Advertisement
ಪ್ರಧಾನಿ ಪ್ರಯಾಣಿಸುವ ಮಾರ್ಗದಲ್ಲಿ ಸಂಚಾರ ದಟ್ಟಣೆಯಾಗುವುದನ್ನು ತಡೆಯಲು ಹಾಗೂ ಸುರಕ್ಷಾ ಕ್ರಮಗಳನ್ನು ಕಾಯ್ದುಕೊಳ್ಳುವ ದೃಷ್ಟಿಯಿಂದ ಶಿಕ್ಷಣ ಇಲಾಖೆಯು ಪೊಲೀಸ್ ಇಲಾಖೆ ಸೂಚನೆಯಂತೆ ಪ್ರಧಾನಿ ಸಂಚರಿಸುವ ಐಐಎಸ್‌ಸಿ, ಗೊರಗುಂಟೆ ಪಾಳ್ಯ, ಸಿಎಂಟಿಐ, ಹೊರ ವರ್ತುಲ ರಸ್ತೆ, ಡಾ ರಾಜ್‌ಕುಮಾರ್ ಸ್ಟುಡಿಯೋ, ಲಗ್ಗೆರೆ, ನಾಯಂಡಹಳ್ಳಿ, ಮೈಸೂರು ರಸ್ತೆ, ಆರ್‌ವಿ ಕಾಲೇಜು, ನಾಗರಭಾವಿ, ಸುಮನಹಳ್ಳಿ ಸೇತುವೆ, ಎಂಸಿಐ ಜಂಕ್ಷನ್, ಗೋವರ್ಧನ್ ಥಿಯೇಟರ್, ಯಶವಂತಪುರ ಮತ್ತು ಜಕ್ಕೂರು ಏರೋಡ್ರಮ್ ಸುತ್ತಮುತ್ತಲಿನಲ್ಲಿ ರಜೆ ನೀಡಿದೆ.
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯವು, ಪ್ರಧಾನಿ ಸಂಚರಿಸುವ ಮಾರ್ಗಗಳು ಮಾತ್ರವಲ್ಲದೆ ಬೆಂಗಳೂರಿನ ತನ್ನ ವ್ಯಾಪ್ತಿಯ ಎಲ್ಲ ವೈದ್ಯಕೀಯ, ದಂತ ವೈದ್ಯಕೀಯ ಮತ್ತು ನರ್ಸಿಂಗ್ ಕಾಲೇಜುಗಳಿಗೆ ರಜೆ ನೀಡಿದೆ. ಸೋಮವಾರ ನಿಗದಿಯಾಗಿದ್ದ ವಿವಿಧ ಪರೀಕ್ಷೆಗಳನ್ನು ಮುಂದೂಡಿದ್ದು, ಶೀಘ್ರ ಪರಿಷ್ಕೃತ ದಿನಾಂಕ ಪ್ರಕಟಿಸುವುದಾಗಿ ತಿಳಿಸಿದೆ.
Related Articles
Advertisement