Advertisement
ನಗರದ ಜಿಲ್ಲಾ ಮಟ್ಟದ ಸರ್ಕಾರಿ ಕಚೇರಿಗಳ ಸಂಕೀರ್ಣದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. 1267379 ಪುರುಷ ಮತದಾರರು, 1188207 ಮಂದಿ ಮಹಿಳಾ ಮತದಾರರು 340 ಇತರೆ ಮತದಾರರು, 281 ಸೇವಾ ಮತದಾರರು ಒಟ್ಟು 2456207 ಮತದಾರರಿದ್ದಾರೆಂದು ತಿಳಿಸಿದರು.
ಮತಗಟ್ಟೆಗಳು ಎಷ್ಟು?: ಕ್ಷೇತ್ರವ್ಯಾಪ್ತಿಯಲ್ಲಿ 2456207 ಮತದಾರರು ತಮ್ಮ ಮತಹಕ್ಕು ಚಲಾಯಿಸಲು 2688 ಮತಗಟ್ಟೆ ಸ್ಥಾಪಿಸಲಾಗಿದೆ. ಈ ಪೈಕಿ 16 ಹೆಚ್ಚುವರಿ ಮತಗಟ್ಟೆ ಸ್ಥಾಪಿಸಲಾಗುತ್ತದೆ. ಕುಣಿಗಲ್‌ನಲ್ಲಿ 266, ರಾಜರಾಜೇಶ್ವರಿ ನಗರ 390, ಬೆಂಗಳೂರು ದಕ್ಷಿಣ 520, ಆನೇಕಲ್ 369, ಮಾಗಡಿ 300, ರಾಮನಗರ 279, ಕನಕಪುರ 298, ಚನ್ನಪಟ್ಟಣದಲ್ಲಿ 266 ಮತಗಟ್ಟೆಗಳು ಸ್ಥಾಪನೆಯಾಗಲಿವೆ ಎಂದು ಹೇಳಿದರು. ಮಸ್ಟರಿಂಗ್, ಡಿ.ಮಸ್ಟರಿಂಗ ಸ್ಥಳಗಳ ವಿವರ: ಮತದಾನಕ್ಕೆ ಮುನ್ನ ಚುನಾವಣಾ ಮತಪೆಟ್ಟಿಗೆ ಸಾಗಿಸುವುದು ಮತ್ತು ಮತದಾನದ ನಂತರ ಮತಗಟ್ಟೆ ಸ್ವೀಕರಿಸುವ ಮಸ್ಟರಿಂಗ್, ಡಿ ಮಸ್ಟರಿಂಗ್ ಕೇಂದ್ರಗಳನ್ನು ಆಯಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲೇ ಸ್ಥಾಪಿಸಲಾಗುವುದು. ಆದರೆ, ಮತ ಎಣಿಕೆ ರಾಮನಗರದ ಅರ್ಚಕರಹಳ್ಳಿಯಲ್ಲಿರುವ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಯಲಿದೆ ಎಂದರು.
Related Articles
Advertisement
ವೆಚ್ಚದ ಮಿತಿ 70 ಲಕ್ಷ ರೂ.: ಈ ಬಾರಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಚುನಾವಣಾ ವೆಚ್ಚವನ್ನು ಚುನಾವಣಾ ಆಯೋಗ ತಲಾ 70 ಲಕ್ಷ ರೂ. ಮಿತಿ ಹೇರಿದೆ. ಚುನಾವಣೆ ವೇಳೆ ರಾಜಕೀಯ ಪಕ್ಷಗಳ ಅಧ್ಯಕ್ಷರು ಹಾಗೂ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ವಾಹನ ಪರವಾನಗಿಯನ್ನು ರಾಮನಗರದ ತಮ್ಮ ಕಚೇರಿಯಲ್ಲಿ ನೀಡಲಾಗುತ್ತದೆ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿಗಳ ಕಚೇರಿ ರಾಮನಗರದ ಜಿಲ್ಲಾಧಿಕಾರಿಗಳ ಕಚೇರಿಯೇ ಆಗಿದೆ ಎಂದು ಸ್ಪಷ್ಟಪಡಿಸಿದರು.
ರಾಜಕೀಯ ಪಕ್ಷಗಳು ಕಾರ್ಯಕ್ರಮಗಳಿಗೆ ಅನುಮತಿ ಕೋರಲು “ಸುವಿಧಾ” ತಂಬ ತಂತ್ರಾಂಶದ ಮೂಲಕ ಅರ್ಜಿ ಸಲ್ಲಿಸಬೇಕಾಗಿದೆ. ಆಯಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಹಾಯಕ ಚುನಾವಣಾಧಿಕಾರಿಗಳ ಕಚೇರಿಯಿಂದ ಅನುಮತಿ ಸಿಗಲಿದೆ ಎಂದರು. ಅಲ್ಲದೇ, ಚುನಾವಣೆಗೆ ಸಂಬಂಧ ಪಟ್ಟ ಮಾಹಿತಿಯನ್ನು ನಾಗರೀಕರು 1950 ಸಂಖ್ಯೆಗೆ ಕರೆ ಮಾಡಿ ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿದ್ದಾರೆ.
ಅಭ್ಯರ್ಥಿಗಳೇ ಗಮನಿಸಿ!: ಚುನಾವಣೆಗೆ ಸ್ಪರ್ಧಿಸುವ ಸಂಬಂಧ ಅಭ್ಯರ್ಥಿ ಭಾರತ ಚುನಾವಣಾ ಆಯೋಗ ನೀಡಿರುವ ಪರಿಷ್ಕೃತ ನಮೂನೆ-26ರಲ್ಲಿ ಪ್ರಮಾಣ ಪತ್ರ ಸಲ್ಲಿಸಬೇಕಾಗಿದೆ. ಸ್ಪರ್ಧಿಸುವ ಅಭ್ಯರ್ಥಿ ಮೇಲೆ ಯಾವುದಾದರೂ ಕ್ರಿಮಿನಲ್ ಮೊಕದ್ದಮ್ಮೆ ದಾಖಲಾಗಿದ್ದರೆ ಆ ಬಗ್ಗೆ ಸಿ-1, ಸಿ-2 ಮತ್ತು ಸಿ-3ರಲ್ಲಿ ಮಾಹಿತಿ ಸಲ್ಲಿಸಬೇಕು. 3 ಬಾರಿ ಪತ್ರಿಕೆ ಮತ್ತು ದೃಶ್ಯ ಮಾಧ್ಯಮಗಳಲ್ಲಿ ಪ್ರಕಟಣೆ ಹೊರಡಿಸಬೇಕು. ಪ್ರಮಾಣ ಪತ್ರದಲ್ಲಿ ಸರ್ಕಾರಕ್ಕೆ ಪಾವತಿಸಬೇಕಾದ ಮೊತ್ತ ಪಾವತಿಸಿ ಸಂಬಂಧಪಟ್ಟ ನಿರಾಕ್ಷೇಪಣಾ ಪತ್ರ ಪಡೆದು ಸಲ್ಲಿಸಬೇಕು. ನಿರಾಕ್ಷೇಪಣ ಪತ್ರ ಅಪೂರ್ಣವಾಗಿದ್ದರೆ ನಾಮಪತ್ರ ತಿರಸ್ಕರಿಸಲಾಗುವುದು.