Advertisement

ನನಗೂ ಭೂ ವ್ಯವಹಾರಕ್ಕೂ ಸಂಬಂಧ ಇಲ್ಲ: ಬೆಂವಿವಿ ಪ್ರೊ.ಮೈಲಾರಪ್ಪ ಸ್ಪಷ್ಟನೆ 

12:07 PM May 06, 2024 | Team Udayavani |

ಬೆಂಗಳೂರು: ಖಾಸಗಿ ಭೂ ವ್ಯವಹಾರಕ್ಕೂ ನನಗೂ ಸಂಬಂಧವಿಲ್ಲ ಕೆಲವರು ನನ್ನ ಮೇಲೆ ಷಡ್ಯಂತ್ರ ರೂಪಿಸಿ ನನ್ನ ತೇಜೋವಧೆ ನಡೆಸಲು ಮುಂದಾಗಿದ್ದು, ಇವರ ವಿರುದ್ಧ ಕಾನೂನಿನ ಹೋರಾಟ ನಡೆಸುತ್ತೇನೆ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಸಮಾಜಶಾಸ್ತ್ರದ ಪ್ರಾಧ್ಯಾಪಕ ಪ್ರೊ.ಬಿ.ಸಿ.ಮೈಲಾರಪ್ಪ ಸ್ಪಷ್ಟನೆ ನೀಡಿದ್ದಾರೆ.

Advertisement

2023ರಲ್ಲಿ ನಡೆದಿರುವ ಪ್ರಕರಣ ಇದಾಗಿದೆ. ಭೂ ಮಾರಾಟಗಾರರು ಮತ್ತು ಭೂ ಖರೀದಿದಾರರು ಹಣ ವ್ಯವಹಾರ ನಡೆಸಿದ್ದಾರೆ. ಇದರ ಮಧ್ಯೆ ಅನವಶ್ಯಕವಾಗಿ ನನ್ನ ಹೆಸರನ್ನು ತಳುಕು ಹಾಕಿದ್ದಾರೆ. ಭೂ ಮಾರಾಟದಾರರ ಪರವಾಗಿ ನಾನು ಖರೀದಿದಾರರ ಜತೆಗೆ ಮಾತನಾಡಿ ಬೆದರಿಕೆ ಹಾಕಿದ್ದೇನೆ ಎಂಬ ಆರೋಪ ಸುಳ್ಳು. ಇದಕ್ಕೆ ಯಾವುದೇ ರೀತಿಯ ಆಧಾರ ಇಲ್ಲ ಎಂದು ಹೇಳಿದ್ದಾರೆ.

ಹೈದ್ರಾಬಾದ್‌ನಲ್ಲಿ ನನ್ನ ಮುಚ್ಚಳಿಕೆ ಪತ್ರಕ್ಕೆ ಸಹಿಬೇಕು ಎಂಬ ಕಾರಣಕ್ಕೆ ಪೊಲೀಸರು ನನ್ನನ್ನು ಅವರ ಸ್ಟೇಷನ್‌ಗೆ ಕರೆದೊಯ್ಯದರು. 40 ವರ್ಷ ನನ್ನ ಶೈಕ್ಷಣಿಕ ಕರ್ತವ್ಯದ ಅವಧಿಯಲ್ಲಿ ನಾನೆಂದಿಗೂ ಈ ರೀತಿಯ ವ್ಯವಹಾರಗಳಲ್ಲಿ ಭಾಗಿಯಾಗಿಲ್ಲ. ನನ್ನ ಮೇಲೆ ಯಾವುದೇ ಕ್ರಿಮಿನಲ್‌ ಕೇಸ್‌ ಇಲ್ಲವೆಂದು ಪೊಲೀಸ್‌ ಇಲಾಖೆಯೇ ನನಗೆ ಪ್ರಮಾಣಪತ್ರ ನೀಡಿದೆ ಎಂದು ತಿಳಿಸಿದ್ದಾರೆ. ಇಂತಹ ವೇಳೆಯಲ್ಲಿ ನನ್ನನ್ನು ವೈಯಕ್ತಿವಾಗಿ ತೇಜೋವಧೆ ಮಾಡುವ ಮೂಲಕ ನಮ್ಮ ಮುಂದಿರುವ ಅವಕಾಶಗಳನ್ನು ತಪ್ಪಿಸುವ ಸಲುವಾಗಿ ಈ ರೀತಿಯ ಷಡ್ಯಂತ್ರ ಮಾಡುತ್ತಿದ್ದು, ಕೆಲವು ಕಿಡಿಗೇಡಿಗಳು ಇದನ್ನು ಮಾಧ್ಯಮಗಳಿಗೆ ಹರಿಬಿಡುತ್ತಿದ್ದಾರೆ. ಇದರಲ್ಲಿ  ಆಧಾರವಿಲ್ಲ ಎಂದು ಸ್ಪಷ್ಟಿಕರಣದಲ್ಲಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next