ಅಬುಧಾಬಿ: ಬೆಂಗಳೂರು ಬೌಲರ್ ಗಳ ಮಾರಕ ದಾಳಿಗೆ ತತ್ತರಿಸಿದ ರಾಜಸ್ಥಾನ್ ತಂಡ 6ವಿಕೆಟ್ ಕಳೆದುಕೊಂಡು 154 ರನ್ ಗಳನ್ನು ಪೇರಿಸಿದೆ. ಆ ಮೂಲಕ ಬೆಂಗಳೂರು ಗೆಲುವಿಗೆ 155` ರನ್ ಗಳ ಸವಾಲಿನ ಗುರಿಯನ್ನು ನೀಡಿದೆ.
ಟಾಸ್ ಗೆದ್ದ ಬ್ಯಾಟಿಂಗ್ ಆಯ್ದುಕೊಂಡ ಸ್ಮಿತ್ ಪಡೆಯ ಲೆಕ್ಕಾಚಾರ ಫಲಫ್ರದವಾಗಲಿಲ್ಲ. ಸ್ವತಃ ನಾಯಕ್ ಸ್ಮಿತ್ ಕೇವಲ 5 ರನ್ ಗಳಿಗೆ ಇಸೂರ್ ಉಡಾನ್ ಬೌಲಿಂಗ್ ಗೆ ವಿಕೆಟ್ ಒಪ್ಪಿಸಿದರು. ನಂತರ ಬಂದ ಸಂಜು ಸ್ಯಾಮ್ಸನ್ (4) ಕೂಡ ಒಂದಂಕಿ ದಾಟುವ ಮೊದಲೇ ಚಹಾಲ್ ಬೌಲಿಂಗ್ ನಲ್ಲಿ ಕ್ಯಾಚಿತ್ತು ಪೇವಿಲಿಯನ್ ಸೇರಿದರು.
ಭರವಸೆ ಮೂಡಿಸಿದ್ದ ಜೋಸ್ ಬಟ್ಲರ್ ಕೂಡ 22 ರನ್ ಗಳಿಸಿ ನವದೀಪ್ ಸೈನಿ ಎಸೆತದಲ್ಲಿ ದೇವದತ್ತ್ ಪಡಿಕಲ್ ಗೆ ಕ್ಯಾಚಿತ್ತರು. ಮತ್ತೊಮ್ಮೆ ರಾಬಿನ್ ಉತ್ತಪ್ಪ ನಿರಾಸೆ ಮೂಡಿಸಿದ್ದು ಕೇವಲ 17 ರನ್ ಗಳಿಸಿದರು. ನಂತರ ಬಂದ ಮಹಿಪಾಲ್ ಲುಮ್ರಾರ್ (47) 3 ಸಿಕ್ಸ್ ಸಿಡಿಸಿ ಬೆಂಗಳೂರು ತಂಡಕ್ಕೆ ಅಪಾಯಕಾರಿಯಾಗುವ ಮುನ್ಸೂಚನೆ ನೀಡಿದ್ದರು. ಆದರೇ ಇದಕ್ಕೆ ಚಹಾಲ್ ಅವಕಾಶ ನೀಡಲಿಲ್ಲ. ರಿಯಾನ್ ಪರಾಗ್ ಕೂಡ 16 ರನ್ ಗಳಿಸಿ ಉಡಾನಾಗೆ ವಿಕೆಟ್ ಒಪ್ಪಿಸಿದರು.
ಅಂತಿಮವಾಗಿ ಸಂಕಷ್ಟಕ್ಕೆ ಸಿಲುಕಿದ್ದ ತಂಡಕ್ಕೆ ಆಸರೆಯಾದ ರಾಹುಲ್ ತೇವಾಟಿಯ 12 ಬಾಲ್ ಗಳಲ್ಲಿ ಮೂರು ಸಿಕ್ಸರ್ ಸಹಿತ 24 ರನ್ ಗಳಿಸಿದರೆ, ಜೋಫ್ರಾ ಆರ್ಚರ್ 15 ರನ್ ಗಳಿಸಿ ನಾಟ್ ಔಟ್ ಆಗಿ ಉಳಿದರು. ರಾಜಸ್ಥಾನ ಪಡೆ 20 ಓವರ್ ಗಳಲ್ಲಿ 154 ರನ್ ಗಳಿಸಿತು.
ಆರ್ ಸಿಬಿ ಪರ ಮಿಂಚಿದ ಚಹಾಲ್ 24 ರನ್ ನೀಡಿ 3 ವಿಕೆಟ್ ಪಡೆದರು. ದುಬಾರಿ ಬೌಲಿಂಗ್ ಮಾಡಿದರೂ ಇಸೂರ್ ಉಡಾನಾ 2 ವಿಕೆಟ್ ಗಳಿಸಿದರು. ನವದೀಪ್ ಸೈನಿ 1 ಓವರ್ ಮೇಡನ್ ಮಾಡಿ 1 ವಿಕೆಟ್ ಉರುಳಿಸಿದರು.