Advertisement

Bank Fraud Case: ಬ್ಯಾಂಕ್‌ಗೆ ವಂಚನೆ: ಐವರಿಗೆ ಜೈಲು ಶಿಕ್ಷೆ, ದಂಡ

09:37 AM Aug 09, 2023 | Team Udayavani |

ಬೆಂಗಳೂರು: ಯುನೈಟೆಡ್‌ ಬ್ಯಾಂಕ್‌ ಆಫ್ ಇಂಡಿಯಾಗೆ ಕೋಟ್ಯಂತರ ರೂ. ನಷ್ಟ ಉಂಟು ಮಾಡಿದ ಆರೋಪದ ಮೇಲೆ ಐವರಿಗೆ ಒಂದರಿಂದ ನಾಲ್ಕು ವರ್ಷ ಸಾಧಾರಣಾ ಜೈಲು ಶಿಕ್ಷೆ, 23.02 ಕೋಟಿ ರೂ. ದಂಡ ವಿಧಿಸಿ ಸಿಬಿಐ ವಿಶೇಷ ನ್ಯಾಯಾಲಯದ ಆದೇಶ ಹೊರಡಿಸಿದೆ.

Advertisement

ನೆಕ್ಸೋಫೀಟ್ನೋಫೆಟಲ್‌ ಲಿ.ನ ನಿರ್ದೇಶಕ ಜಿ.ಧನಂಜಯರೆಡ್ಡಿಗೆ 4 ವರ್ಷ ಜೈಲು ಶಿಕ್ಷೆ 10 ಕೋಟಿ ರೂ. ದಂಡ, ರಿಯಲ್‌ ಎಸ್ಟೇಟ್‌ ಡೀಲರ್‌ ಕೆ.ಸತ್ಯನಾರಾಯಣಗೆ 12 ಕೋಟಿ ರೂ. ದಂಡ 4 ವರ್ಷ ಜೈಲು, ಖಾಸಗಿ ಕಂಪನಿ ಎಂ.ಡಿ.ಜಿ.ನಿರ್ಮಲಾ ಮತ್ತು ಖಾಸಗಿ ಕಂಪನಿ ನಿರ್ದೇಶಕ ದಿನೇಶ್‌ ಕಾವೂರ್‌ಗೆ ತಲಾ 1 ಲಕ್ಷ ರೂ. ದಂಡ, 1 ವರ್ಷ ಜೈಲು ಹಾಗೂ ಯುನೈಟೆಡ್‌ ಬ್ಯಾಂಕ್‌ನ ಕಂಟೋನ್ಮೆಂಟ್‌ ಶಾಖೆಯ ಎಜಿಎಂ ರಾಜೇಶ್‌ ಕುಮಾರ್‌ ಮಾಧವ್‌ಗೆ 1 ವರ್ಷ ಜೈಲು, 50 ಸಾವಿರ ರೂ. ದಂಡ ವಿಧಿಸಲಾಗಿದೆ. ಹಾಗೆಯೇ ನೆಕ್ಸೋಫೀಟ್ನೋಫೆಟಲ್‌ ಲಿ.ಗೆ 1 ಕೋಟಿ ರೂ. ದಂಡ ವಿಧಿಸಿ ಕೋರ್ಟ್‌ ಆದೇಶ ನೀಡಿದೆ. ಆರೋಪಿಗಳು ಬ್ಯಾಂಕ್‌ಗೆ ಒಟ್ಟಾರೆ 18.5 ಕೋಟಿ ರೂ. ವಂಚಿಸಿದ್ದರು.

2009ರಲ್ಲಿ ನೆಕ್ಸೋಫೀಟ್ನೋಫೆಟಲ್‌ ಲಿಮಿಟೆಡ್‌ ಹೆಸರಿನಲ್ಲಿ ಆರೋಪಿಗಳ ಪೈಕಿ ಧನಂಜಯ ರೆಡ್ಡಿ, ದುಬೈ ಮೂಲದ ಲೋಗುಸ್‌ ಇನ್ಫೋ ಸಲ್ಯೂಷನ್‌ ಕಂಪನಿಯಿಂದ ಸಾಫ್ಟ್ವೇರ್‌ ಖರೀದಿಗಾಗಿ 16 ಕೋಟಿ ರೂ. ಸಾಲ ಪಡೆದುಕೊಂಡಿದ್ದರು. ಆದರೆ, ಸಾಫ್ಟ್ವೇರ್‌ ಖರೀದಿ ಮಾಡದೆ, ಸಾಲದ ರೂಪದಲ್ಲಿ ಪಡೆದ ಹಣವನ್ನು ಬೇರೆ ವ್ಯಕ್ತಿಗಳಿಗೆ ವರ್ಗಾವಣೆ ಮಾಡಲಾಗಿತ್ತು. ಬ್ಯಾಂಕ್‌ನಲ್ಲಿ ಸಾಲ ಪಡೆಯುವಾಗ ಆರೋಪಿ ಕೆ.ಆರ್‌.ಪುರದಲ್ಲಿರುವ ಸಾದರಮಂಗಲ ಗ್ರಾಮದಲ್ಲಿರುವ 1 ಎಕರೆ 30 ಗುಂಟೆ ಭೂಮಿಯ ನಕಲಿ ಪತ್ರ ಇಟ್ಟಿದ್ದ. ಆದರೆ, ಈ ಭೂಮಿ ಬೇರೆಯವರಿಗೆ ಈ ಮೊದಲೇ ಮಾರಾಟ ಮಾಡಲಾಗಿದೆ. ಹೀಗೆ ಬ್ಯಾಂಕ್‌ಗೆ ವಂಚನೆ ಮಾಡಲಾಗಿತ್ತು. ಅದಕ್ಕೆ ಇತರೆ ಆರೋಪಿಗಳು ಸಹಕಾರ ನೀಡಿದ್ದರು. ಸಿಬಿಐ ಪರ ಸರ್ಕಾರಿ ಹಿರಿಯ ಅಭಿಯೋಜಕರಾಗಿ ಶಿವಾನಂದ ಪೆರ್ಲೆ ಅವರು ವಾದ ಮಂಡಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next