ಉಡುಪಿ: ಕೇಂದ್ರ ಸರಕಾರದ ಬ್ಯಾಂಕ್ ನೌಕರರ, ಅಧಕಾರಿಗಳ ವಿರೋಧಿ ನೀತಿಯ ವಿರುದ್ಧ ಬ್ಯಾಂಕ್ ಅಧಿಕಾರಿ ಮತ್ತು ನೌಕರರ ಸಂಘಟನೆಗಳ ಒಕ್ಕೂಟಗಳ ಕರೆಯಂತೆ ಆ. 22 ರಂದು ಉಡುಪಿ ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿ ಎದುರು ಪ್ರತಿಭಟನೆ ನಡೆಯಿತು.
ಸಾರ್ವಜನಿಕ ರಂಗದ ಬ್ಯಾಂಕುಗಳ ಖಾಸಗೀಕರಣ, ವಿಲೀನ, ಕಾರ್ಪೊರೇಟ್ ವಲಯದ ಸುಸ್ತಿ ಸಾಲದ ಮನ್ನಾ, ಸುಸ್ತಿ ಸಾಲಗಾರರ ಹೆಸರುಗಳನ್ನು ಬಹಿರಂಗಪಡಿಸದಿರುವುದು ಅತ್ಯಂತ ಖೇಕರವೆಂದು ಒಕ್ಕೂಟದ ಮುಖಂಡರು ಹೇಳಿದರು.
ಬ್ಯಾಂಕ್ ಬೋರ್ಡ್ ಬ್ಯೂರೋ ರದ್ದುಪಡಿಸದಿರುವುದು, ಪಿಂಚಣಿ ಸಂಬಂಧಿತ ವಿಷಯಗಳ ಬಗ್ಗೆ ನಿರ್ಲಕ್ಷ್ಯವು ಅಸಹನೀಯವಾಗಿದ್ದು ಈ ಬಗ್ಗೆ ಸರಕಾರವು ಕೂಡಲೇ ಎಚ್ಚೆತ್ತುಕೊಳ್ಳಬೇಕೆಂದು ಆಗ್ರಹಿಸಿದರು.
ಸಿಂಡಿಕೇಟ್ ಬ್ಯಾಂಕಿನ ರವಿ, ಶಶಿಧರ ಶೆಟ್ಟಿ, ಕೆನರಾ ಬ್ಯಾಂಕಿನ ವರದರಾಜ, ರವೀಂದ್ರ, ಭಾರತೀಯ ಸ್ಟೇಟ್ ಬ್ಯಾಂಕಿನ ಕೆ.ಆರ್. ಶೆಣೈ, ಪ್ರಕಾಶ್ ಜೋಗಿ, ಕರ್ನಾಟಕ ಬ್ಯಾಂಕಿನ ನಿತ್ಯಾನಂದ, ರವಿಶಂಕರ್, ಕಾರ್ಪೊರೇಶ್‌ನ ಬ್ಯಾಂಕಿನ ರಘುರಾಮಕೃಷ್ಣ ಬಲ್ಲಾಳ್, ನಾಗೇಶ್ ನಾಯಕ್, ಅಧಿಕಾರಿಗಳ ಸಂಘಟನೆಯ ಪರವಾಗಿ ಜಯಪ್ರಕಾಶ್ ರಾವ್ ಮತ್ತು ಹೇಮಂತ್ ಯು. ಕಾಂತ್, ಅನಂತಪದ್ಮನಾಭ, ನೌಕರರ ಸಂಘಟನೆಯ ಪರವಾಗಿ ರಮೇಶ್ ಕೆ., ಸುರೇಶ್ ಶೆಟ್ಟಿ, ಜಯನ್ ಮಲ್ಪೆ, ಬಾಲಗಂಗಾಧರ ಮುಂತಾದವರು ಮಾತನಾಡಿದರು. ಯುಎಫ್ಬಿಯುನ ಹೆರಾಲ್ಡ್ ಡಿ’ಸೋಜಾ ಸಂಯೋಜಿಸಿದರು.