Advertisement

Bangaluru: ಕೆಲಸಕ್ಕಿದ್ದ ಮನೆಯಿಂದಲೇ ಚಿನ್ನ ಕದ್ದಳು!

01:56 AM Sep 15, 2024 | Team Udayavani |

ಬೆಂಗಳೂರು: ಕೆಲಸ ಮಾಡುತ್ತಿದ್ದ ಮನೆಯಿಂದ ಲಕ್ಷಾಂತರ ರೂ. ಮೌಲ್ಯದ ಚಿನ್ನ, ವಜ್ರ, ಬೆಳ್ಳಿ ವಸ್ತುಗಳನ್ನು ಕಳವುಗೈದ ಬಿಹಾರ ಮೂಲದ ಪಿಂಕಿ ದೇವಿ (30) ಎಂಬಾಕೆಯನ್ನು ವೈಟ್‌ಫೀಲ್ಡ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ. 53.50 ಲಕ್ಷ ರೂ. ಮೌಲ್ಯದ 13 ಗ್ರಾಂ ವಜ್ರ, 570 ಗ್ರಾಂ ಚಿನ್ನಾಭರಣಗಳು ಹಾಗೂ 470 ಗ್ರಾಂ ಬೆಳ್ಳಿ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ವೃತ್ತಿಯಲ್ಲಿ ಸಾಫ್ಟ್ವೇರ್‌ ಎಂಜಿನಿಯರ್‌ ಆಗಿರುವ ವೈಟ್‌ಫೀಲ್ಡ್‌ನ ಚೈತನ್ಯ ಆರ್ಮಡಾಲ್‌ ವಿಲ್ಲಾ ನಿವಾಸಿ ಕೊಡಗು ಮೂಲದ ಆಶಿತಾ ಬಿದ್ದಪ್ಪ ಅವರ ಮನೆಯಲ್ಲಿ 6 ತಿಂಗಳಿಂದ ಪಿಂಕಿ ಕೆಲಸ ಮಾಡಿಕೊಂಡಿದ್ದಳು. ಕಪಾಟಿನಲ್ಲಿರಿಸಿದ್ದ ಚಿನ್ನಾಭರಣ ಕಾಣೆಯಾದ ಹಿನ್ನೆಲೆಯಲ್ಲಿ ಸಿಸಿ ಕೆಮರಾ ಪರಿಶೀಲಿಸಿ ದಾಗ ಪಿಂಕಿ ಕಳವು ಮಾಡುತ್ತಿರುವ ದೃಶ್ಯ ಸೆರೆಯಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next