Advertisement

ದಾಖಲೆ ಬೆಳವಣಿಗೆ ಕಾಣಲಿದೆ ಬೆಂಗಳೂರು; ಏಷ್ಯಾ-ಪೆಸಿಫಿಕ್‌ ವಲಯದಲ್ಲಿ 2 ನಗರಗಳು ಮಾತ್ರ ಸೇರ್ಪಡೆ

08:00 PM Jan 07, 2023 | Team Udayavani |

ನವದೆಹಲಿ/ಬೆಂಗಳೂರು:ದೇಶದ ಸಿಲಿಕಾನ್‌ ವ್ಯಾಲಿ ಎಂಬ ಹೆಗ್ಗಳಿಕೆ ಪಡೆದುಕೊಂಡಿರುವ ಕರ್ನಾಟಕದ ರಾಜಧಾನಿ ಬೆಂಗಳೂರು ಪ್ರಸಕ್ತ ವರ್ಷ ಏಷ್ಯಾ-ಪೆಸಿಫಿಕ್‌ ವಲಯದಲ್ಲಿ ಅತ್ಯಂತ ಶೀಘ್ರವಾಗಿ ಬೆಳೆಯಲಿರುವ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

Advertisement

“ಆಕ್ಸ್‌ಫ‌ರ್ಡ್‌ ಇಕನಾಮಿಕ್ಸ್‌’ ನಡೆಸಿರುವ ವಿಶೇಷ ಅಧ್ಯಯನದಲ್ಲಿ ಅ ಅಂಶವನ್ನು ಕಂಡುಕೊಳ್ಳಲಾಗಿದೆ. ಶೇ.6ರ ಬೆಳವಣಿಗೆಯನ್ನು ದಾಖಲಿಸಿಕೊಳ್ಳಲಿರುವ ಉದ್ಯಾನನಗರಿ ಜಗತ್ತಿನ ಇತರ ಪ್ರಮುಖ ನಗರಗಳಾಗಿರುವ ಬ್ಯಾಂಕಾಕ್‌, ಶಾಂಘೈ, ಹಾಂಕಾಂಗ್‌, ಟೋಕಿಯೋಗಳಿಗೆ ಸ್ಪರ್ಧೆ ನೀಡುವಂತೆ ಬೆಳವಣಿಗೆ ಕಾಣಲಿದೆ ಎಂದು ಅಧ್ಯಯನದಲ್ಲಿ ಅಭಿಪ್ರಾಯಪಡಲಾಗಿದೆ.

ಬೆಂಗಳೂರಿನ ಜತೆಗೆ ಹೈದರಾಬಾದ್‌ ಕೂಡ ಶೇ.6ರ ದರದಲ್ಲಿ ಶೀಘ್ರವಾಗಿ ಬೆಳವಣಿಗೆ ಕಾಣಲಿದೆ ಎಂದು ಅಧ್ಯಯನದಲ್ಲಿ ಹೇಳಿಕೊಳ್ಳಲಾಗಿದೆ. ದಕ್ಷಿಣ ಭಾರತದ ಎರಡು ಪ್ರಮುಖ ನಗರಗಳು ಈಗಾಗಲೇ ಹಲವು ಕ್ಷೇತ್ರಗಳಲ್ಲಿ ಕೋಟ್ಯಂತರ ರೂ. ಬಂಡವಾಳ ಹೂಡಿಕೆಯ ಆಕರ್ಷಕ ಸ್ಥಾನವಾಗಿದೆ.

ವರದಿಯಲ್ಲಿ ಏನಿದೆ?:
ಏಷ್ಯಾ ಪೆಸಿಫಿಕ್‌ ವಲಯದಲ್ಲಿನ ನಗರಗಳಿಗೆ ಪ್ರಸಕ್ತ ವರ್ಷ ಕಠಿಣ ಸವಾಲುಗಳು ಎದುರಾಗಲಿವೆ. ಇದರ ಹೊರತಾಗಿಯೂ ಕೂಡ ಕೆಲವೊಂದು ಬೆಳ್ಳಿ ರೇಖೆಗಳನ್ನು ಕಾಣುವ ಸಾಧ್ಯತೆಗಳಿವೆ. ಜಗತ್ತಿನಲ್ಲಿ ಆರ್ಥಿಕ ಹಿಂಜರಿತದ ಛಾಯೆಗಳು ಇದ್ದರೂ ಕೆಲವೊಂದು ನಗರಗಳಲ್ಲಿ ಅದಕ್ಕೆ ಸೆಡ್ಡು ಹೊಡೆದು ಕೆಲವು ಕ್ಷೇತ್ರಗಳಲ್ಲಿ ಬೆಳವಣಿಗೆ ದಾಖಲಿಸಲಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇದಲ್ಲದೆ ಸಿಬಿಆರ್‌ಇನ ಏಷ್ಯಾ-ಪೆಸಿಫಿಕ್‌ ವಲಯಕ್ಕೆ ಸಂಬಂಧಿಸಿದಂತೆ ಮಾರುಕಟ್ಟೆಗೆ ಸಂಬಂಧಿಸಿದ ಮಾಹಿತಿಯಲ್ಲಿ ಬೆಂಗಳೂರು ಮೊದಲ ಸ್ಥಾನದಲ್ಲಿದೆ. ಈ ವಲಯದ 11 ನಗರಗಳಿಗೆ ಹೋಲಿಕೆ ಮಾಡಿದರೆ, ಉದ್ಯಾನ ನಗರ ಮೊದಲ ಸ್ಥಾನದಲ್ಲಿದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next