Advertisement
ಶೇಖ್ ಮುಜಿಬುರ್ ರೆಹಮಾನ್ ಅವರು ಹಾಲಿ ಪ್ರಧಾನಿ ಶೇಖ್ ಹಸೀನಾ ಅವರ ತಂದೆ. ಪಾಕಿಸ್ತಾನದಿಂದ ಪ್ರತ್ಯೇಕಗೊಂಡ ಬಾಂಗ್ಲಾದೇಶ ಸ್ವಾತಂತ್ರ್ಯ ಪಡೆದುಕೊಂಡ ನಾಲ್ಕು ವರ್ಷಗಳ ನಂತರ 1975ರ ಆಗಸ್ಟ್ 15ರಂದು ಕ್ಷಿಪ್ರಕ್ರಾಂತಿಯ ಸೇನಾ ದಂಗೆಯಲ್ಲಿ ಮುಜಿಬುರ್ ರಹಮಾನ್ ಅವರನ್ನು ಹತ್ಯೆಗೈಯಲಾಗಿತ್ತು.
Related Articles
Advertisement
1996ರಲ್ಲಿ ಮಜೀದ್ ಭಾರತಕ್ಕೆ ಪರಾರಿಯಾಗಿದ್ದ ಎಂದು ಶಂಕಿಸಲಾಗಿತ್ತು. ಮಜೀದ್ ಕಳೆದ ತಿಂಗಳು ಬಾಂಗ್ಲಾದೇಶಕ್ಕೆ ವಾಪಸ್ ಆಗಿದ್ದು, ಈ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ ಕಲೆ ಹಾಕಿತ್ತು ಎಂದು ವರದಿ ವಿವರಿಸಿದೆ.
ಅಬ್ದುಲ್ ಮಜೀದ್ ನನ್ನು ಸ್ಥಳೀಯ ಸಮಯ 12.01ಕ್ಕೆ ಗಲ್ಲಿಗೇರಿಸಲಾಗಿತ್ತು. ಢಾಕಾದ ಹೊರವಲಯದ ಕೇರಾನ್ ಗಂಜ್ ನಲ್ಲಿರುವ ಢಾಕಾ ಸೆಂಟ್ರಲ್ ಜೈಲ್ ನಲ್ಲಿ ಗಲ್ಲಿಗೇರಿಸಲಾಗಿದ್ದು, 12.15ಕ್ಕೆ ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದ್ದರು ಎಂದು ಕಾನೂನು ಸಚಿವ ಅನಿಸುಲ್ ಹಖ್ ಪಿಟಿಐಗೆ ತಿಳಿಸಿದ್ದಾರೆ.
ಜೈಲಿನ ಮುಂಭಾಗ ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ ಸೆಂಟ್ರಲ್ ಜೈಲಿನ ಇನ್ಸ್ ಪೆಕ್ಟರ್ ಜನರಲ್ ಎಕೆಎಂ ಮೋಸ್ತಾಫಾ ಕಮಲ್ ಪಾಶಾ, ಮಜೀದ್ ನನ್ನು ಗಲ್ಲಿಗೇರಿಸಿದ್ದು, ಇದೀಗ ಶವವನ್ನು ಕುಟುಂಬ ವರ್ಗಕ್ಕೆ ಹಸ್ತಾಂತರಿಸಲಾಗುವುದು ಎಂದು ಹೇಳಿದರು.