Advertisement

2002ರ ಹತ್ಯೆ: 23 ಮಂದಿಗೆ ಬಾಂಗ್ಲಾ ಕೋರ್ಟ್‌ ಮರಣದಂಡನೆ

04:45 PM May 17, 2017 | Team Udayavani |

ಢಾಕಾ : 2002ರಲ್ಲಿ  ಆಳುವ ಆವಾಮಿ ಲೀಗ್‌ ಹಾಗೂ ಅದರ ವಿದ್ಯಾರ್ಥಿ ದಳದ ನಾಲ್ಕು ಕಾರ್ಯಕರ್ತರನ್ನು ಹತ್ಯೆಗೈದ ಅಪರಾಧಕ್ಕಾಗಿ ಬಾಂಗ್ಲಾದೇಶ ನ್ಯಾಶನಲಿಸ್ಟ್‌ ಪಾರ್ಟಿ ವಿರೋಧ ಪಕ್ಷದ ಓರ್ವ ನಾಯಕನ ಸಹಿತ ಒಟ್ಟು 23 ಮಂದಿಗೆ ಬಾಂಗ್ಲಾ ಕೋರ್ಟ್‌ ಮರಣ ದಂಡನೆ ಶಿಕ್ಷೆಯನ್ನು ವಿಧಿಸಲಾಗಿದೆ.

Advertisement

ನಾರಾಯಣಗಂಜ್‌ನ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಶನ್ಸ್‌ ನ್ಯಾಯಾಧೀಶ ಕಮ್ರುನ್ನಹಾರ್‌ ಅವರು ಇಂದು ಬುಧವಾರ 23 ಮಂದಿಗೆ ಮರಣ ದಂಡನೆ ವಿಧಿಸುವ ತೀರ್ಪನ್ನು ಪ್ರಕಟಿಸಿದರು. 

ಮರಣ ದಂಡನೆಗೆ ಶಿಕ್ಷೆಗೆ ಗುರಿಯಾಗಿರುವ 23 ಮಂದಿಯ ಪೈಕಿ ನಾಲ್ವರು ತಲೆಮರೆಸಿಕೊಂಡಿದ್ದಾರೆ ಎಂದು ಡೇಲಿ ಸ್ಟಾರ್‌ ಪತ್ರಿಕೆ ವರದಿಮಾಡಿದೆ. 

ಬಾಂಗ್ಲಾದೇಶ್‌ ನ್ಯಾಶನಲಿಸ್ಟ್‌ ಪಾರ್ಟಿ (ಬಿಎನ್‌ಪಿ) ಇದರ ಗೋಪಾಲ್ದಿ ಘಟಕದ ಅಧ್ಯಕ್ಷ ಅಬುಲ್‌ ಬಷರ್‌ ಕಾಶು ಸಹಿತ ಮರಣ ದಂಡನೆಗೆ ಶಿಕ್ಷೆಗೆ ಗುರಿಯಾದ ಉಳಿದ 19 ಮಂದಿ ಇಂದು ತೀರ್ಪು ಪ್ರಕಟವಾದಾಗ ನ್ಯಾಯಾಲಯದಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next