Advertisement

ಏಕದಿನ ಪಂದ್ಯ: ಐರ್ಲೆಂಡ್‌ ವಿರುದ್ದ ಭರ್ಜರಿ ಗೆಲುವು ಸಾಧಿಸಿದ ಬಾಂಗ್ಲಾ

11:14 PM Mar 18, 2023 | Team Udayavani |

ಶಿಲೆಟ್‌ (ಬಾಂಗ್ಲಾದೇಶ): ಪ್ರವಾಸಿ ಐರ್ಲೆಂಡ್‌ ಎದುರಿನ ಮೊದಲ ಏಕದಿನ ಪಂದ್ಯದಲ್ಲಿ ಬಾಂಗ್ಲಾದೇಶ 183 ರನ್ನುಗಳ ಭರ್ಜರಿ ಗೆಲುವು ಸಾಧಿಸಿದೆ.

Advertisement

ಬಾಂಗ್ಲಾ 8 ವಿಕೆಟಿಗೆ 338 ರನ್‌ ಪೇರಿಸಿದರೆ, ಐರ್ಲೆಂಡ್‌ 30.5 ಓವರ್‌ಗಳಲ್ಲಿ 155ಕ್ಕೆ ಆಲೌಟ್‌ ಆಯಿತು.

ಬಾಂಗ್ಲಾದ ಬೃಹತ್‌ ಮೊತ್ತಕ್ಕೆ ಕಾರಣ ರಾದವರೆಂದರೆ ಶಕಿಬ್‌ ಅಲ್‌ ಹಸನ್‌ ಮತ್ತು ಮೊದಲ ಪಂದ್ಯ ಆಡಿದ ತೌಹಿದ್‌ ಹೃದಯ್‌. ಇವರಿಬ್ಬರೂ ಕ್ರಮವಾಗಿ 93 ಮತ್ತು 92 ರನ್‌ ಮಾಡಿದರು.

ಬೌಲಿಂಗ್‌ನಲ್ಲಿ ಮಿಂಚಿದವರೆಂದರೆ ಇಬಾದತ್‌ ಹುಸೇನ್‌ (42ಕ್ಕೆ 4), ನಾಸುಮ್‌ ಅಹ್ಮದ್‌ (43ಕ್ಕೆ 3) ಮತ್ತು ತಸ್ಕಿನ್‌ ಅಹ್ಮದ್‌ (15ಕ್ಕೆ 2).

Advertisement

Udayavani is now on Telegram. Click here to join our channel and stay updated with the latest news.

Next