ಡಬ್ಲಿನ್: ಅಯರ್‌ಲ್ಯಾಂಡಿನಲ್ಲಿ ಸಾಗುತ್ತಿರುವ ತ್ರಿಕೋನ ಏಕದಿನ ಸರಣಿಯ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ತಂಡವು ಬಾಂಗ್ಲಾದೇಶವನ್ನು ನಾಲ್ಕು ವಿಕೆಟ್‌ಗಳಿಂದ ಸೋಲಿಸಿದೆ.
ಡಬ್ಲಿನ್‌ನಲ್ಲಿ ದಿನಪೂರ್ತಿ ಮಳೆಯಾಗಬಹುದೆಂದು ಹವಾಮಾನ ಇಲಾಖೆ ಸೂಚಿಸಿತ್ತು. ಇದರಿಂದಾಗಿ ಈ ಪಂದ್ಯ ನಡೆಯುವುದು ಸಂಶಯವೆಂದು ಭಾವಿಸಲಾಗಿತ್ತು. ಆದರೆ ದಿನಪೂ ರ್ತಿ ಮಳೆ ಇಲ್ಲದ ಕಾರಣ 50 ಓವರ್‌ಗಳ ಈ ಪಂದ್ಯ ಸಾಂಗವಾಗಿ ಮುಗಿದಿದ್ದು ಎರಡೂ ತಂಡಗಳ ಆಟಗಾರರಿಗೆ ಮುಂಬರುವ ಚಾಂಪಿಯನ್ಸ್ ಟ್ರೋಫಿಗೆ ಒಳ್ಳೆಯ ಅಭ್ಯಾಸ ಸಿಕ್ಕಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಬಾಂಗ್ಲಾದೇಶವು ಸೌಮ್ಯ ಸರ್ಕಾರ್, ಮುಶ್ಫಿàಕರ್ ರಹೀಂ ಮತ್ತು ಮಹಮುದುಲ್ಲ ಅವರ ಅರ್ಧಶತಕದಿಂದಾಗಿ 9 ವಿಕೆಟಿಗೆ 257 ರನ್ ಗಳಿಸಿದೆ. ಇದಕ್ಕುತ್ತರವಾಗಿ ನ್ಯೂಜಿಲ್ಯಾಂಡ್ ತಂಡವು ಟಾಮ್ ಲಾಥಂ, ಜಿಮ್ಮಿ ನೀಶಮ್ ಅವರ ಅರ್ಧಶತಕದಿಂದಾಗಿ 47.3 ಓವರ್‌ಗಳಲ್ಲಿ ಆರು ವಿಕೆಟ್ ನಷ್ಟದಲ್ಲಿ 258 ರನ್ ಗಳಿಸಿ ಜಯಭೇರಿ ಬಾರಿಸಿತು.
ಲಾಥಂ 64 ಎಸೆತಗಳಿಂದ 54 ರನ್ ಗಳಿಸಿದರೆ ನೀಶಮ್ 48 ಎಸೆತಗಳಿಂದ 52 ರನ್ ಹೊಡೆದರು. 5 ಬೌಂಡರಿ ಬಾರಿಸಿದ ಅವರು 1 ಸಿಕ್ಸರ್ ಸಿಡಿಸಿದ್ದರು.
ಸಂಕ್ಷಿಪ್ತ ಸ್ಕೋರು: ಬಾಂಗ್ಲಾದೇಶ 9 ವಿಕೆಟಿಗೆ 257 (ತಮಿಮ್ ಇಕ್ಬಾಲ್ 23, ಸೌಮ್ಯ ಸರ್ಕಾರ್ 61, ಮುಶ್ಫಿàಕರ್ ರಹೀಂ 55, ಮಹಮುದುಲ್ಲ 51, ಮೊಸಡೆಕ್ ಹೊಸೈನ್ 41, ಹಾಮಿಶ್ ಬೆನೆಟ್ 31ಕ್ಕೆ 3, ಜಿಮ್ಮಿ ನೀಶಮ್ 68ಕ್ಕೆ 2, ಐಶ್ ಸೋಧಿ 40ಕ್ಕೆ 2);
ನ್ಯೂಜಿಲ್ಯಾಂಡ್ 47.3 ಓವರ್‌ಗಳಲ್ಲಿ 6 ವಿಕೆಟಿಗೆ 258 (ಟಾಮ್ ಲಾಥಂ 54, ಲ್ಯೂಕ್ ರಾಂಚಿ 27, ರಾಸ್ ಟಯ್ಲರ್ 25, ನೀಲ್ ಬ್ರೂಮ್ 48, ಜಿಮ್ಮಿ ನೀಶಮ್ 52, ಮುಸ್ತಾಫಿಜುರ್ ರೆಹಮಾನ್ 33ಕ್ಕೆ 2, ರುಬೆಲ್ ಹೊಸೈನ್ 53ಕ್ಕೆ 2). ಪಂದ್ಯಶ್ರೇಷ್ಠ: ಜಿಮ್ಮಿ ನೀಶಮ್