Advertisement

ತಟ್ಟೆ, ಲೋಟದಲ್ಲೇ  ಮಾರಕಾಸ್ತ್ರ ತಯಾರಿ

06:16 PM Jul 11, 2021 | Team Udayavani |

ಬೆಂಗಳೂರು: ಇತ್ತೀಚಿನ ಅಪರಾಧ ಪ್ರಕರಣಗಳಲ್ಲಿಜೈಲುಗಳೇ ಸಂಚಿನ ಹಾಟ್‌ ಸ್ಪಾಟ್‌ ಆಗಿದ್ದು, ಜತೆಗೆಜೈಲಿನಲ್ಲಿ ಅಕ್ರಮವಾಗಿ ಮೊಬೈಲ್‌, ಮಾದಕ ವಸ್ತು,ಸಿಗರೇಟ್‌ ಬಳಕೆ ಬಗ್ಗೆ ದೂರುಗಳ ಬರುತ್ತಿದ್ದ ಹಿನ್ನೆಲೆಯಲ್ಲಿ ಕೇಂದ್ರ ಅಪರಾಧ ವಿಭಾಗ(ಸಿಸಿಬಿ) ಪೊಲೀಸರು ಶನಿವಾರ ಬೆಂಗಳೂರಿನ ಪರಪ್ಪನ ಅಗ್ರಹಾರಕಾರಾಗೃಹದ ಮೇಲೆ ದಾಳಿ ನಡೆಸಿದ್ದಾರೆ.

Advertisement

ಮಾದಕ ವಸ್ತು ಪತ್ತೆಗಾಗಿ ಶ್ವಾನ ದಳ ಜತೆ ಸಿಸಿಬಿಜಂಟಿ ಪೊಲೀಸ್‌ ಆಯುಕ್ತ ಸಂದೀಪ್‌ ಪಾಟೀಲ್‌ನೇತೃತ್ವದಲ್ಲಿ100 ಮಂದಿ ಸಿಸಿಬಿ ಪೊಲೀಸರು ದಾಳಿನಡೆಸಿದ್ದಾರೆ. ಬೆಳಗ್ಗೆ ಐದು ಗಂಟೆಯಿಂದ ಮಧ್ಯಾಹ್ನಮೂರು ಗಂಟೆವರೆಗೆ ಜೈಲಿನ ಪ್ರತಿಯೊಂದು ಬ್ಯಾರಕ್‌ಗಳನ್ನು ಶೋಧಿಸಲಾಗಿದೆ.

ಸಿಮ್ಕಾರ್ಡ್‌,ಗಾಂಜಾ ಪತ್ತೆ!: ದಾಳಿ ಸಂದರ್ಭದಲ್ಲಿ ಕುಖ್ಯಾತರೌಡಿಗಳಾದಕುಣಿಗಲ್‌ಗಿರಿ,ಉಳ್ಳಾಲಕಾರ್ತಿಕ್‌, ಕುಳ್ಳ ರಿಜ್ವಾನ್‌, ಬಾಂಬೆ ಸಲೀಂ, ಆಟೋರಾಮ, ಸುಜಿತ್‌ ಭಾರ್ಗವ, ತಿಮ್ಮೇಶ್‌ ಹಾಗೂ ಇತರರಿಂದ ಎರಡು ಮೊಬೈಲ್‌, ನಾಲ್ಕು ಸಿಮ್‌ಕಾರ್ಡ್‌,3 ಪೆನ್‌ಡ್ರೈವ್‌, ಮೆಮೋರಿ ಕಾರ್ಡ್‌, 26 ಚಾಕುಗಳು,7 ಗಾಂಜಾ ಪೈಪ್‌ಗ್ಳು, 200 ಗ್ರಾಂ ಗಾಂಜಾ, 7710ರೂ. ನಗದು ಜಪ್ತಿ ಮಾಡಲಾಗಿದೆ.ಇತ್ತೀಚೆಗೆ ಶಾಸಕ ಆರವಿಂದ್‌ ಬೆಲ್ಲದ್‌ ಅವರುನನ್ನ ದೂರವಾಣಿ ಕ¨ªಲಿಕೆ ಮಾಡುತ್ತಿರುವುದರಜತೆಗೆ ಜೈಲಿನಲ್ಲಿರುವ ವ್ಯಕ್ತಿಯೊಬ್ಬ ನನಗೆದೂರವಾಣಿ ಕರೆ ಮಾಡಿದ್ದ ಎಂದುಆರೋಪಿಸಿದ್ದರು.

ಊಟದ ತಟ್ಟೆ, ಲೋಟಗಳೇ ಮಾರಕಾಸ್ತ್ರಗಳು:ಜೈಲಿನಲ್ಲೇ ಕೆಲ ಅಪರಾಧಿಗಳು ತಮಗೆ ಕೊಡುತ್ತಿದ್ದ ಊಟದ ತಟ್ಟೆ, ಲೋಟಗ ‌ಳಲ್ಲೇ ಮಾರಾಕ ‌ಸ್ತ್ರಗ ‌ಳನ್ನು ಸಿದ್ಧಪಡಿಸಿಕೊಂಡಿದ್ದಾರೆ. ಅವುಗಳಒಂದು ತುದಿಯನ್ನು ಕತ್ತರಿಸಿ ಅರಿತ ಮಾಡಿಚಾಕು ಮಾದರಿಯಲ್ಲಿ ಸಿದ್ಧ± ‌ಡಿಸಿಕೊಂಡಿದ್ದಾರೆ.ಜತೆಗೆ ಆಕ್ಸ್‌ಡ್‌ ಬ್ಲೇಡ್‌, ಚಾಕುಗಳು, ಗಾಂಜಾಸೇದಲು ಚುಟ್ಟ ಕೂಡ ತಯಾರಿಸಿಕೊಂಡಿದ್ದಾರೆಎಂಬುದು ಪತ್ತೆಯಾಗಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.ಕೆಲವು ದಿನಗಳ ಹಿಂದೆ ನಡೆ¨ ‌ ಬಿಬಿಎಂಪಿಮಾಜಿ ಸದಸ್ಯೆ ರೇಖಾ ಕದಿರೇಶ್‌ ಹತ್ಯೆ ಹಾಗೂಗೋವಿಂದಪುರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿಸೈಯದ್‌ ಕರೀಂ ಆಲಿ, ಫೈನಾನಿ Õಯರ್‌ ಮದನ್‌ಕೊಲೆಗೂ ಜೈಲಿನಲ್ಲಿ ಸಂಚು ರೂಪಿÓ ‌ಲಾಗಿತ್ತುಎಂಬುದು ಗೊತ್ತಾಗಿತ್ತು. ಈ ಹಿನ್ನೆÇ ೆಯಲ್ಲಿ ದಾಳಿನಡೆÓ ‌ಲಾಗಿದೆ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next