Advertisement
“ಟೆಸ್ಟ್ ಚಾಂಪಿಯನ್‌ಶಿಪ್ ಅವಧಿ ಯನ್ನು ವಿಸ್ತರಿಸದೇ ಹೋದರೆ ನಮಗೆ ಆ 8 ಟೆಸ್ಟ್ ಪಂದ್ಯಗಳನ್ನು ಆಡುವ ಅವಕಾಶ ಸಿಗದು. ಇದರಿಂದ ಭಾರೀ ನಷ್ಟವಾಗಲಿದೆ’ ಎಂಬುದಾಗಿ ಬಿಸಿಬಿ ಕ್ರಿಕೆಟ್ ಆಪರೇಶನ್ಸ್ ಚೇರ್ಮನ್ ಅಕ್ರಂ ಖಾನ್ ಹೇಳಿದ್ದಾರೆ.
2 ವರ್ಷಗಳಲ್ಲಿ ಮುಗಿಯಬೇಕಿ ರುವ ಟೆಸ್ಟ್ ಚಾಂಪಿಯನ್‌ಶಿಪ್ 2019ರ ಜುಲೈನಲ್ಲಿ ಆರಂಭವಾಗಿತ್ತು. ಆದರೆ ಕೋವಿಡ್-19ದಿಂದಾಗಿ ಅಂತಾರಾ ಷ್ಟ್ರೀಯ ಕ್ರಿಕೆಟಿನ ವೇಳಾಪಟ್ಟಿಯೇ ಅಸ್ತವ್ಯಸ್ತವಾಗಿದೆ. ಇದರಿಂದ ಬಾಂಗ್ಲಾ ದೇಶಕ್ಕೆ 8 ಟೆಸ್ಟ್ ನಷ್ಟವಾಗಿದೆ. ಇದರಲ್ಲಿ ಒಂದು ಪಂದ್ಯವನ್ನು ಪಾಕಿಸ್ಥಾನದಲ್ಲಿ ಆಡಬೇಕಿತ್ತು. ಉಳಿದಂತೆ ಆಸ್ಟ್ರೇಲಿಯ ವಿರುದ್ಧ 2, ಬಳಿಕ ನ್ಯೂಜಿಲ್ಯಾಂಡ್ ವಿರುದ್ಧ 2 ಟೆಸ್ಟ್ ಹಾಗೂ ಶ್ರೀಲಂಕಾ ವಿರುದ್ಧ 3 ಟೆಸ್ಟ್ ಪಂದ್ಯಗಳನ್ನು ಆಡುವ ಕಾರ್ಯಕ್ರಮವಿತ್ತು. ಆರು ಟೆಸ್ಟ್‌ಗಳ ಸರಣಿ
ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ನಿಯಮದಂತೆ ತಂಡವೊಂದು 6 ಟೆಸ್ಟ್ ಸರಣಿಗಳಲ್ಲಿ ಪಾಲ್ಗೊಳ್ಳಬೇಕಿದೆ. ಇದರಲ್ಲಿ 3 ಸರಣಿ ತವರಿನಲ್ಲಿ, 3 ಸರಣಿ ವಿದೇಶದಲ್ಲಿ ನಡೆಯಲಿದೆ. 2021ರ ಮಾರ್ಚ್ 31ಕ್ಕೆ ಸರಣಿ ಅಂತ್ಯಗೊಳ್ಳಲಿದೆ. ಈ ಅವಧಿಯಲ್ಲಿ ಒಟ್ಟು 72 ಟೆಸ್ಟ್ ಪಂದ್ಯಗಳನ್ನು ನಡೆಸುವುದು ಐಸಿಸಿ ಯೋಜನೆಯಾಗಿತ್ತು. ಸದ್ಯ ಭಾರತ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದೆ. ಆಸ್ಟ್ರೇಲಿಯ ದ್ವಿತೀಯ ಸ್ಥಾನದಲ್ಲಿದೆ.
Related Articles
Advertisement