Advertisement

Bangladesh: ಸ್ಟಾರ್‌ ನಟ, ಅಪ್ಪನನ್ನು ಥಳಿಸಿ ಹತ್ಯೆ!

01:54 AM Aug 09, 2024 | Team Udayavani |

ಢಾಕಾ: ಬಾಂಗ್ಲಾದೇಶದ ಖ್ಯಾತ ನಟ ಶಾಂತೋ ಖಾನ್‌ ಮತ್ತು ಅವರ ತಂದೆ, ನಿರ್ಮಾಪಕ ಸಲೀಮ್‌ ಖಾನ್‌ರನ್ನು ಉದ್ರಿಕ್ತರ ಗುಂಪು ಥಳಿಸಿ ಹತ್ಯೆಗೈದಿದೆ. ಮೂಲಗಳ ಪ್ರಕಾರ ಶಾಂತೋ ಮತ್ತು ಅವರ ತಂದೆ ಮೇಲೆ ಮೊದಲು ಫ‌ರಕ್ಕಾಬಾದ್‌ ಬಜಾರ್‌ನಲ್ಲಿ ಹಲ್ಲೆ ಯತ್ನ ನಡೆದಿದ್ದು, ಆತ್ಮರಕ್ಷಣೆಗಾಗಿ ಬಂದೂಕಿನಿಂದ ಗುಂಡು ಹಾರಿಸಿ ಪರಾರಿಯಾಗಿದ್ದರು. ಆದರೆ ಬಜಾರ್‌ನಲ್ಲಿ ಎದುರಾದ ಮತ್ತೂಂದು ಗುಂಪು ಇಬ್ಬರನ್ನೂ ಥಳಿಸಿ ಹತ್ಯೆಗೈದಿದೆ.

Advertisement

2021ರಲ್ಲಿ ತೆರೆಕಂಡ ತುಂಗಿಪರಾರ್‌ ಮಿಯಾನ್‌ ಭಾಯ್‌ ಸಿನೆಮಾದಲ್ಲಿ ಶಾಂತೋ ಖಾನ್‌ ಹಸೀನಾ ಅವರ ಅಪ್ಪ ಹಾಗೂ ಬಾಂಗ್ಲಾ ಸ್ಥಾಪಕ ಬಂಗಬಂಧು ಮುಜೀಬುರ್‌ ರೆಹಮಾನ್‌ ಪಾತ್ರ ನಿರ್ವಹಿಸಿದ್ದರು. ಅವರ ತಂದೆ ಸಲೀಮ್‌ ಖಾನ್‌ ಅವಾಮಿ ಪಕ್ಷದ ಮಾಜಿ ನಾಯಕರು.

Advertisement

Udayavani is now on Telegram. Click here to join our channel and stay updated with the latest news.

Next