Advertisement

ಮೋದಿ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಬಾಂಗ್ಲಾ ರಾಷ್ಟ್ರಪತಿ ಅಬ್ದುಲ್‌ ಹಮೀದ್‌

10:07 AM May 29, 2019 | Sathish malya |

ಢಾಕಾ : ಬಾಂಗ್ಲಾದೇಶದ ರಾಷ್ಟ್ರಪತಿ ಅಬ್ದುಲ್‌ ಹಮೀದ್‌ ಅವರು ತಮ್ಮ ಮೂರು ದಿನಗಳ ಭಾರತ ಭೇಟಿಯ ಸಂದರ್ಭದಲ್ಲಿ ಮೇ 30ರಂದು ನಡೆಯುವ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ ಎಂದು ರಾಷ್ಟ್ರಪತಿ ಭವನದ ಉನ್ನತ ಅಧಿಕಾರಿ ತಿಳಿಸಿದ್ದಾರೆ.

Advertisement

ರಾಷ್ಟ್ರಪತಿ ಹಮೀದ್‌ ಅವರೊಂದಿಗೆ ಬಾಂಗ್ಲಾ ಸರಕಾರದ ಹಿರಿಯ ಸಂಪುಟ ಸದಸ್ಯರಾದ ಲಿಬರೇಶನ್‌ ವಾರ್‌ ಅಫೇರ್‌ ಸಚಿವ ಎಕೆಎಂ ಮೊಝಮ್ಮಿಲ್‌ ಹಕ್‌ ಕೂಡ ಭಾಗವಹಿಸುತ್ತಾರೆ.

ಬಾಂಗ್ಲಾ ಪ್ರಧಾನಿ ಶೇಖ್‌ ಹಸೀನಾ ಅವರು ಎರಡನೇ ಬಾರಿಯೂ ಮೋದಿ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಹಾಜರಾಗುತ್ತಿಲ್ಲ. ಕಾರಣ ಅವರು ತ್ರಿರಾಷ್ಟ್ರ ಭೇಟಿಯಲ್ಲಿ ಇದ್ದಾರೆ. 2014ರಲ್ಲೂ ಹಸೀನಾ ವಿದೇಶ ಭೇಟಿಯಲ್ಲಿದ್ದರು. ಆಗ ಬಾಂಗ್ಲಾ ಪಾರ್ಲಿಮೆಂಟ್‌ ಸ್ಪೀಕರ್‌ ಡಾ. ಶಿರಿನ್‌ ಶರ್ಮೀನ್‌ ಚೌಧರಿ ಅವರು ಮೋದಿ ಪ್ರಮಾಣ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next