Advertisement

ಏಕದಿನ: ಅಫ್ಘಾನಿಸ್ಥಾನ ವಿರುದ್ಧ ಬಾಂಗ್ಲಾದೇಶ ಅಮೋಘ ವಿಜಯ

10:40 PM Feb 23, 2022 | Team Udayavani |

ಚತ್ತೋಗ್ರಾಮ್‌: ಕೇವಲ 45 ರನ್ನಿಗೆ 6 ವಿಕೆಟ್‌ ಉದುರಿಸಿಕೊಂಡ ಬಳಿಕವೂ ಅಫ್ಘಾನಿಸ್ಥಾನ ನಿಗದಿಪಡಿಸಿದ 216 ರನ್‌ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿದ ಬಾಂಗ್ಲಾದೇಶ ಏಕದಿನ ಇತಿಹಾಸದ ಅಮೋಘ ವಿಜಯವೊಂದಕ್ಕೆ ಸಾಕ್ಷಿಯಾಗಿದೆ.

Advertisement

ಬುಧವಾರ ಇಲ್ಲಿ ನಡೆದ ಮೊದಲ ಏಕದಿನದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಅಫ್ಘಾನಿಸ್ಥಾನ 49.1 ಓವರ್‌ಗಳಲ್ಲಿ 215ಕ್ಕೆ ಆಲೌಟ್‌ ಆಯಿತು. ಜವಾಬು ನೀಡತೊಡಗಿದ ಬಾಂಗ್ಲಾದೇಶ 11.2 ಓವರ್‌ಗಳಲ್ಲಿ 45 ರನ್ನಿಗೆ 6 ವಿಕೆಟ್‌ ಕಳೆದುಕೊಂಡು ಸೋಲಿನತ್ತ ಮುಖ ಮಾಡಿತು.

ಆದರೆ ಆಫಿಫ್ ಹೊಸೇನ್‌ (ಅಜೇಯ 93) ಮತ್ತು ಮೆಹಿದಿ ಹಸನ್‌ (ಅಜೇಯ 81) ಮುರಿಯದ 7ನೇ ವಿಕೆಟಿಗೆ 174 ರನ್‌ ಸೂರೆಗೈದು ಅಸಾಮಾನ್ಯ ಜಯವೊಂದನ್ನು ತಂದಿತ್ತರು. ಬಾಂಗ್ಲಾ 48.5 ಓವರ್‌ಗಳಲ್ಲಿ 6 ವಿಕೆಟಿಗೆ 219 ರನ್‌ ಬಾರಿಸಿತು. ಇದು ರನ್‌ ಚೇಸಿಂಗ್‌ ವೇಳೆ 7ನೇ ವಿಕೆಟಿಗೆ ಒಟ್ಟುಗೂಡಿದ ಅತ್ಯಧಿಕ ಮೊತ್ತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next