Advertisement

ಜನತಾ ಕರ್ಫ್ಯೂಗೆ ಬಂಗಾರಪೇಟೆ ಸಂಪೂರ್ಣ ಸ್ಥಬ್ದ

07:39 PM Mar 22, 2020 | Lakshmi GovindaRaj |

ಬಂಗಾರಪೇಟೆ: ಕೊರೊನಾ ತಡೆಗೆ ಭಾನುವಾರ ನಡೆದ ಜನತಾ ಕರ್ಫ್ಯೂಗೆ ತಾಲೂಕಿನಲ್ಲಿ ನೂರರಷ್ಟು ಬೆಂಬಲ ವ್ಯಕ್ತವಾಗಿದೆ. ಎಂದೂ ಕಾಣದ ಬಂದ್‌ ಭಾನುವಾರ ನಡೆದಿದೆ. ಬಸ್‌ ಸಂಚಾರ, ಅಂಗಡಿ -ಮುಗ್ಗಟ್ಟುಗಳು ಸಂಪೂರ್ಣವಾಗಿ ಮುಚ್ಚುವುದರೊಂದಿಗೆ ಜನರು ಸಹ ಬರದೇ ಇಡೀ ಬಂಗಾರಪೇಟೆಯೇ ಸ್ಥಬ್ದವಾಗಿದೆ.

Advertisement

ಬಸ್‌ ಸಂಚಾರವಿಲ್ಲ: ಪಟ್ಟಣದಲ್ಲಿ ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ಬಸ್‌ಗಳ ಸಂಚಾರ ಸಂಪೂರ್ಣವಾಗಿ ನಿಲ್ಲಿಸಲಾಗಿತ್ತು. ಸಾರಿಗೆ ಇಲಾಖೆಯ ಬಸ್‌ ನಿಲ್ದಾಣದಲ್ಲಿ ಸಿಬ್ಬಂದಿಯೂ ಇರಲಿಲ್ಲ. ಪುರಸಭೆಯ ಖಾಸಗಿ ಬಸ್‌ ನಿಲ್ದಾಣದಲ್ಲಿಯೂ ಯಾವುದೇ ಬಸ್‌ ಕಣ್ಣಿಗೆ ಕಾಣಲೇ ಇಲ್ಲ. ದ್ವಿಚಕ್ರ ವಾಹನದಲ್ಲಿ ಜನರು ಸಂಚಾರ ಕಡಿಮೆ ಇತ್ತು. ಗ್ರಾಮೀಣ ಪ್ರದೇಶದಲ್ಲಿ ಸಾಮನ್ಯವಾಗಿ ಆಟೋ ಸಂಚಾರ ಇರುತ್ತಿತ್ತು. ಆದರೆ, ಜನತಾ ಕರ್ಫ್ಯೂಗೆ ಬೆಂಬಲಿ ಆಟೋ ಎಲ್ಲೂ ಕಾಣಿಸಿಕೊಂಡಿಲ್ಲ. ಗ್ರಾಮೀಣ ಪ್ರದೇಶದಿಂದ ಸಾಮಾನ್ಯರು ಪಟ್ಟಣಕ್ಕೆ ಬರಲೇ ಇಲ್ಲ.

ರೈಲುಗಾಡಿಗಳ ಬರಲೇ ಇಲ್ಲ: ರೈಲು ಸಂಚಾರದಲ್ಲಿ ಬೆಂಗಳೂರು ಬಿಟ್ಟರೆ ನಂತರ ಬಂಗಾರಪೇಟೆ ರೈಲ್ವೆ ಜಂಕ್ಷನ್‌ ಹೆಚ್ಚು ರೈಲುಗಳು ಓಡಾಡುವ ಪ್ರಮುಖ ರೈಲ್ವೆ ನಿಲ್ದಾಣ. ಈ ರೈಲ್ವೆ ನಿಲ್ದಾಣದಲ್ಲಿ ಕನಿಷ್ಠ ಒಬ್ಬ ಪ್ರಯಾಣಿಕನೂ ಕಾಣಿಸಿಗಲ್ಲಿಲ್ಲ. ರೈಲ್ವೆ ಟಿಕೆಟ್‌ ಕೌಂಟರ್‌ ಸೇರಿದಂತೆ ರೈಲ್ವೆ ನಿಲ್ದಾಣದ ಆವರಣದಲ್ಲಿರುವ ಅಂಗಡಿ-ಮುಗ್ಗಟ್ಟುಗಳನ್ನು ಸಂಪೂರ್ಣ ಮುಚ್ಚಲಾಗಿತ್ತು. ಕಾಕಿನಾಡ ತಿರುಪತಿ ರೈಲ್ವೆಗಾಡಿ ಶನಿವಾರ ಆಗಮಿಸಿದ್ದು,

