Advertisement

ಸ್ವ ಸಹಾಯ ಸಂಘಗಳ ಮೂಲಕ ಬ್ಯಾಂಕ್ ಗ್ರಾಹಕರ ಮನೆ ಬಾಗಿಲಿಗೆ ತಲುಪಿದೆ: ಡಾ. ಎಲ್.ಎಚ್. ಮಂಜುನಾಥ್

05:14 PM Jul 21, 2023 | Team Udayavani |

ಮಂಗಳೂರು : ಬ್ಯಾಂಕ್ ಸ್ವ ಸಹಾಯ ಸಂಘಗಳ ಮೂಲಕ ಗ್ರಾಹಕರ ಮನೆ ಬಾಗಿಲಿಗೆ ತಲುಪಿದೆ. ಉತ್ತಮ ಮನೆ, ಉತ್ತಮ ಆಸ್ಪತ್ರೆಗಳ ಸೇವೆ ಈ ಎಲ್ಲಾ ಬೇಡಿಕೆಗಳನ್ನು ಸೇರಿದಂತೆ ಸೂಕ್ತ ಸ್ಪಂದನೆ ಬ್ಯಾಂಕಿನಿಂದ ದೊರೆಯುವಂತಾಗಲಿ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕಾರಿ ನಿರ್ದೇಶಕ ಡಾ. ಎಲ್.ಎಚ್. ಮಂಜುನಾಥ್ ಹೇಳಿದರು.

Advertisement

ಮಂಗಳೂರಿನ ಉರ್ವಾ ಜಿಲ್ಲಾ ಡಾ. ಅಂಬೇಡ್ಕರ್ ಭವನದಲ್ಲಿ ನಡೆದ ಬ್ಯಾಂಕ್ ಆಫ್ ಬರೋಡಾದ 116ನೇ ಸಂಸ್ಥಾಪಕರ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ಸ್ವ ಸಹಾಯ ಸಂಘಗಳ ಮೂಲಕ ಬ್ಯಾಂಕ್ ಗ್ರಾಹಕರ ಮನೆ ಬಾಗಿಲಿಗೆ ತಲುಪಿದೆ ಎಂದರು.

ಬ್ಯಾಂಕಿನ ಮಹಾಪ್ರಬಂಧಕಿ ಹಾಗೂ ಮಂಗಳೂರು ವಲಯದ ಮುಖ್ಯಸ್ಥೆ ಗಾಯತ್ರಿ ಆರ್. ಮಾತನಾಡಿ 1908 ರಲಿ ಮಹಾರಾಜಾ ಮೂರನೇ ಸಯ್ಯಾಜಿರಾವ್ ಗಾಯಕ್‌ವಾಡ್ ಅವರಿಂದ ಸ್ಥಾಪಿಸಲ್ಪಟ್ಟು ವಿಶಾಲವಾಗಿ 17 ದೇಶಗಳು ಸೇರಿದಂತೆ 8200 ಶಾಖೆಗಳನ್ನು ಹೊಂದಿರುವ ಬಲಿಷ್ಠ ಬ್ಯಾಂಕ್ ಆಗಿ ಬೆಳೆದಿದೆ ಎಂದರು. ವಿಜಯ ಬ್ಯಾಂಕ್, ದೇನಾ ಬ್ಯಾಂಕ್‌ಗಳನ್ನೂ ಈಗ ಬ್ಯಾಂಕ್ ಆಫ್ ಬರೋಡಾ ಒಳಗೊಂಡಿದೆ. ಪ್ರಸ್ತುತ ಬ್ಯಾಂಕ್ 116 ನೇ ಸಂಸ್ಥಾಪನಾ ದಿನವನ್ನು ಆಚರಿಸುತ್ತಿದ್ದು, ಈ ವರ್ಷ ಸಾಧಿಸು, ಸಹಯೋಗ ನೀಡು ಹಾಗೂ ಉತ್ಕೃಷ್ಟನಾಗು ಎನ್ನುವ ವಿಷಯವನ್ನು ಆರಿಸಿಕೊಂಡಿದೆ ಎಂದರು.

ಬ್ಯಾಂಕ್ ಆಫ್ ಬರೋಡಾ – ಮಾಜಿ ಕಾರ್ಯ ನಿರ್ವಾಹಕ ನಿರ್ದೇಶಕರಾದ ಕೆ.ಆರ್. ಶೆಣೈ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ, ಬ್ಯಾಂಕ್ ಆಫ್ ಬರೋಡಾದಲ್ಲಿನ ತಮ್ಮ ಅನುಭವ ವ್ಯಕ್ತಪಡಿಸಿ, ಬ್ಯಾಂಕ್ ಆಫ್ ಬರೋಡಾ ಸಧೃಡವಾಗಿದ್ದು, ಇದರಲ್ಲಿ ವಿಲೀನಗೊಂಡಿರುವ ಇತರ ಬ್ಯಾಂಕ್‌ಗಳ ಸಿಬ್ಬಂದಿ ಅದೃಷ್ಟವಂತರು ಎಂದರು.

ಬ್ಯಾಂಕ್ ಸಿಎಸ್‌ಆರ್ ಭಾಗವಾಗಿ ಮಂಗಳಸೇವಾ ಸಮಿತಿ ತೊಕ್ಕೊಟ್ಟು, ಸ್ನೇಹದೀಪ ಬಿಜೈ, ಸ್ವಾಮಿ ಶ್ರದ್ಧಾನಂದ ಸೇವಾಶ್ರಮಗಳಿಗೆ ನೆರವು ನೀಡಲಾಯಿತು. ಬ್ಯಾಂಕ್‌ನ ವಲಯ ಉಪಮುಖ್ಯಸ್ಥ ರಮೇಶ್ ಕಾನಡೆ, ಡಿಜಿಎಂ ನೆಟ್‌ವರ್ಕ್ ಅಶ್ವಿನಿ ಕುಮಾರ್ ಉಪಸ್ಥಿತರಿದ್ದರು.

Advertisement

ಉಪ ವಲಯ ಮುಖ್ಯಸ್ಥರಾದ ರಮೇಶ್ ಕಾನಡೆ ಮತ್ತು ಡಿಜಿಎಂ-ನೆಟ್ವರ್ಕ್ ಅಶ್ವಿನಿ ಕುಮಾರ್ ಅವರು ಧ್ವಜಾರೋಹಣ ಮಾಡಿದರು. ಪ್ರಾದೇಶಿಕ ವ್ಯವಸ್ಥಾಪಕ ಎಂ.ವಿ.ಎಸ್. ಪ್ರಸಾದ್ ಸ್ವಾಗತಿಸಿದರು. ಅನಿತಾ ನಿರೂಪಿಸಿದರು. ಪ್ರಾದೇಶಿಕ ಕಚೇರಿ ಉಪ ವಲಯ ವ್ಯವಸ್ಥಾಪಕ ರಾಜೇಶ್ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next