Advertisement
ಬರುವ ಸೋಮವಾರದಿಂದ ಒಂದು ವಾರದ ತನಕ ದೇಶದಾದ್ಯಂತ ಲಾಕ್ಡೌನ್ ಹೇರಲಾಗಿದೆ.
Related Articles
Advertisement
ದೇಶದಲ್ಲಿ ಕೆಲವು ದಿನಗಳಿಂದ ಕೋವಿಡ್ ರೂಪಾಂತರಿ ಅಲೆಯ ಕಾರಣದಿಂದ ನಿರಂತರವಾಗಿ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರುವುದರಿಂದ ಬಾಂಗ್ಲಾದೇಶ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ ಎಂದು ವರದಿಯಾಗಿದೆ.
ಇನ್ನು, ನಿನ್ನೆ ಒಂದೇ ದಿನ ಬಾಂಗ್ಲಾದೇಶದಲ್ಲಿ 6,830 ಹೊಸ ಕೋವಿಡ್ ಪ್ರಕರಣಗಳು ದಾಖಲಾಗುವುದರ ಮೂಲಕ ದೇಶದಲ್ಲಿನ ಒಟ್ಟು ಕೋವಿಡ್ ನ ಸಂಖ್ಯೆ 6,24,594ಕ್ಕೆ ಏರಿಕೆಯಾಗಿದ್ದು, ಮಾತ್ರವಲ್ಲದೇ, 50 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ಅಲ್ಲಿನ ಸರ್ಕಾರ ತಿಳಿಸಿದೆ.
ಸೋಂಕಿನ ಬಗ್ಗೆ ಅಭಿಪ್ರಾಯ ತಿಳಿಸಿದ ತಜ್ಞರು, ಸೋಂಕಿನ ಪರಿಸ್ಥಿತಿ ತುಂಬಾ ಗಂಭೀರವಾಗಿದೆ. ಹರಡುವಿಕೆಯನ್ನು ನಿಯಂತ್ರಿಸಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ, ಸೋಂಕು ಸಾವಿನ ಪ್ರಮಾಣ ಮತ್ತಷ್ಟು ಹೆಚ್ಚಾಗುತ್ತವೆ ಎಂದು ಎಚ್ಚರಿಸಿದ್ದಾರೆ.
ಓದಿ : ಮೂಡಬಿದಿರೆ, ಬಜಪೆ, ಬೆಳ್ತಂಗಡಿ ಸರಣಿ ದರೋಡೆ ಪ್ರಕರಣ: 9 ಮಂದಿ ಆರೋಪಿಗಳು ಪೊಲೀಸರ ಬಲೆಗೆ