ಈ ರೈಲುಗಾಡಿ ಮತ್ತೆ ಕಾಕಿನಾಡಗೆ ವಾಪಸ್ಸಾಗಿದ್ದು, ಬಿಟ್ಟರೆ ಉಳಿದಂತೆ ಯಾವುದೇ ರೈಲುಗಾಡಿಗಳು ಸಂಚಾರ ಮಾಡಿಲ್ಲ. ಬಂಗಾರಪೇಟೆ ರೈಲೆº ನಿಲ್ದಾಣದಲ್ಲಿ ಮಾ.31ರವರೆಗೂ ಯಾವುದೇ ರೈಲು ಸಂಚಾರ ಇಲ್ಲ ಎಂದು ನಾಮಫ‌ಲಕದಲ್ಲಿ ಪ್ರಕಟಿಸಿದರು. ಪ್ರತಿ ದಿನ ಬಂಗಾರಪೇಟೆಯಿಂದ ರಾಜದಾನಿ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ 30 ಸಾವಿರ ಜನರಿಗೆ ಬ್ರೇಕ್‌ ಹಾಕಲಾಗಿದೆ.

ಅಂಗಡಿ-ಮುಗ್ಗಟ್ಟು ಬಂದ್‌: ಪಟ್ಟಣದಲ್ಲಿ ನಿತ್ಯ ಜನರು ಸೇರುತ್ತಿದ್ದ ಪ್ರಮುಖ ಬಜಾರ್‌ ರಸ್ತೆಯಲ್ಲಿ ಅಂಗಡಿಗಳು ತೆರೆದಿರಲ್ಲಿಲ್ಲ. ಯುಗಾದಿ ಹತ್ತಿರ ಇರುವುದರಿಂದ ಅಪಾರ ಸಂಖ್ಯೆಯಲ್ಲಿ ವ್ಯಾಪಾರ ಮಾಡಲು ಜಮಾಯಿಸುತ್ತಿದ್ದ ಜನರು, ಜನತಾ ಕರ್ಫ್ಯೂಗೆ ಬೆಂಬಲ ವ್ಯಕ್ತಪಡಿಸಿದರು. ಗಡಿಭಾಗದ ಬಂಗಾರಪೇಟೆಯಲ್ಲಿ ಅಕ್ಕಿ ವ್ಯಾಪಾರಕ್ಕೆ ಹೆಸರುವಾಸಿಯಾಗಿದ್ದರೂ ಕೊರೊನಾದಿಂದ ಸಂಪೂರ್ಣ ಸ್ಥಗಿತಗೊಂಡಿತ್ತು.

Advertisement

ಎಲ್ಲಾ ಮನೆಗಳಿಗೆ ದಿನ ಪತ್ರಿಕೆ ಸೇರಿದರೂ ಮಾರಾಟ ಮಾಡುವವರೇ ಇಲ್ಲವಾಗಿತ್ತು. ಅಲ್ಲಲ್ಲಿ ಹಾಲು ಮಾರಾಟ ಇತ್ತು. ಮಧ್ಯಾಹ್ನದ ವೇಳೆಗೆ ಮುಚ್ಚಲಾಗಿತ್ತು. ಆಸ್ಪತ್ರೆಗಳಿಗೆ ರೋಗಿಗಳು ಬರಲಿಲ್ಲ. ಅಲ್ಲಲ್ಲಿ ಮೆಡಿಕಲ್ಸ್‌ ಶಾಪ್‌ಗ್ಳು ತೆರೆದಿದ್ದವು. ಉಳಿದಂತೆ ಬಾರ್‌ಗಳು, ಹೋಟೆಲ್‌ಗ‌ಳು, ತರಕಾರಿ, ಹಣ್ಣುಹಂಪಲು ಅಂಗಡಿಗಳು ಸೇರಿದಂತೆ ಯಾವುದೇ ಅಂಗಡಿಗಳು ತೆರೆಯದೇ ಬಂದ್‌ಗೆ ಸಹಕಾರ ನೀಡಿದ್ದರು.

ಇಂದಿರಾ ಕ್ಯಾಂಟೀನ್‌ ತೆರೆದಿತ್ತು: ಪಟ್ಟಣದ ಹೃದಯಾಭಾಗದಲ್ಲಿರುವ ಇಂದಿರಾ ಕ್ಯಾಂಟೀನ್‌ ಒಂದು ವಾರದಿಂದ ಮುಚ್ಚಲಾಗಿತ್ತು. ಆದರೆ, ಜನತ ಕಫ್ಯೂಗೆ ಇಂದಿರಾ ಕ್ಯಾಂಟೀನ್‌ ಮೇಲಾಧಿಕಾರಿಗಳ ಆದೇಶದಂತೆ ತೆರೆಯಲಾಗಿತ್ತು. ಭಿಕ್ಷುಕರು, ಅಲೆಮಾರಿಗಳು ಸೇರಿದಂತೆ ಹೋಟೆಲ್‌ನಿಂದಲೇ ಊಟ ಮಾಡುವ ಜನರಿಗೆ ಸಹಕಾರಿಯಾಗಿ ಈ ಕೆಲಸ ಮಾಡಲಾಗಿದೆ. ಅದರೆ, ಇಲ್ಲಿ ಊಟ ಮಾಡುವವರು ಹತ್ತಾರು ಜನರು ಬರಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next