಪ್ಪಿ ಅನುಷ್ಠಾನಗೊಳಿಸಿದರೆ, ಅದು ದೇಶದ ಬ್ಯಾಂಕಿಂಗ್‌ ವಲಯದಲ್ಲಿ ಭಾರೀ ದೂರಗಾಮಿ ಪರಿಣಾಮ ಬೀರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next