Advertisement
ಇತಿಹಾಸಕ್ಕೆ ಹೋಗುವುದಾದರೆ, ಭಾರತಕ್ಕೆ ಸ್ವಾತಂತ್ರ್ಯ ಬರುವ ಮುನ್ನ ಈ ಭಾಗದಲ್ಲಿ ಹಿಂದೂಗಳ ಸಂಖ್ಯೆ ಒಟ್ಟಾರೆ ಜನಸಂಖ್ಯೆಯ ಶೇ.30ರಷ್ಟಿತ್ತು. ಆದರೆ ಈಗ ಹಿಂದೂ, ಕ್ರೈಸ್ತರು ಮತ್ತು ಬೌದ್ಧರನ್ನು ಸೇರಿಸಿ ಶೇ.8ರಷ್ಟಿದೆ. ಈ 75 ವರ್ಷಗಳಲ್ಲಿ ಇವರೆಲ್ಲ ಎಲ್ಲಿ ಹೋದರು ಎಂಬ ಪ್ರಶ್ನೆಗೆ ಸಿಗುವ ಉತ್ತರ, ಆಗಾಗ್ಗೆ ನಡೆಯುತ್ತಿರುವ ನರಮೇಧಗಳು ಮತ್ತು ಹೆಚ್ಚಿನವರು ಭಾರತಕ್ಕೆ ಪಲಾಯನ ಮಾಡಿರುವುದು.
Related Articles
Advertisement
ಇದನ್ನೂ ಓದಿ:ಬಾಂಗ್ಲಾ ಹಿಂದುಗಳ ರಕ್ಷಣೆಗೆ ಸಿಎಎ ಬೇಕು: ಕಾಂಗ್ರೆಸ್ ನಾಯಕ ಮಿಲಿಂದ್ ದೇವ್ರಾ!
ಈ ಘಟನೆಗಳ ಸಂಬಂಧವಾಗಿಯೇ ನೆಹರೂ ಸಂಪುಟದಲ್ಲಿ ಕ್ಯಾಬಿನೆಟ್ ದರ್ಜೆಯ ಸಚಿವರಾಗಿದ್ದ ಡಾ| ಶ್ಯಾಮ್ ಪ್ರಸಾದ್ ಮುಖರ್ಜಿ ಅವರು, ನೆಹರೂ ಅವರ ಮುಂದೆ ಪೂರ್ವ ಪಾಕಿಸ್ಥಾನ ಮತ್ತು ಭಾರತದ ನಡುವೆ ಜನರ ಪರಸ್ಪರ ಸ್ಥಳಾಂತರ ಮತ್ತು ಇಲ್ಲಿಗೆ ಬಂದ ಹಿಂದೂಗಳಿಗಾಗಿ ಭೂಮಿಯನ್ನು ಕೇಳುವಂತೆ ಸಲಹೆ ನೀಡಿದ್ದರು. ಆದರೆ ನೆಹರೂ ಇದಕ್ಕೆ ಒಪ್ಪಿಗೆ ನೀಡಿರಲಿಲ್ಲ. ಆದರೆ ಪಶ್ಚಿಮ ಬಂಗಾಲದಲ್ಲಿ ಮುಸ್ಲಿಮರ ಮೇಲೆ ದಾಳಿಯಾದ ಮೇಲೆ ನೆಹರೂ ಮತ್ತು ಪಾಕ್ ಪ್ರಧಾನಿ ಲಿಯಾಖತ್ ಅಲಿ ಖಾನ್ ಪರಸ್ಪರ ಒಪ್ಪಂದಕ್ಕೆ ಸಹಿ ಹಾಕಿದರು. ಈ ಒಪ್ಪಂದವನ್ನು ವಿರೋಧಿಸಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಶ್ಯಾಮ್ ಪ್ರಸಾದ್ ಮುಖರ್ಜಿ ಅವರು ಜನಸಂಘವನ್ನು ಕಟ್ಟಿದರು.
ಮುಖರ್ಜಿ ಅವರ ರಾಜೀನಾಮೆ ಅನಂತರ ಪಶ್ಚಿಮ ಬಂಗಾಲದವರೇ ಆದ ಕೆ.ಸಿ. ನಿಯೋಗಿ ಅವರೂ ಒಪ್ಪಂದ ವಿರೋಧಿಸಿ ರಾಜೀನಾಮೆ ಸಲ್ಲಿಸಿದರು. ಈ ಒಪ್ಪಂದದಂತೆ ಪೂರ್ವ ಪಾಕಿಸ್ಥಾನದಲ್ಲಿ ಹಿಂದೂಗಳಿಗೆ ರಕ್ಷಣೆ ಸಿಗಲೇ ಇಲ್ಲ. ಅಲ್ಲಿಂದ ಭಾರತಕ್ಕೆ ಬರುವ ಹಿಂದೂಗಳ ಸಂಖ್ಯೆಯೂ ಹೆಚ್ಚಾಯಿತು. ಜತೆಗೆ ಅಲ್ಲಿ ಹಿಂದೂಗಳ ನರಮೇಧವೂ ಮುಂದುವರಿಯಿತು. ಆದರೆ ನೆಹರೂ ಅವರು ತಮ್ಮ ಒಪ್ಪಂದವನ್ನೇ ನಂಬಿಕೊಂಡು ಕುಳಿತರು.
ಆದರೆ ಇದು ಎಂದಿಗೂ ಜಾರಿಯಾಗಲೇ ಇಲ್ಲ. ಪರಸ್ಪರ ದೇಶಗಳಲ್ಲಿನ ಅಲ್ಪಸಂಖ್ಯಾಕರ ರಕ್ಷಣೆಗಾಗಿ ಈ ಒಪ್ಪಂದಕ್ಕೆ ಸಹಿ ಹಾಕಿದರೂ ಪಾಕಿಸ್ಥಾನ ಸರಕಾರವೇ ಈ ಒಪ್ಪಂದವನ್ನು ಉಲ್ಲಂಘನೆ ಮಾಡಿತು. ಇದಕ್ಕೆ ಬಹುದೊಡ್ಡ ಉದಾಹರಣೆ ಎಂದರೆ 1971ರಲ್ಲಿ ಪಾಕಿಸ್ಥಾನ ಸೇನೆಯೇ ಬಾಂಗ್ಲಾದಲ್ಲಿ ನಡೆಸಿದ ಹಿಂದೂಗಳ ನರಮೇಧ. ಈ ವೇಳೆ ಸುಮಾರು 10 ಸಾವಿರ ಹಿಂದೂಗಳನ್ನು ಹತ್ಯೆ ಮಾಡಲಾಯಿತು ಎಂಬ ವರದಿಗಳಿವೆ.
ಇದಾದ ಬಳಿಕವೂ ಕೆಲವೊಮ್ಮೆ ಹಿಂದೂಗಳ ಸ್ಥಿತಿ ಉತ್ತಮವಾಗಿರುತ್ತದೆ, ಕೆಲವೊಮ್ಮೆ ಈಗ ಉದ್ಭವಿಸಿರುವಂಥ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.
-ತಥಾಗತ ರಾಯ್ತ್ರಿಪುರಾದ ಮಾಜಿ ರಾಜ್ಯಪಾಲರು