Advertisement

ಬಾಂಗ್ಲಾ ಹಿಂದುಗೆ ಬಹುಪತ್ನಿತ್ವ; ವಿಚ್ಛೇದಿತನಿಗೆ ಪುನರ್‌ ವಿವಾಹ ಇಲ್ಲ

03:24 PM Aug 16, 2017 | udayavani editorial |

ನ್ಯೂಯಾರ್ಕ್‌ : ಬಾಂಗ್ಲಾದೇಶದಲ್ಲಿ ಚಾಲ್ತಿಯಲ್ಲಿರುವ ಹಿಂದೂ ವಿವಾಹ ಪದ್ದತಿಗಳಲ್ಲಿನ ಕೆಲವು ಅಂಶಗಳು ಭಾರತದಲ್ಲಿನ ಮುಸ್ಲಿಂ ವಿವಾಹ ಪದ್ಧತಿಗಳನ್ನು ಪ್ರತಿಬಿಂಬಿಸುತ್ತವೆ ಎಂದು ಅಮೆರಿಕ ಸರಕಾರದ ವರದಿಯೊಂದು ಹೇಳಿದೆ.

Advertisement

ಬಾಂಗ್ಲಾದೇಶದಲ್ಲಿನ ಹಿಂದೂ ಪುರುಷರಿಗೆ  ಬಹುಪತ್ನಿತ್ವಕ್ಕೆ ಅವಕಾಶವಿದೆ; ಆದರೆ ವಿಚ್ಛೇದಿತರು ಮರು ಮದುವೆಯಾಗುವುದಕ್ಕೆ ಅವಕಾಶ ಇರುವುದಿಲ್ಲ ಎಂದು ವಾಷಿಂಗ್ಟನ್‌ನಲ್ಲಿಂದು ಬಿಡುಗಡೆ ಮಾಡಲಾದ 2016ರ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ವರದಿಯ ಹೇಳಿದೆ. ವಿವಿಧ ದೇಶಗಳಲ್ಲಿನ ಧಾರ್ಮಿಕ ಸಮೂಹಗಳಲ್ಲಿ ಚಾಲ್ತಿಯಲ್ಲಿರುವ ವಿವಾಹ ಕಾನೂನುಗಳನ್ನು ಈ ವರದಿಯು ವಿಶ್ಲೇಷಿಸಿದೆ.

“ಹಿಂದೂ ಪೌರ ಕಾನೂನಿನ ಪ್ರಕಾರ ಹಿಂದೂ ಪುರುಷರು ಹಲವು ಪತ್ನಿಯರನ್ನು ಹೊಂದಬಹುದಾಗಿದೆ; ಆದರೆ ವಿಚ್ಛೇದನಕ್ಕೆ ಅವಕಾಶವಿಲ್ಲ’ ಎಂದು ವರದಿ ಹೇಳಿದೆ. 

ಬೌದ್ಧ ಧರ್ಮೀಯರಿಗೆ ಹಿಂದೂ ಕಾನೂನು ಅನ್ವಯವಾಗುತ್ತದೆ ಹಾಗೂ ಹಿಂದೂ ಮತ್ತು ಬೌದ್ಧ ಧರ್ಮೀಯ ವಿಚ್ಛೇದಿತರು ಕಾನೂನುಬದ್ಧವಾಗಿ ಪುನರ್‌ ವಿವಾಹವಾಗುವಂತಿಲ್ಲ. ಹಿಂದೂ ಪೌರ ಕಾನೂನಿನ ಪ್ರಕಾರ ಮಹಿಳೆಯರಿಗೆ ಆಸ್ತಿಪಾಸ್ತಿಗಳ ಉತ್ತರಾಧಿಕಾರತ್ವ ಇರುವುದಿಲ್ಲ  ಎಂದು ವರದಿ ಹೇಳಿದೆ. 

Advertisement

Udayavani is now on Telegram. Click here to join our channel and stay updated with the latest news.

Next