Advertisement

ಖಾಸಗೀಕರಣಕ್ಕೆ ಬ್ಯಾಂಕ್‌ ನೌಕರರ ಆಕ್ರೋಶ

08:32 PM Mar 16, 2021 | Girisha |

ಶಿವಮೊಗ್ಗ : ಸಾರ್ವಜನಿಕ ವಲಯದ ಬ್ಯಾಂಕ್‌ಗಳನು ಖಾಸಗೀಕರಣಗೊಳಿಸುವ ಕೇಂದ್ರ ಸರ್ಕಾರದ ಕ್ರಮ ವಿರೋಧಿಸಿ ಸೋಮವಾರ ಮತ್ತು ಮಂಗಳವಾರ ದೇಶಾದ್ಯಂತ ಬ್ಯಾಂಕ್‌ ನೌಕರರು ಮುಷ್ಕರ ನಡೆಸುತ್ತಿದ್ದು, ಸ್ಥಳೀಯ ಬ್ಯಾಂಕ್‌ ಶಾಖೆಯ ನೌಕರರು ತಿಲಕ್‌ ನಗರದಲ್ಲಿರುವ ಕೆನರಾ ಬ್ಯಾಂಕಿನ ಪ್ರಾದೇಶಿಕ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

Advertisement

2021ರ ಬಜೆಟ್‌ನಲ್ಲಿ ಘೋಷಿಸಿರುವಂತೆ ಸಾರ್ವಜನಿಕ ವಲಯದ ಬ್ಯಾಂಕ್‌ಗಳನ್ನು ಖಾಸಗೀಕರಣಗೊಳಿಸಲು ಹೊರಟಿರುವ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನಾಕಾರರು ಘೋಷಣೆ ಕೂಗಿದರು. ಕೆಲವು ಸರ್ಕಾರಿ ಸಂಸ್ಥೆಗಳನ್ನು ನಡೆಸಲು, ಅವುಗಳನ್ನು ಖಾಸಗೀಕರಣಗೊಳಿಸುವುದು ಅಗತ್ಯ ಎಂದು ಸರ್ಕಾರ ಹೇಳಿದ್ದು, ಆ ಸಂಸ್ಥೆಗಳನ್ನು ಖಾಸಗೀಕರಣ ಗೊಳಿಸದಿದ್ದರೆ, ನೌಕರರ ವೇತನ ನೀಡುವುದು ಕಷ್ಟವಾಗಲಿದೆ. ಹೀಗಾಗಿ ಆ ಸಂಸ್ಥೆಗಳನ್ನು ಖಾಸಗೀಕರಣ ಗೊಳಿಸಿದರೆ ನೌಕರರ ಉದ್ಯೋಗಕ್ಕೆ ಯಾವುದೇ ತೊಂದರೆ ಉಂಟಾಗುವುದಿಲ್ಲ ಎಂದಿದೆ.

ನೌಕರರ ಉದ್ಯೋಗ ಉಳಿಸಿಕೊಳ್ಳುವ ದೃಷ್ಟಿಯಿಂದ ಆ ಸಂಸ್ಥೆಗಳನ್ನು ಖಾಸಗೀಕರಣಗೊಳಿಸುವುದು ಉತ್ತಮ ಎಂದು ಸರ್ಕಾರ ಹೇಳಿರುವುದನ್ನು ತೀವ್ರವಾಗಿ ಖಂಡಿಸಿದರು. ಪ್ರತಿಭಟನೆಯಲ್ಲಿ ಕೆನರಾ ಬ್ಯಾಂಕ್‌ ಅ ಧಿಕಾರಿಗಳ ಸಂಘಟನೆಯ ಶಿವಮೊಗ್ಗ ಕ್ಷೇತ್ರೀಯ ಕಾರ್ಯದರ್ಶಿ ನೆಲ್‌ಸನ್‌, ಸಹಾಯಕ ಕ್ಷೇತ್ರೀಯ ಕಾರ್ಯದರ್ಶಿ ಹೊನ್ನಪ್ಪ, ಪದಾ ಧಿಕಾರಿಗಳಾದ ಶ್ರೀಧರ್‌, ಧಿಧೀರಜ್‌, ದೀಪ್ತಿ ಇನ್ನಿತರರು ಭಾಗವಹಿಸಿದ್ದರು.

