Advertisement
ದೊಡ್ಡಬಾಣಸವಾಡಿ ನಿವಾಸಿ 25 ವರ್ಷದ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಶಾಸ್ತ್ರೀನಗರ ನಿವಾಸಿ ಪತಿ ಭರತ್ ರೆಡ್ಡಿ, ಅತ್ತೆ , ಮಾವನ ವಿರುದ್ಧ ಹಲ್ಲೆ, ವಂಚನೆ, ಜೀವ ಬೆದರಿಕೆ ಆರೋಪದಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಎಚ್‌ಎಎಲ್ ಪೊಲೀಸರು ಹೇಳಿದರು.
ಸಂತ್ರಸ್ತೆ ಎರಡು ತಿಂಗಳ ಹಿಂದಷ್ಟೇ(ಅ.29) ಶಾಸ್ತ್ರೀನಗರದ ಭರತ್ ರೆಡ್ಡಿ ಎಂಬಾತನನ್ನು ಮದುವೆಯಾಗಿದ್ದರು. ಅ.30ರಂದು ದಂಪತಿಗೆ ಮೊದಲ ರಾತ್ರಿ ಏರ್ಪಡಿಸಲಾಗಿತ್ತು. ಆದರೆ, ಅದೇ ದಿನ ಆರೋಪಿ ಭರತ್ ರೆಡ್ಡಿ ಕಂಠಪೂರ್ತಿ ಮದ್ಯ ಸೇವಿಸಿದ್ದರಿಂದ ಸಂತ್ರಸ್ತೆ ಪತಿಯಿಂದ ಅಂತರ ಕಾಯ್ದುಕೊಂಡಿದ್ದರು. ಈ ವಿಚಾರ ತಿಳಿದ ಆರೋಪಿಯ ತಾಯಿ ಮತ್ತು ತಂದೆ ಸಂತ್ರಸ್ತೆ ಮೇಲೆ ವಾಮಾಚಾರ ಪ್ರಯೋಗ ಮಾಡಿದ್ದಾರೆ. ಅಲ್ಲದೆ, ನ.19ರಂದು ಬೆಳಗ್ಗೆ 7 ಗಂಟೆ ಸುಮಾರಿಗೆ ಪತಿ ಹಾಗೂ ಅತ್ತೆ ಸೇರಿಕೊಂಡು ತನ್ನ ಮೇಲೆ ಹಲ್ಲೆ ನಡೆಸಲು ಸಂಚು ರೂಪಿಸಿದ್ದರು. ಆಗ ಪತಿ ಭರತ್ ರೆಡ್ಡಿ ಕಬ್ಬಿಣದ ರಾಡ್‌ನಿಂದ ಸಂತ್ರಸ್ತೆ ಮೇಲೆ ಹಲ್ಲೆ ನಡೆಸಿದ್ದಾನೆ. ಅತ್ತೆ ಕುತ್ತಿಗೆ ಹಿಸುಕಿ ಹತ್ಯೆಗೈಯಲು ಯತ್ನಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Related Articles
Advertisement
ಈ ನಡುವೆ ಆರೋಪಿ ಭರತ್ ರೆಡ್ಡಿ ಈಗಾಗಲೇ ಜ್ಯೋತಿ ಎಂಬವರ ಜತೆ ಮದುವೆಯಾಗಿದ್ದು, ಈ ವಿಚಾರವನ್ನು ಮುಚ್ಚಿಟ್ಟು ತನ್ನನ್ನು ಎರಡನೇ ಮದುವೆಯಾಗಿ ವಂಚನೆ ಮಾಡಿದ್ದಾರೆ. ಅದರಿಂದ ಮಾನಸಿಕ ಮತ್ತು ದೈಹಿಕವಾಗಿ ಕಿರುಕುಳ ನೀಡಿ ಕಬ್ಬಿಣದ ರಾಡ್‌ನಿಂದ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ ಪತಿ ಸೇರಿ ಮೂವರ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ.
ಆರು ಕೋಟಿ ವೆಚ್ಚ? ಭರತ್ ರೆಡ್ಡಿ ಹಾಗೂ ಸಂತ್ರಸ್ತೆಯ ನಿಶ್ಚಿತಾರ್ಥ ಹಾಗೂ ಮದುವೆ ಸೇರಿ ಬರೋಬ್ಬರಿ ಆರು ಕೋಟಿ ಖರ್ಚು ಮಾಡಲಾಗಿದೆ ಎಂದು ಹೇಳಲಾಗಿದೆ. ಒಂದು ಕೋಟಿ ರೂ. ಮೌಲ್ಯದ ಬೆಂಜ್ ಕಾರು, 5 ಕೆ.ಜಿ ಚಿನ್ನ, ವಜ್ರದ ಒಡವೆ, ಡೈಮಂಡ್ ರಿಂಗ್, ಬ್ರಾಸ್‌ಲೆಟ್ ಸೇರಿ ಬರೋಬರಿ ಆರು ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ತನಿಖೆಕೈಗೊಳ್ಳಬೇಕಿದೆ ಎಂದು ಪೊಲೀಸರು ಹೇಳಿದರು.