Advertisement

ಕೆನಡಾವನ್ನು ಕೆಡವಿದ ಬಾಂಗ್ಲಾ

12:03 PM Jan 16, 2018 | Team Udayavani |

ಲಿಂಕನ್‌: ಅಂಡರ್‌-19 ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯ “ಸಿ’ ವಿಭಾಗದ ಪಂದ್ಯದಲ್ಲಿ ಬಾಂಗ್ಲಾದೇಶ 2ನೇ ಜಯ ಸಾಧಿಸಿದೆ. ಸೋಮವಾರದ ಪಂದ್ಯದಲ್ಲಿ ಬಾಂಗ್ಲಾ ತಂಡ ಕೆನಡಾವನ್ನು 66 ರನ್ನುಗಳಿಂದ ಕೆಡವಿತು.

Advertisement

ಮೊದಲು ಬ್ಯಾಟಿಂಗ್‌ ನಡೆಸಿದ ಬಾಂಗ್ಲಾದೇಶ ತೌಹಿದ್‌ ಹೃದಯ್‌ ಅವರ ಆಕರ್ಷಕ 122 ರನ್‌ ಸಾಹಸದಿಂದ 8 ವಿಕೆಟಿಗೆ 264 ರನ್‌ ಪೇರಿಸಿತು. ಜವಾಬಿತ್ತ ಕೆನಡಾ 49.3 ಓವರ್‌ಗಳಲ್ಲಿ 198 ರನ್ನಿಗೆ ಕುಸಿಯಿತು. ಈ ಕೂಟದಲ್ಲಿ ಈ ವರೆಗೆ 2 ಪಂದ್ಯವಾಡಿದ ಹಾಗೂ ಎರಡರಲ್ಲೂ ಗೆಲುವು ಕಂಡ ಏಕೈಕ ತಂಡವೆಂಬ ಹೆಗ್ಗಳಿಕೆ ಬಾಂಗ್ಲಾದೇಶದ್ದು.

ಆರಂಭಕಾರ ಪಿನಾಕ್‌ ಘೋಷ್‌ ಅವರನ್ನು ಶೂನ್ಯಕ್ಕೆ ಕಳೆದುಕೊಂಡ ಬಳಿಕ ಮೊಹಮ್ಮದ್‌ ನೈಮ್‌, ತೌಹಿದ್‌ ಹೃದಯ್‌ ಮತ್ತು ಆಫಿಫ್ ಹುಸೇನ್‌ ಸೇರಿಕೊಂಡು ತಂಡವನ್ನು ಆಧರಿಸಿದರು. ಇವರಲ್ಲಿ ತೌಹಿದ್‌ 126 ಎಸೆತಗಳಿಂದ 122 ರನ್‌ ಬಾರಿಸಿದರೆ (9 ಬೌಂಡರಿ, 1 ಸಿಕ್ಸರ್‌), ನೈಮ್‌ 47 ರನ್‌ ಹಾಗೂ ಆಫಿಫ್ 50 ರನ್‌ ಕೊಡುಗೆ ಸಲ್ಲಿಸಿದರು. ಕೆನಡಾದ ಮಧ್ಯಮ ವೇಗಿ ಫೈಸಲ್‌ ಜಮಖಂಡಿ 5 ವಿಕೆಟ್‌ ಉಡಾಯಿಸಿದ್ದು ವಿಶೇಷ.

ಕೆನಡಾ ಪರ ನಾಯಕ ಅಸ್ಲಾìನ್‌ ಖಾನ್‌ ವನ್‌ಡೌನ್‌ನಲ್ಲಿ ಬಂದು 63 ರನ್‌ ಬಾರಿಸಿದರು. ಬೌಲಿಂಗಿನಲ್ಲೂ ಮಿಂಚಿದ ಆಫಿಫ್ ಹುಸೇನ್‌ 5 ವಿಕೆಟ್‌ ಹಾರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next