ಢಾಕಾ: ಬಾಂಗ್ಲಾದೇಶದ ಚಾಂದಿಪುರ ಜಿಲ್ಲೆಯ ಕರಾವಳಿ ಸಮೀಪವಿರುವ ಹಳ್ಳಿಯ ಪ್ರಗತಿಪರ ರೈತ ದಿಲೀಪ್ ಚಂದ್ರ ತರಫಾªರ್ ಹೊಸ ಭತ್ತದ ತಳಿ ಸಂಶೋಧಿಸಿದ್ದಾರೆ. ಅದು ಚಂಡಮಾರುತ ಮಳೆಗೆ ಜಗ್ಗುವುದಿಲ್ಲ, ಉಪ್ಪು ನೀರಿನಲ್ಲೂ ಉತ್ತಮ ಇಳುವರಿ ಕೊಡುವ ಸಾಮರ್ಥ್ಯ ಹೊಂದಿದೆ.
ಇದನ್ನೂ ಓದಿ:ಬರೀ ಲಿಂಗಾಯತ, ಒಕ್ಕಲಿಗರೇ ಯಾಕೆ ಸಿಎಂ ಆಗಬೇಕು, ಈಶ್ವರಪ್ಪರನ್ನ ಸಿಎಂ ಮಾಡಿ : ಒಬಿಸಿ ನಾಯಕರು
ಈ ತಳಿಯ ಬಿತ್ತನೆಯಿಂದ ಬಿರುಗಾಳಿಗೆ ಎದೆಯೊಡ್ಡಿ ನಿಲ್ಲಬಲ್ಲ ಶಕ್ತಿಶಾಲಿ ಪೈರು ಹುಟ್ಟಲಿವೆ. ಅಲ್ಲದೆ, ಯಾವುದೇ ಕೀಟನಾಶಕ, ರಸಗೊಬ್ಬರಗಳ ಬಳಕೆ ಯಿಲ್ಲದೆಯೂ ಸಮೃದ್ಧಿ ಫಸಲು ಪಡೆಯಬಹುದಾಗಿದೆ. ಇದಕ್ಕೆ ಚಾರುಲತಾ ಎಂಬ ಹೆಸರಿಡಲಾಗಿದೆ.
ಭತ್ತದ ಪೈರಿಗೆ ರಭಸವಾದ ಮಳೆ ಅಥವಾ ಚಂಡಮಾರುತ ಮೊದಲನೇ ಶತ್ರುವಾದರೆ, ಚಂಡಮಾರುತದ ಉಪ್ಪು ನೀರು ಎರಡನೇ ಶತ್ರು. ಇವೆರನ್ನೂ ತಡೆದುಕೊಂಡು ಭತ್ತ ಕಾಳುಗಟ್ಟುವ ಸಂದರ್ಭದಲ್ಲಿ ಭರ್ರನೆ ಬಿರುಗಾಳಿ ಬೀಸಿ ತೆಂದರೆ ಕಾಳುಗಟ್ಟಲಿರುವ ಭತ್ತವೆಲ್ಲಾ ಮಣ್ಣುಪಾಲಾಗುತ್ತದೆ.
ಹತ್ತು ವರ್ಷಗಳ ಹಿಂದೆ, ಈ ಸಮಸ್ಯೆಯನ್ನು ನಿವಾರಿಸುವ ಮಾರ್ಗಗಳ ಬಗ್ಗೆ ಆಲೋಚಿಸಿದಾಗ ದಿಲೀಪ್ ಅವರಿಗೆ ಹೊಳೆದಿದ್ದು ಪೂರ್ವಜರು ಬಳಸುತ್ತಿದ್ದ ಭತ್ತದ ತಳಿಗಳ ಬಗ್ಗೆ. ಹಲವಾರು ಪ್ರಯೋಗಗಳ ಮೂಲಕ ಮೂಲ ತಳಿಯನ್ನು ಕಂಡುಕೊಳ್ಳುವಲ್ಲಿ ಸಫಲರಾದ ಅವರು ಚಾರುಲತಾ ತಳಿಯನ್ನು ಅಭಿವೃದ್ಧಿಪಡಿಸಿದ್ದಾರೆ.