ಬ್ಯಾಂಕ್‌ ಸೇವೆಯಲ್ಲಿ ವ್ಯತ್ಯಯ: ಸಾರ್ವಜನಿಕ ವಲಯದ ಬ್ಯಾಂಕುಗಳ ಖಾಸಗೀಕರಣದ ವಿರುದ್ಧ ಬ್ಯಾಂಕ್‌ ನೌಕರರು ಮುಷ್ಕರ ನಡೆಸುತ್ತಿರುವುದರಿಂದ ಬ್ಯಾಂಕ್‌ ಶಾಖೆಗಳಲ್ಲಿ ಠೇವಣಿ ಮತ್ತು ಹಣ ಪಡೆಯುವುದು ಸೇರಿದಂತೆ ಚೆಕ್‌ ಕ್ಲಿಯರಿಂಗ್‌ ಮೊದಲಾದ ಬ್ಯಾಂಕಿಂಗ್‌ ಸೇವೆಗಳಲ್ಲಿ ವ್ಯತ್ಯಯವಾಗಿತ್ತು. ಈಗಾಗಲೇ ಹಣ ತುಂಬಿರುವ ಎಟಿಎಂಗಳಲ್ಲಿ ಹಣ ಸಿಗಲಿದ್ದು, ಅವುಗಳು ಖಾಲಿಯಾದ ಬಳಿಕ ಭರ್ತಿಯಾಗುವ ಸಾಧ್ಯತೆ ಕಡಿಮೆಯಿದೆ. ಹೀಗಾಗಿ ಇಂತಹ ಸಂದರ್ಭದಲ್ಲಿ ಎಟಿಎಂ ಸೇವೆಯ ಮೇಲೂ ಪರಿಣಾಮ ಬೀರಲಿದೆ. ಕಳೆದ ಶನಿವಾರ ಮತ್ತು ಭಾನುವಾರ ರಜೆ ಕಾರಣ ಬ್ಯಾಂಕುಗಳು ಮುಚ್ಚಲ್ಪಟ್ಟಿದ್ದವು. ಇದಲ್ಲದೆ, ಈಗ ಇನ್ನೂ ಎರಡು ದಿನ ಬ್ಯಾಂಕುಗಳು ಮುಚ್ಚಲ್ಪಟ್ಟಿವೆ.

ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಮುಷ್ಕರದ ಕಾರಣ ಸೇವೆಯಲ್ಲಿ ವ್ಯತ್ಯಯವಾಗಿತ್ತು. ಎಚ್‌ ಡಿಎಫ್‌ಸಿ, ಐಸಿಐಸಿಐ, ಕೋಟಕ್‌ ಮಹೀಂದ್ರಾ, ಮತ್ತು ಇಂಡಸ್‌ಇಂಡ್‌, ಆಕ್ಸಿಸ್‌ ಮುಂತಾದ ಖಾಸಗಿ ಬ್ಯಾಂಕ್‌ ಶಾಖೆಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ಕೇಂದ್ರ ಬಜೆಟ್‌ ವೇಳೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಎರಡು ಸಾರ್ವಜನಿಕ ವಲಯದ ಬ್ಯಾಂಕ್‌ಗಳನ್ನು ಖಾಸಗೀಕರಣಗೊಳಿಸುವುದಾಗಿ ಘೋಷಿಸಿದ್ದರು. ಇದರ ಮೂಲಕ 1.75 ಲಕ್ಷ ಕೋಟಿ ರೂ.ಗಳನ್ನು ಸಂಗ್ರಹಿಸುವ ಯೋಜನೆಯಲ್ಲಿ ಸರ್ಕಾರ ಕೆಲಸ ಮಾಡುತ್ತಿದೆ. ಇದನ್ನು ವಿರೋ ಧಿಸಿ ಬ್ಯಾಂಕ್‌ ನೌಕರರು 2 ದಿನಗಳ ಮುಷ್ಕರ ನಡೆಸುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next