ಬೆಂಗಳೂರು: ನನ್ನ ಬ್ಯಾಂಕ್ ಅಕೌಂಟ್‌ಗಳನ್ನು ಬ್ಲಾಕ್ ಮಾಡಿದ್ದಾರೆ ಎನ್ನುವುದು ಸತ್ಯಕ್ಕೆ ದೂರ. ಯಾವ ಬ್ಯಾಂಕ್ ಖಾತೆಯನ್ನೂ ಬ್ಲಾಕ್ ಮಾಡಿಲ್ಲ ಎಂದು ಇಂಧನ ಸಚಿವ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನ್ನ ಸಂಸ್ಥೆಗಳಲ್ಲಿ ಬೇರೆ ಬೇರೆ ಖಾತೆಗಳಿವೆ. ಯಾವ ಖಾತೆಯನ್ನೂ ತಡೆ ಹಿಡಿದಿಲ್ಲ. ಬೇರೆಯವರ ಖಾತೆಗಳನ್ನು ತಡೆ ಹಿಡಿದಿರುವ ಬಗ್ಗೆ ಮಾಹಿತಿ ಇಲ್ಲ ಎಂದು ಹೇಳಿದರು.
ಇದೇ ವೇಳೆ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಅವರನ್ನು ಭೇಟಿ ಮಾಡುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ “ಆದಿಚುಂಚನಗಿರಿ ಮಠ ರಾಜಕೀಯೇತರವಾಗಿದೆ. ಯಾರು ಬೇಕಾದರೂ ಮಠಕ್ಕೆ ಭೇಟಿ ನೀಡಬಹುದು. ನಾನೂ ಸಿದ್ಧಗಂಗಾ ಹಾಗೂ ಸುತ್ತೂರು ಶ್ರೀಗಳನ್ನು ಭೇಟಿ ಮಾಡಲು ನಿರ್ಧರಿಸಿದ್ದೇನೆ. ಯಾರು ಯಾವ ಸ್ವಾಮೀಜಿಯನ್ನಾದರೂ ಭೇಟಿ
ಮಾಡಬಹುದು’ ಎಂದು ತಿಳಿಸಿದರು.