ಚತ್ತೋಗ್ರಾಮ್ : ಜಹುರ್ ಅಹ್ಮದ್ ಚೌಧರಿ ಸ್ಟೇಡಿಯಂ’ನಲ್ಲಿ ಭಾರತ ಮತ್ತು ಆತಿಥೇಯ ಬಾಂಗ್ಲಾದೇಶದ ವಿರುದ್ಧ ಟೆಸ್ಟ್ 2 ಪಂದ್ಯಗಳ ಕಿರು ಸರಣಿಯ ಬುಧವಾರ ಆರಂಭವಾಗಿದ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದ ಆಟದ ಅಂತ್ಯಕ್ಕೆ ಭಾರತ 90 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 278 ರನ್ ಗಳಿಸಿದೆ.
ಉತ್ತಮ ಆಟವಾಡಿದ ಪೂಜಾರ ಅರ್ಹವಾದ ಶತಕವನ್ನು ಕಳೆದುಕೊಂಡಿರುವುದು ದುರದೃಷ್ಟಕರವೆನಿಸಿತು. ಅವರು 90 ರನ್(203 ಎಸೆತ) ಗಳಿಸಿದ್ದಾಗ ತೈಜುಲ್ ಇಸ್ಲಾಂ ಅವರು ಬೌಲ್ಡ್ ಮಾಡಿದರು. ತೈಜುಲ್ 3 ವಿಕೆಟ್ ಕಿತ್ತು ಬಾಂಗ್ಲಾದೇಶದ ಅತ್ಯುತ್ತಮ ಬೌಲರ್ ಆಗಿ ಕಂಡು ಬಂದರು. ಅಕ್ಸರ್ ಪಟೇಲ್ 14 ರನ್ ಗಳಿಸಿ ಔಟಾದರು.
ಟಾಸ್ ಗೆದ್ದ ರಾಹುಲ್ ಬ್ಯಾಟಿಂಗ್ ಆಯ್ಕೆ ಮಾಡಿ ಕೊಂಡರು. ಆರಂಭಿಕರಾಗಿ ಬಂದ ನಾಯಕ ರಾಹುಲ್ 22, ಶುಭಮನ್ ಗಿಲ್ 20 ರನ್ ಗಳಿಸಿ ಔಟಾದರು.ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ 5 ಎಸೆತಗಳಲ್ಲಿ ಕೇವಲ 1 ರನ್ ಗಳಿಸಿ ಆಘಾತಕಾರಿಯಾಗಿ ಔಟಾದರು.ಬಾಂಗ್ಲಾದೇಶದ ಎಡಗೈ ಸ್ಪಿನ್ನರ್ ತೈಜುಲ್ ಇಸ್ಲಾಂ ಅವರ ಟರ್ನಿಂಗ್ ಎಸೆತಕ್ಕೆ ಕೊಹ್ಲಿ ಲೆಗ್ ಬಿಫೋರ್ ಕ್ಯಾಚ್ ನೀಡಿ ಔಟಾದರು. ಮಾಜಿ ನಾಯಕ ಡಿಆರ್‌ಎಸ್‌ಗೆ ಹೋದರಾರು ಅದು ವ್ಯರ್ಥವಾಯಿತು. ರಿಷಭ್ ಪಂತ್ 46 ರನ್ ಗಳಿಸಿ ಔಟಾದರು.
82 ರನ್ ಗಳಿಸಿರುವ ಶ್ರೇಯಸ್ ಅಯ್ಯರ್ ಬ್ಯಾಟಿಂಗ್ ಮಾಡುತ್ತಿದ್ದು ಅವರ ಮೇಲೆ ಭಾರಿ ನಿರೀಕ್ಷೆ ಮೂಡಿದೆ.
ಭಾರತದ ಹೆಚ್ಚಿನ ಬ್ಯಾಟ್ಸ್ ಮ್ಯಾನ್ ಗಳು ಸಡಿಲವಾದ ಹೊಡೆತಗಳಿಗೆ ಮುಂದಾಗಿ ಔಟಾದರು. 48ಕ್ಕೆ 3 ವಿಕೆಟ್ ಕಳೆದುಕೊಂಡಿದ್ದ ವೇಳೆ ಪೂಜಾರ ಮತ್ತು ಅಯ್ಯರ್ ನಡುವಿನ ಶತಕದ ಜೊತೆಯಾಟ ತಂಡಕ್ಕೆ ಆಧಾರವಾಯಿತು. ದಿನದ ಆಟದ ಕೊನೆಯಲ್ಲಿ, ಬಾಂಗ್ಲಾ ತಂಡ ಸ್ವಲ್ಪಮಟ್ಟಿಗೆ ಸಂತೋಷದಿಂದಿದೆ.